ಸೋಮವಾರಪೇಟೆ, ಜು. ೯: ಸಮೀಪದ ಐಗೂರು ಸರಕಾರಿ ಪದವಿಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದಲ್ಲಿ ಅಂರ‍್ರಾಷ್ಟಿçÃಯ ಮಾದಕ ವಸ್ತುಗಳ ದುರುಪಯೋಗ ಮತ್ತು ಕಾನೂನು ಬಾಹಿರ ಸಾಗಾಟ ವಿರೋಧಿ ದಿನಾಚರಣೆ ಸಪ್ತಾಹ ಕುರಿತು ಕಾರ್ಯಕ್ರಮ ನಡೆಯಿತು. ವಿದ್ಯಾರ್ಥಿಗಳಿಗೆ ಮಾದಕ ವಸ್ತುಗಳ ದುಷ್ಪರಿಣಾಮ ಮತ್ತು ತಡೆಗಟ್ಟುವಲ್ಲಿ ಯುವ ಜನರ ಪಾತ್ರ ಕುರಿತು ಪ್ರಬಂಧ ಸ್ಪರ್ಧೆ ಏರ್ಪಡಿಸಲಾಗಿತ್ತು. ಸ್ಪರ್ಧೆಯಲ್ಲಿ ಕೆ.ಎ. ಸಿಂಚನ ಪ್ರಥಮ, ಗೌತಮಿ ಕೆ.ಎಂ. ದ್ವಿತೀಯ ಹಾಗೂ ಹೇಮಂತ್ ಕೆ.ಎ. ತೃತೀಯ ಸ್ಥಾನ ಗಳಿಸಿದರು. ಮನೋವೈದ್ಯರಾದ ಡಾ. ಡೆವಿನ್ ಅವರು ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಿದರು. ಮುಖ್ಯ ಶಿಕ್ಷಕ ಯಶ್ವಂತ್‌ಕುಮಾರ್ ಮತ್ತು ಸಹ ಶಿಕ್ಷಕರು ಉಪಸ್ಥಿತರಿದ್ದರು.