ಮಡಿಕೇರಿ, ಜು. ೯: ಕೊಡಗು ಕೃಷಿ ಪ್ರಧಾನ ಜಿಲ್ಲೆ. ಶೇ. ೮೦ ರಷ್ಟು ಅಧಿಕ ಜನರು ಕೃಷಿಯನ್ನೇ ಅವಲಂಬಿಸಿ ಜೀವನ ನಡೆಸು ತ್ತಿದ್ದಾರೆ. ಕಾಫಿ ಹಾಗೂ ಕರಿಮೆಣಸು ಅತೀ ಹೆಚ್ಚಾಗಿ ಬೆಳೆಯಲಾಗುತ್ತಿದೆ. ಭತ್ತದ ಕಣಜದ ತವರೂರು ಎಂದೇ ಕೊಡಗು ಜಿಲ್ಲೆಯನ್ನು ಕರೆಯ ಲಾಗುತ್ತಿತ್ತು. ಆದರೆ ಇತ್ತೀಚಿನ ವರ್ಷಗಳಲ್ಲಿ ಕೊಡಗು ಜಿಲ್ಲೆಯಲ್ಲಿ ಭತ್ತದ ಗದ್ದೆಗಳು ತೋಟ ಹಾಗೂ ಸೈಟ್‌ಗಳಾಗುತ್ತಿದೆ. ಅತೀ ಹೆಚ್ಚಾಗಿ ಭತ್ತ ಬೆಳೆಯುತ್ತಿದ್ದ ನಾಡಿನಲ್ಲಿ ಇದೀಗ ಭತ್ತದ ಗದ್ದೆಗಳು ಪಾಳುಬಿದ್ದಿದೆ.
ಭತ್ತಕ್ಕೆ ಸರಿಯಾದ ಬೆಂಬಲ ಬೆಲೆ, ಕಾರ್ಮಿಕರ ಸಮಸ್ಯೆ, ದುಬಾರಿ ಸಂಬಳ, ಮಳೆಯ ಏರುಪೇರು, ಕಾಡು ಪ್ರಾಣಿಗಳ ಹಾವಳಿ, ಭತ್ತಗಳಿಗೆ ತಗುಲುತ್ತಿರುವ ರೋಗಗಳು, ರಸಗೊಬ್ಬರಗಳ ಬೆಲೆ ಏರಿಕೆ, ಹೀಗೆ ನಾನಾ ಕಾರಣಗಳಿಂದ ಭತ್ತ ಬೆಳೆಯಲು ಜಿಲ್ಲೆಯಲ್ಲಿ ಬೆಳೆಗಾರರು ಹಿಂದೇಟು ಹಾಕುತ್ತಿದ್ದಾರೆ.
ಭತ್ತದ ಗದ್ದೆಗಳನ್ನು ಕಾಫಿ ತೋಟವಾಗಿ ಮಾರ್ಪಾಡು ಮಾಡಿ, ಗದ್ದೆಗಳಲ್ಲಿ ಕಾಫಿ ಗಿಡ, ಅಡಕೆ ಹಾಗೂ ಸಿಲ್ವರ್ ಮರಗಳನ್ನು ನೆಟ್ಟು ಬೆಳೆಸುತ್ತಿದ್ದಾರೆ. ಭತ್ತದ ಕಣಜ ಎಂದೇ ಹೆಸರುವಾಸಿಯಾಗಿದ್ದ ಕೊಡಗಿನಲ್ಲಿ ಭತ್ತ ಬೆಳೆಯಲು ವರ್ಷದಿಂದ ವರ್ಷಕ್ಕೆ ಬೆಳೆಗಾರರು ಆಸಕ್ತಿ ಕಳೆದುಕೊಳ್ಳುತ್ತಿದ್ದಾರೆ.
