ಸಿದ್ದಾಪುರ, ಜು. ೭: ಕಳೆದ ಮೂರು ದಿನಗಳ ಹಿಂದೆ ಸಿದ್ದಾಪುರದಿಂದ ಕಾಣೆಯಾದ ನಾಲ್ವರು ಅಪ್ರಾಪ್ತ ಬಾಲಕಿಯರು ಇದೀಗ ಮಂಗಳೂರಿನಲ್ಲಿ ಪತ್ತೆಯಾಗಿದ್ದಾರೆ.
ಸಿದ್ದಾಪುರದ ಅಂಬೇಡ್ಕರ್ ನಗರದ ಇಬ್ಬರು ಬಾಲಕಿಯರು ಹಾಗೂ ನೆಲ್ಯಹುದಿಕೇರಿ ಕುಂಬಾರಗುAಡಿಯ ಇಬ್ಬರು ಬಾಲಕಿಯರು ಕಳೆದ ಬುಧವಾರದಂದು ನಾಪತ್ತೆಯಾಗಿರುವುದಾಗಿ ಸಿದ್ದಾಪುರ ಪೊಲೀಸ್ ಠಾಣೆಗೆ ಪೋಷಕರು ನೀಡಿದ ದೂರಿನ ಮೇರೆಗೆ ತನಿಖೆ ಪ್ರಾರಂಭಿಸಿದ ಸಹಾಯಕ ಠಾಣಾಧಿಕಾರಿ ತಮ್ಮಯ್ಯ ನೇತೃತ್ವದ ಪೊಲೀಸರ ತಂಡ ಶುಕ್ರವಾರದಂದು ಮಂಗಳೂರಿನ ಬಸ್ ನಿಲ್ದಾಣದಲ್ಲಿ ನಾಲ್ವರು ಬಾಲಕಿಯರನ್ನು ಪತ್ತೆಹಚ್ಚಿದ್ದಾರೆ.