ಮಡಿಕೇರಿ, ಜು. ೮: ಜಾಗದ ವಿಚಾರಕ್ಕೆ ಸಂಬAಧಿಸಿದAತೆ ಪರಿಶಿಷ್ಟ ಜಾತಿಗೆ ಸೇರಿದ ವ್ಯಕ್ತಿಯೋರ್ವರ ವಿರುದ್ಧ ಜಾತಿ ನಿಂದನೆ ಹಾಗೂ ಕೊಲೆ ಬೆದರಿಕೆಯೊಡ್ಡಿದ ಆರೋಪದಂತೆ ವಕೀಲರೊಬ್ಬರು ಸೇರಿದಂತೆ ೬ ಮಂದಿ ವಿರುದ್ಧ ಮಡಿಕೇರಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

ನಗರದ ಐಟಿಐ ಸನಿಹದ ನಿವಾಸಿ, ಪಟ್ಟಣ ಸಹಕಾರ ಬ್ಯಾಂಕ್‌ನಲ್ಲಿ ಡಿ ಗ್ರೂಪ್ ನೌಕರರಾಗಿ ಕೆಲಸ ನಿರ್ವಹಿಸುತ್ತಿರುವ ಪಿ.ಆರ್. ಸುಬ್ರಮಣ್ಯ ಎಂಬವರಿಗೆ ಅವರು ಐ.ಟಿ.ಐ. ಸನಿಹ ೪ ಸೆಂಟ್ ಜಾಗದಲ್ಲಿ ಮನೆ ನಿರ್ಮಿಸುತ್ತಿರುವ ವಿಚಾರದಲ್ಲಿ ವಕೀಲರಾದ ವೈ. ಮನೋಜ್ ಬೋಪಯ್ಯ, ಚೇತನ್, ಯಕ್ಷಿತ್ ಅಪ್ಪಯ್ಯ, ಮದನ್ ಹಾಗೂ ಇತರ ಇಬ್ಬರು ಈ ಜಾಗಕ್ಕೆ ಆಗಮಿಸಿ ಜಾತಿನಿಂದನೆಯೊAದಿಗೆ, ಕೊಲೆ ಬೆದರಿಕೆಯೊಡ್ಡಿರುವುದಾಗಿ ಆರೋಪಿಸಲಾಗಿದೆ. ಜೆ.ಸಿ.ಬಿ. ಮೂಲಕ ಜಾಗವನ್ನು ಹಾಳುಗೆಡವಲಾಗಿದೆ ಎಂದು ಆರೋಪಿಸಿ ಸುಬ್ರಮಣ್ಯ ಅವರು ನಗರ ಠಾಣೆಗೆ ದೂರು ನೀಡಿದ್ದು, ಇದರಂತೆ ಈ ಆರು ಮಂದಿ ವಿರುದ್ಧ ಪ್ರಕರಣ ದಾಖಲಾಗಿದೆ.