ಗದ್ದೆಯಲ್ಲಿ ಶುಂಠಿ ಕೃಷಿ
ಈ ಹಿಂದೊಮ್ಮೆ ಜಿಲ್ಲೆಯಲ್ಲಿ ೭೫,೩೬೭ ಎಕರೆ ಪ್ರದೇಶಗಳಲ್ಲಿ ಭತ್ತ ಬೆಳೆಯಲಾಗುತ್ತಿತ್ತು. ಆದರೆ ಇತ್ತೀಚಿನ ವರ್ಷಗಳಲ್ಲಿ ಭತ್ತ ಬೆಳೆಯುವ ಪ್ರದೇಶಗಳ ಸಂಖ್ಯೆಯಲ್ಲಿ ಗಣನೀಯವಾಗಿ ಇಳಿಕೆ ಕಂಡಿದೆ. ಭತ್ತದ ಗದ್ದೆಗಳಲ್ಲಿ ಬೆಳೆಗಾರರು ಶುಂಠಿ ಮತ್ತಿತರ ಕೃಷಿಯತ್ತ ಮುಖ ಮಾಡಿದ್ದಾರೆ. ಭತ್ತವನ್ನು ಬಿತ್ತನೆ ಮಾಡಿ, ಕಟಾವು ಮಾಡುವಷ್ಟರಲ್ಲಿ ಬೆಳೆಗಾರನು ಹಲವಾರು ಸಮಸ್ಯೆಗಳನ್ನು ಎದುರಿಸಬೇಕಾಗಿದೆ.
ಹವಾಮಾನ ವೈಪರೀತ್ಯಗಳಿಂದ ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ ಎಂಬ ಪರಿಸ್ಥಿತಿ ಬೆಳೆಗಾರರದ್ದು. ಭತ್ತ ಬೆಳೆದು ಕಟಾವು ಮಾಡುವ ಸಮಯ ಬಂದಾಗ, ಒಂದಲ್ಲಾ ಒಂದು ಸಮಸ್ಯೆಗೆ ಬೆಳೆಗಾರರು ಸಿಲುಕೊಂಡಿರುತ್ತಾರೆ. ಇದರಿಂದ ಬೇಸತ್ತು ಭತ್ತ ಬೆಳೆಯಲು ಬೆಳೆಗಾರರು ಆಸಕ್ತಿ ಕಳೆದುಕೊಂಡಿದ್ದಾರೆ.
ಇತ್ತೀಚಿನ ವರ್ಷಗಳಲ್ಲಿ ಭತ್ತದ ಗದ್ದೆಗಳಲ್ಲಿ ಲಾಭದಾಯಕವಾದ ಶುಂಠಿ ಬೆಳೆಯಲಾಗುತ್ತಿದೆ. ಉತ್ತಮ ಬೆಲೆ ದೊರೆತರೆ, ಭತ್ತದ ಬೆಳೆಗಿಂತಲೂ ಲಾಭವನ್ನು ಬೆಳೆಗಾರರು ಶುಂಠಿ ಕೃಷಿಯಲ್ಲಿ ಪಡೆಯುತ್ತಾರೆ. ಅಲ್ಲದೇ ಬೆಳೆಗಾರರು ತಮ್ಮ ಗದ್ದೆಗಳನ್ನು ವ್ಯಾಪಾರಿಗಳಿಗೆ ಲೀಜ್‌ಗೆ ನೀಡುತ್ತಿ ದ್ದಾರೆ. ಬಹುತೇಕ ವ್ಯಾಪಾರಿಗಳು ಶುಂಠಿ ಬೆಳೆಯುತ್ತಿದ್ದಾರೆ.
ಜಿಲ್ಲೆಯಲ್ಲಿ ಕಾಣಸಿಗುವ ರಸ್ತೆ ಬದಿಯಲ್ಲಿನ ಗದ್ದೆಗಳಲ್ಲಿ ಭತ್ತ ತಳಿಗಳು ತುಂಬಿ ಕೊಡಗಿನ ಪ್ರಕೃತಿ ಸೊಬಗಿಗೆ ಮತ್ತಷ್ಟು ರಂಗು ನೀಡುತ್ತಿತ್ತು. ಆದರೆ ಇದೀಗ ಭತ್ತದ ಗದ್ದೆಗಳಲ್ಲಿ ಶುಂಠಿ ಕೃಷಿ ಕಂಡುಬರುತ್ತಿದೆ.
