ಗೋಣಿಕೊಪ್ಪ, ಜು. ೭: ಜೆಸಿಐ ಭಾರತದ ವಲಯ ೧೪ರ ಮಧ್ಯವಾರ್ಷಿಕ ಸಮ್ಮೇಳನದಲ್ಲಿ ಜೆಸಿಐ ಪೊನ್ನಂಪೇಟೆ ನಿಸರ್ಗ ಘಟಕವು ವಿವಿಧ ವಿಭಾಗಗಳಲ್ಲಿ ೧೫ಕ್ಕೂ ಹೆಚ್ಚು ಪ್ರಶಸ್ತಿಯನ್ನು ಪಡೆದುಕೊಂಡಿದೆ.

ಜೆಸಿಐ ಬೀರೂರು ಘಟಕದ ಸಹಯೋಗದಲ್ಲಿ ಬೀರೂರಿನ ಶ್ರೀ ತರಳಬಾಳು ಕಲ್ಯಾಣ ಮಂಟಪದಲ್ಲಿ ಆಯೋಜಿಸಿದ್ದ ಭಾರತದ ವಲಯ ೧೪ರ ಮಧ್ಯವಾರ್ಷಿಕ ಸಮ್ಮೇಳನದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಪ್ರಾಂತ್ಯ ಬಿ ವಿಭಾಗದ, ವೈಯಕ್ತಿಕ ಪ್ರಶಸ್ತಿ ವಿಭಾಗದಲ್ಲಿ ಅತ್ಯುತ್ತಮ ಘಟಕಾಧಿಕಾರಿ ಪ್ರಶಸ್ತಿಯನ್ನು ಜೆಸಿಐ ಪೊನ್ನಂಪೇಟೆ ನಿಸರ್ಗ ಘಟಕದ ಕಾರ್ಯದರ್ಶಿಗಳಾದ ಚೆಟ್ಟೋಳಿರ ಶರತ್ ಸೋಮಣ್ಣ ಪಡೆದುಕೊಂಡರು. ಅತ್ಯುತ್ತಮ ಘಟಕ ವಿಭಾಗದಲ್ಲಿ ವಿಜೇತರಾದರು, ಅತ್ಯುತ್ತಮ ಕಾರ್ಯಕ್ರಮ ವಿಭಾಗದಲ್ಲಿ ರನ್ನರ್ ಅಪ್ ಪ್ರಶಸ್ತಿ ದೊರೆಯಿತು.

ವಲಯ ವಿಭಾಗದಲ್ಲಿ ಘಟಕ ಅಧ್ಯಕ್ಷ ನೀತ್ ಅಯ್ಯಪ್ಪ ಅವರಿಗೆ ವಿದ್ಯಾರತ್ನ ಪುರಸ್ಕಾರ್ ನೀಡಿ ಸನ್ಮಾನಿಸಲಾಯಿತು. ಮತ್ತು ೨ನೇ ವಲಯ ಆಡಳಿತ ಮಂಡಳಿ ಸಭೆಯನ್ನು ಆಯೋಜಿಸಿದಕ್ಕೆ ಘಟಕಕ್ಕೆ ವಿಶೇಷ ಮನ್ನಣೆ ಪ್ರಶಸ್ತಿ, ಘಟಕ ಅಧ್ಯಕ್ಷರಿಗೆ ವಿಶೇಷ ಮನ್ನಣೆ ಪ್ರಶಸ್ತಿ ಸೇರಿದಂತೆ ವಿವಿಧ ವಿಭಾಗಗಳಲ್ಲಿ ೧೫ಕ್ಕೂ ಹೆಚ್ಚು ಪ್ರಶಸ್ತಿಯನ್ನು ಜೆಸಿಐ ಪೊನ್ನಂಪೇಟೆ ನಿಸರ್ಗ ಘಟಕವು ಪಡೆದುಕೊಂಡಿತು. ಪ್ರಶಸ್ತಿಯನ್ನು ವಲಯಾಧ್ಯಕ್ಷೆ ಯಶಸ್ವಿನಿ, ವಲಯ ಉಪಾಧ್ಯಕ್ಷೆ ಆಶಾ ಜೈನ್ ಹಾಗೂ ವಲಯ ಘಟಕ ಆಡಳಿತ ಮಂಡಳಿಯವರಿAದ ನೀಡಲಾಯಿತು.

ವಲಯ ೧೪ರ ಪ್ರಾಂತ್ಯ ಡಿ ಉಪಾಧ್ಯಕ್ಷ ಕಳಸ ಘಟಕದ ಎಚ್. ಆರ್. ಪ್ರಶಾಂತ್, ಜೆಸಿಐ ಪೊನ್ನಂಪೇಟೆ ನಿಸರ್ಗ ಘಟಕದ ಖಜಾಂಚಿ ಬಿ.ಎಂ ಚಂಗಪ್ಪ, ಸದಸ್ಯರಾದ ಎಚ್. ಆರ್. ಸತೀಶ್, ಜೆ.ಪಿ ಸ್ವಾಮಿ, ಎಲ್ ಎನ್ ಅಣ್ಷಪ್ಪ, ಟಿ.ಎಸ್ ಅಕ್ಷಯ್, ಎಸ್‌ಎಂಎ ಸದಸ್ಯರಾದ ಬಿ.ಇ. ಕಿರಣ್, ಎನ್.ಜಿ. ಸುರೇಶ್ ಇದ್ದರು.