ಕರಿಕೆ, ಜು. ೮: ಮಳೆಯಿಂದ ಹಾನಿಯಾದ ಮನೆಯನ್ನು ಸೇವಾ ಭಾರತಿ ತಂಡ ದುರಸ್ತಿ ಮಾಡಿ ಕುಟುಂಬಕ್ಕೆ ಸಹಾಯ ಮಾಡಿದೆ.
ಚೆತ್ತುಕಾಯ ಹದಿಮೂರನೇ ಮೈಲು ನಿವಾಸಿ ವಿಶೇಷ ಚೇತನರಾಗಿರುವ ಸುರೇಶ್ ಬಾಬು ಎಂಬವರ ಮನೆ ಮೇಲ್ಛಾವಣಿ ಮಳೆಯಿಂದಾಗಿ ಕುಸಿದು ಹಾನಿಯಾದ ಹಿನ್ನೆಲೆಯಲ್ಲಿ ಸುರಿಯುವ ಧಾರಾಕಾರ ಮಳೆಯ ನಡುವೆ ಸಮೀಪದ ಪಾಣತ್ತೂರು, ಬಳಾಂತೋಡಿನ ಸೇವಾಭಾರತಿ ತಂಡ ಹಾಗೂ ಕರಿಕೆಯ ವಿಶ್ವ ಹಿಂದೂ ಪರಿಷತ್ ಮತ್ತು ಭಜರಂಗದಳದ ಸ್ವಯಂ ಸೇವಕ ಕಾರ್ಯಕರ್ತರು ಸೇರಿ ದುರಸ್ತಿ ಮಾಡಿದರು. ಪ್ಲಾಸ್ಟಿಕ್ ಇನ್ನಿತರ ಸಾಮಗ್ರಿಗಳನ್ನು ಸ್ಥಳೀಯ ದಾನಿಗಳಾದ ಕೆ. ವಿದ್ಯಾದರನ್ ನೀಡಿದರು.