ಗದ್ದೆಗಳು ಸೈಟ್‌ಗಳಾಗಿ ಮಾರ್ಪಾಡು! ಮಾರಾಟ ಮಾಡುತ್ತಿರುವ ರೈತರು!
ಕೊಡಗು ಜಿಲ್ಲೆಯಲ್ಲಿ ಇತ್ತೀಚಿನ ವರ್ಷಗಳಲ್ಲಿ ಕೆಲವೊಂದು ಭಾಗಗಳಲ್ಲಿ ಸೈಟ್‌ಗಳ ಬೆಲೆ ಲಕ್ಷಾಂತರ ರೂಪಾಯಿಗೆ ತಲುಪಿದೆ. ಕೇವಲ ಒಂದು ಸೆಂಟ್ ಜಾಗಕ್ಕೆ ಲಕ್ಷಾಂತರ ರೂಪಾಯಿ ಬೆಲೆ ಬಾಳುತ್ತಿದೆ. ರಸ್ತೆ ಬದಿಯಲ್ಲಿ ಕಂಡುಬರುತ್ತಿದ್ದ ಗದ್ದೆಗಳಲ್ಲಿ ಇದೀಗ ಮನೆಗಳು ನಿರ್ಮಾಣವಾಗಿದೆ. ಗದ್ದೆಗಳು ಸೈಟ್‌ಗಳಾಗಿ ಪರಿವರ್ತನೆಯಾಗುತ್ತಿದೆ. ರಸ್ತೆ ಬದಿಯಲ್ಲಿ ಇರುವ ಗದ್ದೆಗಳನ್ನು ಬೆಳೆಗಾರರು ಮಾರಾಟ ಮಾಡುತ್ತಿದ್ದಾರೆ.
ನೆಲ್ಲಿಹುದಿಕೇರಿ, ಗದ್ದೆಹಳ್ಳ, ಸುಂಟಿಕೊಪ್ಪ-ಕುಶಾಲನಗರ ಮುಖ್ಯ ರಸ್ತೆಯಲ್ಲಿ ಕಾಣಸಿಗುತ್ತಿದ್ದ ಗದ್ದೆಗಳಲ್ಲಿ ಇದೀಗ ಮನೆಗಳು ನಿರ್ಮಾಣ ವಾಗಿದೆ. ಭತ್ತ ಬೆಳೆಯನ್ನು ನಿರ್ವಹಣೆ ಮಾಡಲು ದುಬಾರಿ ವೆಚ್ಚವಾಗುತ್ತಿ ರುವುದರಿಂದ ಬೆಳೆಗಾರರು ತಮ್ಮ ಗದ್ದೆಗಳನ್ನು ಸೈಟ್‌ಗಳಾಗಿ ಮಾರ್ಪಾಡು ಮಾಡಿ, ಮಾರಾಟ ಮಾಡುತ್ತಿದ್ದಾರೆ. ಇದರಿಂದ ಭತ್ತದ ಕಣಜದ ನಾಡಿನಲ್ಲೇ ಭತ್ತ ಬೆಳೆಯುವ ಬೆಳೆಗಾರರ ಸಂಖ್ಯೆ ವರ್ಷದಿಂದ ವರ್ಷಕ್ಕೆ ವಿರಳವಾಗುತ್ತಿದೆ.
ಕಾಡು ಪ್ರಾಣಿಗಳ ಹಾವಳಿ!
