ವೀರಾಜಪೇಟೆ, ಜು. ೭: ವೀರಾಜಪೇಟೆ ಸಂತ ಅನ್ನಮ್ಮ ದೇವಾಲಯ ಆಡಳಿತ, ಕ್ರೆöÊಸ್ತ ಸ್ನೇಹಿತರ ಸಂಘ, ಮದರ್ ತೆರೇಸಾ ಸಮಿತಿಯ ವತಿಯಿಂದ ವೀರಾಜ ಪೇಟೆ ಸಂತ ಅನ್ನಮ್ಮ ಸಭಾಂಗಣದಲ್ಲಿ ನೂತನ ಶಾಸಕರು, ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಎ.ಎಸ್. ಪೊನ್ನಣ್ಣ ಅವರಿಗೆ ಸನ್ಮಾನಿಸಲಾಯಿತು. ಸನ್ಮಾನ ಸ್ವೀಕರಿಸಿ ಮಾತನಾಡಿದ ಶಾಸಕ ಪೊನ್ನಣ್ಣ, ನಾನು ಗೆದ್ದ ನಂತರ ಮೊದಲ ಬಾರಿಗೆ ಇಷ್ಟು ದೊಡ್ಡ ಪ್ರಮಾಣದಲ್ಲಿ ಸ್ವಾಗತ ಕೋರಿದ್ದೀರಿ. ನನಗೆ ಮತ್ತಷ್ಟು ಜವಾಬ್ದಾರಿ ಜಾಸ್ತಿಯಾಗಿದೆ. ನನ್ನ ತಂದೆ, ಸಹೋದರರು ಇದೇ ಶಾಲೆಯಲ್ಲಿ ವಿದ್ಯಾಭ್ಯಾಸ ಪಡೆದವರು. ಆದುದರಿಂದ ನನಗೂ ಮತ್ತು ಈ ಶಾಲೆಗೆ ಅವಿನಾಭಾವ ಸಂಬAಧವಿದೆ ಎಂದರು. ಸರ್ಕಾರದ ವತಿಯಿಂದ ನಿಮಗೆ ಸಿಗುವ ಎಲ್ಲಾ ರೀತಿಯ ಸೌಲಭ್ಯಗಳನ್ನು ಒದಗಿಸುವ ಸಂಪೂರ್ಣ ಪ್ರಯತ್ನ ಮಾಡುತ್ತೇನೆ ಎಂದು ಭರವಸೆ ನೀಡಿದರು.

ವೇದಿಕೆಯಲ್ಲಿ ಸಂಸ್ಥೆಯ ಧರ್ಮಗುರು ರೆವರೆಂಡ್ ಫಾದರ್ ದಯಾನಂದ ಪ್ರಭು, ಫಾದರ್ ಐಸಾಕ್ ರತ್ನಾಕರ್, ಏಸು ಪ್ರಸಾದ್, ಪುರಸಭೆ ಸದಸ್ಯರಾದ ಬೆನ್ನಿ ಅಗಸ್ಟೀನ್, ವೀರಾಜಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಂಜಿ ಪೂಣಚ್ಚ, ಕಾಂಗ್ರೆಸ್ ಸೇವಾ ದಳದ ರಾಜ್ಯ ಕಾರ್ಯದರ್ಶಿ ತೆರೇಸಾ ವಿಕ್ಟರ್, ಕೊಡಗು ಜಿಲ್ಲಾ ಕಾಂಗ್ರೆಸ್ ಕಾರ್ಯಕಾರಿಣಿ ಸಮಿತಿಯ ಮರ್ವಿನ್ ಲೋಬೊ, ನಗರ ಕಾಂಗ್ರೆಸ್ ಅಧ್ಯಕ್ಷ ಮಾದಂಡ ತಿಮ್ಮಯ್ಯ, ನಿವೃತ್ತ ಜಿಲ್ಲಾ ಶಿಕ್ಷಣ ಅಧಿಕಾರಿ ಪೆರಿಗ್ರಿನ್ ಮಚ್ಚಾಡೋ, ರಾಜ್ಯ ಕ್ರಿಶ್ಚಿಯನ್ ವಿಂಗ್ ಸಂಚಾಲಕ ಜೋಕಿಂ ರೋಡ್ರಿಗಸ್, ರೊಮನ್ ಕ್ಯಾಥೊಲಿಕ್ ಸಂಘದ ವಿ.ಎ. ಲಾರೆನ್ಸ್, ಸಂತ ಅನ್ನಮ್ಮ ಸ್ನೇಹಿತರ ಸಂಘದ ಪ್ರಾನ್ಸಿಸ್ ಲೋಬೋ, ಕೊಡಗು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಧರ್ಮಜ ಉತ್ತಪ್ಪ ಭಾಗವಹಿಸಿದ್ದರು.

ಕ್ರೆöÊಸ್ತ ಧರ್ಮದ ಮುಖಂಡರು ಹಾಗೂ ಕ್ರೆöÊಸ್ತ ಬಂಧುಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.