ನಾಪೋಕ್ಲು, ಜು. ೮: ನಾಪೋಕ್ಲು-ಮಡಿಕೇರಿ ಕಡೆ ತೆರಳುವ ಮುಖ್ಯ ರಸ್ತೆಯ ಪಾಲೂರು ಗ್ರಾಮಕ್ಕೆ ತೆರಳಿ ಮಡಿಕೇರಿಯತ್ತ ಸಾಗಿದರೆ ಮುಖ್ಯ ರಸ್ತೆಯ ಮಧ್ಯ ತಿರುವುವಿನಲ್ಲಿ ಭಾರೀ ಗಾತ್ರದ ಗುಂಡಿ ನಿರ್ಮಾಣವಾಗಿದ್ದು ಅಪಘಾತಕ್ಕೆ ಆಹ್ವಾನ ನೀಡುವಂತಿದೆ. ಈ ಹಿಂದೆ ಗುಂಡಿ ಮುಚ್ಚುವ ಕಾರ್ಯವನ್ನು ಸಮರ್ಪಕವಾಗಿ ಮಾಡದೆ ಇರುವುದರಿಂದಾಗಿ ಇದು ಹಲವಾರು ತಿಂಗಳುಗಳಿAದ ಹಾಗೆ ಇದ್ದು ಸಂಬAಧಪಟ್ಟವರು ಗಮನ ಹರಿಸಿಲ್ಲ. ಇದರಿಂದಾಗಿ ವಾಹನದಲ್ಲಿ ಸಂಚರಿಸುವವರು ಇಲ್ಲಿ ಎಚ್ಚರ ವಹಿಸಬೇಕಾಗಿದೆ.

ಇಲಾಖೆಗೆ ಸಂಬAಧಪಟ್ಟವರು ಇದೇ ರಸ್ತೆಯಲ್ಲಿ ಸಂಚರಿಸುತ್ತಿದ್ದರೂ ಏನೂ ಕ್ರಮ ಕೈಗೊಂಡಿಲ್ಲ. ಸಂಬAಧಪಟ್ಟ ಲೋಕೋಪಯೋಗಿ ಇಲಾಖೆಯವರು ಆದಷ್ಟು ಬೇಗ ಇತ್ತ ಗಮನ ಹರಿಸಿ ಗುಂಡಿ ಮುಚ್ಚಿ ಸುಗಮ ವಾಹನ ಸಂಚಾರಕ್ಕೆ ಅನುವು ಮಾಡಬೇಕಿದೆ.