ಕೊಡಗು ಜಿಲ್ಲೆಯಲ್ಲಿ ಕಾಡು ಪ್ರಾಣಿಗಳ ಹಾವಳಿಯಿಂದ ಬೇಸತ್ತು ಬೆಳೆಗಾರರು ಭತ್ತ ಬೆಳೆಯಲು ಹಿಂದೇಟು ಹಾಕುತ್ತಿದ್ದಾರೆ. ಕಷ್ಟಪಟ್ಟು ಭತ್ತ ಬೆಳೆದು ಕಟಾವು ಮಾಡುವ ಸಮಯ ಬಂದಾಗ ಭತ್ತ ಗದ್ದೆಗಳು ಕಾಡಾನೆ ಹಾವಳಿಯಿಂದ ಸಂಪೂರ್ಣ ವಾಗಿ ನಾಶವೊಂದುತ್ತಿದೆ. ಬೆಳೆಗಾರರು ಎರಡ್ಮೂರು ತಿಂಗಳು ಗದ್ದೆಯಲ್ಲಿಯೇ ಕಷ್ಟಪಟ್ಟದ್ದು, ಕಾಡು ಪ್ರಾಣಿಗಳ ಹಾವಳಿಯಿಂದ ನಾಶವಾಗುತ್ತಿದೆ.
ಕಾಡಾನೆ ಹಾವಳಿಯೊಂದಿಗೆ ಭತ್ತದ ಗದ್ದೆಗಳಲ್ಲಿ ಕಾಡು ಹಂದಿ ಹಾವಳಿ ಕೂಡ ಜಿಲ್ಲೆಯಲ್ಲಿ ಮಿತಿ ಮೀರಿದೆ. ಕೆಲವು ಭಾಗಗಳಲ್ಲಿ ಬೆಳೆಗಾರರು ಭತ್ತದ ಗದ್ದೆಯ ಬಳಿ ಜೋಪುಡಿಗಳನ್ನು ನಿರ್ಮಿಸಿ ಕಾಡು ಪ್ರಾಣಿಗಳು ಹಾವಳಿ ಮಾಡದಂತೆ ರಾತ್ರಿಯಿಡೀ ಕಾವಲು ಕಾಯುತ್ತಿರುತ್ತಾರೆ.
ಈಗೆ ಹಲವಾರು ಕಷ್ಟಗಳನ್ನು ಗದ್ದೆಗಳನ್ನು ಸೈಟ್‌ಗಳಾಗಿ ಮಾರ್ಪಾಡು ಮಾಡಿ, ಮಾರಾಟ ಮಾಡುತ್ತಿದ್ದಾರೆ. ಇದರಿಂದ ಭತ್ತದ ಕಣಜದ ನಾಡಿನಲ್ಲೇ ಭತ್ತ ಬೆಳೆಯುವ ಬೆಳೆಗಾರರ ಸಂಖ್ಯೆ ವರ್ಷದಿಂದ ವರ್ಷಕ್ಕೆ ವಿರಳವಾಗುತ್ತಿದೆ.
ಕಾಡು ಪ್ರಾಣಿಗಳ ಹಾವಳಿ!
ಕೊಡಗು ಜಿಲ್ಲೆಯಲ್ಲಿ ಕಾಡು ಪ್ರಾಣಿಗಳ ಹಾವಳಿಯಿಂದ ಬೇಸತ್ತು ಬೆಳೆಗಾರರು ಭತ್ತ ಬೆಳೆಯಲು ಹಿಂದೇಟು ಹಾಕುತ್ತಿದ್ದಾರೆ. ಕಷ್ಟಪಟ್ಟು ಭತ್ತ ಬೆಳೆದು ಕಟಾವು ಮಾಡುವ ಸಮಯ ಬಂದಾಗ ಭತ್ತ ಗದ್ದೆಗಳು ಕಾಡಾನೆ ಹಾವಳಿಯಿಂದ ಸಂಪೂರ್ಣ ವಾಗಿ ನಾಶವೊಂದುತ್ತಿದೆ. ಬೆಳೆಗಾರರು ಎರಡ್ಮೂರು ತಿಂಗಳು ಗದ್ದೆಯಲ್ಲಿಯೇ ಕಷ್ಟಪಟ್ಟದ್ದು, ಕಾಡು ಪ್ರಾಣಿಗಳ ಹಾವಳಿಯಿಂದ ನಾಶವಾಗುತ್ತಿದೆ.
