ಮಡಿಕೇರಿ, ಜು. ೮: ನಗರಸಭೆ ಸದಸ್ಯ ಕಾಳಚಂಡ ಅಪ್ಪಣ್ಣ ಅವರ ಮೇಲಿನ ಹಲ್ಲೆ ಪ್ರಕರಣಕ್ಕೆ ಸಂಬAಧಿಸಿದAತೆ ನಗರ ಠಾಣೆ ಪೊಲೀಸರು ಓರ್ವನನ್ನು ಬಂಧಿಸಿ ಮುಂದಿನ ಕ್ರಮಕೈಗೊಂಡಿದ್ದಾರೆ.
ಹೊಟೇಲ್ ಮಾಲೀಕರಾದ ಧನಲಕ್ಷಿö್ಮ ಅವರ ಪುತ್ರ ಮೋನಿಷ್ ಬಂಧಿತ ಆರೋಪಿ ಮೈತ್ರಿ ಜಂಕ್ಷನ್ ಸಮೀಪ ಸದಸ್ಯ ಅಪ್ಪಣ್ಣ ಅವರ ಕಾರನ್ನು ಅಡ್ಡಗಟ್ಟಿ ್ಟ ಮೋನಿಷ್ ವಾಗ್ವಾದ ನಡೆಸಿ ಹಲ್ಲೆ ಮಾಡಿದ ಬಗ್ಗೆ ನಗರ ಠಾಣೆಯಲ್ಲಿ ದೂರು ದಾಖಲಾಗಿತ್ತು. ವಿಚಾರಣೆ ನಡೆಸಿದ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಮೋನಿಷ್ ಜೊತೆ ಅಪ್ಪಣ್ಣ ಮೇಲೆ ಹಲ್ಲೆಗೈದ ಸಹಚರರಾದ ಇಬ್ಬರನ್ನು ಪೊಲೀಸರು ವಿಚಾರಣೆ ಮಾಡುತ್ತಿದ್ದಾರೆ. ಹಲ್ಲೆ ಮಾಡುತ್ತಿರುವ ದೃಶ್ಯಾವಳಿಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ.
ಮೈತ್ರಿ ಜಂಕ್ಷನ್ ಸಮೀಪದಲ್ಲಿರುವ ಹೊಟೇಲ್‌ನೊಳಗೆ ಭಾರಿ ಮಳೆಗೆ ನೀರು ನುಗ್ಗಿದ ವಿಚಾರವನ್ನು ಮುಂದಿಟ್ಟು, ತನ್ನ ಕಾರನ್ನು ಅಡ್ಡಗಟ್ಟಿ ಅವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆ ಮಾಡಲಾಗಿದೆ ಎಂದು ಅಪ್ಪಣ್ಣ ದೂರು ದಾಖಲಿಸಿದ್ದರು.