ವೀರಾಜಪೇಟೆ, ಜು. ೧೦: ವೀರಾಜಪೇಟೆ ಪಟ್ಟಣದ ಸೆಂಟ್ ಆನ್ಸ್ ಪದವಿ ಕಾಲೇಜಿನ ಅಂತಿಮ ಬಿಬಿಎ ವಿಭಾಗದ ವಿದ್ಯಾರ್ಥಿಗಳು ಮೈಸೂರು ಬನ್ನಿಮಂಟಪದಲ್ಲಿರುವ ಜೆ.ಎಸ್.ಎಸ್. ಕಾಲೇಜ್ ಆಫ್ ಹೈಯರ್ ಎಜುಕೇಶನ್ ಅಕಾಡೆಮಿ ಆಂಡ್ ರಿಸರ್ಚ್ ವಿಭಾಗಕ್ಕೆ ಭೇಟಿ ನೀಡಿ ಉದ್ಯಮಶೀಲತೆಯ ಬಗ್ಗೆ ತಿಳಿದುಕೊಂಡರು.

ಇದೊಂದು ಶೈಕ್ಷಣಿಕ ಭೇಟಿಯಾ ಗಿದ್ದು ವಿದ್ಯಾರ್ಥಿಗಳಿಗೆ ಜೆ.ಎಸ್.ಎಸ್. ಸಂಸ್ಥೆಯ ವೃಕ್ಷ ಘಟಕದ ನಿರ್ದೇ ಶಕರು ಹಾಗೂ ವ್ಯವಸ್ಥಾಪಕರಾದ ಗಿರೀಶ್, ಉದ್ಯಮಶೀಲತೆಯ ಮಾರ್ಗಗಳನ್ನು ಉದಾಹರಣೆ ಸಮೇತ ವಿವರಿಸಿದರು. ಉದ್ಯಮ ಶೀಲತೆ ಎಂಬುವುದು ಸ್ವಂತ ವ್ಯವ ಹಾರ ದೃಷ್ಟಿಕೋನವನ್ನು ಬೆಳೆಸಿ ಕೊಂಡರೆ ಮಾತ್ರ ಸಾಧ್ಯ, ವಿದ್ಯಾರ್ಥಿಗಳು ಈ ಹಂತದಿAದಲೇ ಉದ್ಯಮದ ಸ್ಥಾಪನಾ ವಿಧಾನವನ್ನು ಅರಿಯಬೇಕೆಂದರು. ಸ್ವಂತ ಉದ್ಯಮಿ ಆಗಲು ಇಂದು ಹಲವು ಅವಕಾಶಗಳಿದ್ದು ಅದನ್ನು ಸದ್ಬಳಕೆ ಮಾಡಿಕೊಳ್ಳಬೇಕು. ಸಂಶೋಧನೆಯತ್ತ ವಿದ್ಯಾರ್ಥಿಗಳು ಗಮನ ಹರಿಸಬೇಕು. ಅಭಿವೃದ್ಧಿಶೀಲ ಭಾರತಕ್ಕೆ ಉದ್ಯಮ ಘಟಕದ ಪಾತ್ರ ಅಪಾರವಾಗಿದೆ ಎಂದರು. ವಿದ್ಯಾರ್ಥಿಗಳು ಈ ಸಂದರ್ಭದಲ್ಲಿ ಪ್ರಶ್ನೆಗಳನ್ನು ಕೇಳುವುದರ ಮೂಲಕ ತಮ್ಮ ಸಂದೇಹಗಳನ್ನು ಬಗೆಹರಿಸಿಕೊಂಡರು. ವಿದ್ಯಾರ್ಥಿಗಳು ಫಾರ್ಮಸಿ ವಿಭಾಗಕ್ಕೂ ಭೇಟಿ ನೀಡಿ ಮಾಹಿತಿ ಪಡೆದು ಕೊಂಡರು. ಈ ಸಂದರ್ಭದಲ್ಲಿ ಜೆ.ಎಸ್.ಎಸ್. ಅಕಾಡೆಮಿಯ ಹರ್ಷಿತ್, ಸೆಂಟ್ ಆನ್ಸ್ ಪದವಿ ಕಾಲೇಜಿನ ಅರ್ಥಶಾಸ್ತç ಉಪನ್ಯಾಸಕ ಶಾಂತಿಭೂಷಣ್, ಅಂತಿಮ ಪದವಿ ಬಿಬಿಎ ವಿಭಾಗದ ಎಲ್ಲಾ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.