ಕಾಡಾನೆ ಹಾವಳಿಯೊಂದಿಗೆ ಭತ್ತದ ಗದ್ದೆಗಳಲ್ಲಿ ಕಾಡು ಹಂದಿ ಹಾವಳಿ ಕೂಡ ಜಿಲ್ಲೆಯಲ್ಲಿ ಮಿತಿ ಮೀರಿದೆ. ಕೆಲವು ಭಾಗಗಳಲ್ಲಿ ಬೆಳೆಗಾರರು ಭತ್ತದ ಗದ್ದೆಯ ಬಳಿ ಜೋಪುಡಿಗಳನ್ನು ನಿರ್ಮಿಸಿ ಕಾಡು ಪ್ರಾಣಿಗಳು ಹಾವಳಿ ಮಾಡದಂತೆ ರಾತ್ರಿಯಿಡೀ ಕಾವಲು ಕಾಯುತ್ತಿರುತ್ತಾರೆ.
ಈಗೆ ಹಲವಾರು ಕಷ್ಟಗಳನ್ನು ನಿರ್ವಹಣೆ ವೆಚ್ಚ ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಿರುವುದರಿಂದ ಬೆಳೆಗಾರರು ಗದ್ದೆಯತ್ತ ಮುಖ ಮಾಡುತ್ತಿಲ್ಲ ಹಾಗೂ ಟಿಲ್ಲರ್ ಯಂತ್ರಗಳ ಬಾಡಿಗೆ ದರವೂ ಹೆಚ್ಚಾಗಿದೆ. ಬಹಳ ವಿರಳ ಸಂಖ್ಯೆ ಬೆಳೆಗಾರರಲ್ಲಿ ಮಾತ್ರ ಟಿಲ್ಲರ್ ಇರುವುದು. ಬಹುತೇಕ ಬೆಳೆಗಾರರು ಗದ್ದೆ ಕೆಲಸಗಳಿಗೆ ಬಾಡಿಗೆಗೆ ಟಿಲ್ಲರ್ ಯಂತ್ರವನ್ನು ಖರೀದಿಸುತ್ತಾರೆ.
ಕಾಡು ಪ್ರಾಣಿಗಳ ಹಾವಳಿ, ಮಳೆಯ ಕೊರತೆಯ ನಡುವೆ ಭತ್ತ ಬೆಳೆದ ಬೆಳೆಗಾರರಿಗೆ ಕಟಾವು ಸಂದರ್ಭದಲ್ಲಿ ಕಾರ್ಮಿಕ ಕೊರತೆ ಕಾಡುತ್ತದೆ. ಜಿಲ್ಲೆಯ ಕೆಲವೊಂದು ಕಡೆಗಳಲ್ಲಿ ಯಂತ್ರಗಳು ಮೂಲಕ ಭತ್ತವನ್ನು ಕಟಾವು ಮಾಡುತ್ತಾರೆ.
ಹಿಂದೆ ಯಥೇಚ್ಛವಾಗಿ ಕೊಡಗಿನ ಭತ್ತವನ್ನು ಖರೀದಿಸಲು ಹೊರ ಜಿಲ್ಲೆ ಹಾಗೂ ರಾಜ್ಯದ ಬೆಳೆಗಾರರ, ವ್ಯಾಪಾರಸ್ಥರು ಜಿಲ್ಲೆಗೆ ಬರುತ್ತಿದ್ದರು. ಭತ್ತವನ್ನು ಕಟಾವು ಮಾಡಿ, ಸ್ವಂತ ಬಳಕೆಗೆ ಕೂಡ ಬೆಳೆಗಾರರಿಗೆ ಅಕ್ಕಿ ಸಿಗುತ್ತಿಲ್ಲ.
