ಮಡಿಕೇರಿ, ಜು. ೮ : ರಾಜ್ಯ ಸರಕಾರದ ೫ ಗ್ಯಾರಂಟಿಗಳಲ್ಲಿ ಒಂದಾದ ಗೃಹಜ್ಯೋತಿ ಯೋಜನೆಯ ಫಲಾನುಭವಿಗಳಾಗಲು ನಾಗರಿಕರು ಸಲ್ಲಿಸಿರುವ ಅರ್ಜಿಯ ಸ್ಥಿತಿಗತಿ ಬಗ್ಗೆ ಮಾಹಿತಿ ಪಡೆಯಲು ಸರಕಾರದ ವೆಬ್ ಸೈಟ್ ನಲ್ಲಿಯೇ ಅವಕಾಶವಿದೆ.
sevಚಿsiಟಿಜhugs.ಞಚಿಡಿಟಿಚಿಣಚಿಞಚಿ.gov.iಟಿನಲ್ಲಿ ಅರ್ಜಿ ಸಲ್ಲಿಸಿದ ಬಳಿಕ ಅದೇ ವೆಬ್ ಸೈಟ್‌ನಲ್ಲಿ ‘ನಿಮ್ಮ ಅರ್ಜಿ ಸ್ಥಿತಿಯನ್ನು ತಿಳಿಯಿರಿ’ ಎಂಬ ಆಯ್ಕೆಯನ್ನು ಒತ್ತಿ ಅರ್ಜಿಯ ಸ್ಥಿತಿಗತಿ ಅರಿಯಬಹುದಾಗಿದೆ. ಇಲ್ಲಿ ನಿಮ್ಮ ಖಾತೆ ಸಂಖ್ಯೆ ನಮೂದಿಸಿದರೆ ಅರ್ಜಿ ಸಲ್ಲಿಕೆ ಯಶಸ್ವಿ ಆಗಿದೆಯಾ ಅಥವಾ ವಿಫಲ ಆಗಿದೆಯಾ ಎಂಬುದರ ಬಗ್ಗೆ ಮಾಹಿತಿ ಲಭ್ಯವಾಗಲಿದೆ. ವಿಫಲವಾಗಿದ್ದಲ್ಲಿ ಮತ್ತೆ ಅರ್ಜಿ ಸಲ್ಲಿಸಬಹುದು.
ಗೃಹಜ್ಯೋತಿ - ಅರ್ಜಿ ಸಲ್ಲಿಕೆ ಸ್ಥಿತಿಗತಿ ತಿಳಿಯಿರಿ
(ಮೊದಲ ಪುಟದಿಂದ)
ಮೊದಲು ನೋಂದಣಿ ಮಾಡಿದವರಿಗೆ ಸಮಸ್ಯೆ
ಅರ್ಜಿ ಸಲ್ಲಿಕೆ ಜೂನ್ ೧೫ರಂದೆ ಪ್ರಾರಂಭವಾಗಿದ್ದು, ಮೊದಲ ಕೆಲವು ದಿನಗಳ ಕಾಲ ತಾಂತ್ರಿಕ ಸಮಸ್ಯೆಗಳು ವೆಬ್‌ಸೈಟ್ ಅನ್ನು ಕಾಡುತ್ತಿತ್ತು.
ಈ ಸಂದರ್ಭ ಅರ್ಜಿ ಸಲ್ಲಿಸಿದವರ ಪೈಕಿ ವೆಬ್‌ಸೈಟ್ ಸರಿಯಾಗಿ ಸ್ವೀಕೃತಿ ಮಾಡಿಲ್ಲ. ಇಂತಹವರು ಮತ್ತೆ ಅರ್ಜಿ ಸಲ್ಲಿಸಲು ಹೋದರೆ ‘ಈಗಾಗಲೇ ನೋಂದಣಿಯಾಗಿದೆ’ ಎಂಬ ಸಂದೇಶ ಬರುತ್ತಿದ್ದು, ಇದನ್ನು ತಕ್ಷಣ ಸರಿಪಡಿಸುವಂತೆ ನಾಗರಿಕರು ಆಗ್ರಹಿಸಿದ್ದಾರೆ.