ಈಗೆ ನಾನಾ ಸಮಸ್ಯೆಗಳನ್ನು ಎದುರಿಸುತ್ತಿರುವ ಬೆಳೆಗಾರರು ಭತ್ತವನ್ನು ಬೆಳೆಯಲು ಆಸಕ್ತಿ ಕಳೆದು ಕೊಂಡು ಗದ್ದೆಗಳನ್ನು ತೋಟವನ್ನಾಗಿ ಪರಿವರ್ತನೆ ಮಾಡಿದ್ದಾರೆ. ಇನ್ನೂ ಕೆಲವು ಬೆಳೆಗಾರರು ತಮ್ಮ ಗದ್ದೆಗಳನ್ನು ನಿರ್ವಹಣೆ ಮಾಡದೆ ಪಾಳು ಬಿಟ್ಟಿದ್ದಾರೆ. ಭತ್ತದ ಬೆಳೆಗೆ ಸರ್ಕಾರ ಪ್ರೋತ್ಸಾಹ ಹಾಗೂ ಬೆಂಬಲ ಬೆಲೆ ನೀಡಬೇಕಾಗಿದೆ. ಭತ್ತದ ಬೆಳೆಯ ಬಗ್ಗೆ ಕೊಡಗಿನಲ್ಲಿ ಬೆಳೆಗಾರರಲ್ಲಿ ಆಸಕ್ತಿ ಮೂಡಿಸಿ, ಭತ್ತದ ಕಣಜದ ನಾಡಾದ ಕೊಡಗಿನಲ್ಲಿ ಮತ್ತೆ ಗದ್ದೆಗಳಲ್ಲಿ ಭತ್ತದ ಬೆಳೆ ಕಾಣುವಂತೆ ಮಾಡಬೇಕಾದ ನಿರ್ವಹಣೆ ಮಾಡದೆ ಪಾಳು ಬಿಟ್ಟಿದ್ದಾರೆ. ಭತ್ತದ ಬೆಳೆಗೆ ಸರ್ಕಾರ ಪ್ರೋತ್ಸಾಹ ಹಾಗೂ ಬೆಂಬಲ ಬೆಲೆ ನೀಡಬೇಕಾಗಿದೆ. ಭತ್ತದ ಬೆಳೆಯ ಬಗ್ಗೆ ಕೊಡಗಿನಲ್ಲಿ ಬೆಳೆಗಾರರಲ್ಲಿ ಆಸಕ್ತಿ ಮೂಡಿಸಿ, ಭತ್ತದ ಕಣಜದ ನಾಡಾದ ಕೊಡಗಿನಲ್ಲಿ ಮತ್ತೆ ಗದ್ದೆಗಳಲ್ಲಿ ಭತ್ತದ ಬೆಳೆ ಕಾಣುವಂತೆ ಮಾಡಬೇಕಾದ ನಿರ್ವಹಣೆ ಮಾಡದೆ ಪಾಳು ಬಿಟ್ಟಿದ್ದಾರೆ. ಭತ್ತದ ಬೆಳೆಗೆ ಸರ್ಕಾರ ಪ್ರೋತ್ಸಾಹ ಹಾಗೂ ಬೆಂಬಲ ಬೆಲೆ ನೀಡಬೇಕಾಗಿದೆ. ಭತ್ತದ ಬೆಳೆಯ ಬಗ್ಗೆ ಕೊಡಗಿನಲ್ಲಿ ಬೆಳೆಗಾರರಲ್ಲಿ ಆಸಕ್ತಿ ಮೂಡಿಸಿ, ಭತ್ತದ ಕಣಜದ ನಾಡಾದ ಕೊಡಗಿನಲ್ಲಿ ಮತ್ತೆ ಗದ್ದೆಗಳಲ್ಲಿ ಭತ್ತದ ಬೆಳೆ ಕಾಣುವಂತೆ ಮಾಡಬೇಕಾದ ಅನಿವಾರ್ಯತೆ ಎದುರಾಗಿದೆ. ಇಲ್ಲದಿದ್ದಲ್ಲಿ ಕೊಡಗಿನ ಗದ್ದೆಗಳಲ್ಲಿ ಭತ್ತದ ಬೆಳೆ ಯನ್ನು ಹುಡುಕಿ ನೋಡುವ ಪರಿಸ್ಥಿತಿ ದೂರವೇನಿಲ್ಲ.
- ಕೆ.ಎಂ. ಇಸ್ಮಾಯಿಲ್ ಕಂಡಕರೆ