ಸುಂಟಿಕೊಪ್ಪ. ಜು. ೭: ಸುಂಟಿಕೊಪ್ಪ ಸನಿಹದ ಕೊಡಗರಹಳ್ಳಿ ವ್ಯಾಪ್ತಿಯಲ್ಲಿ ಕಾಡಾನೆಗಳ ಕಾಟ ದಿನೇ ದಿನೇ ಹೆಚ್ಚಾಗುತ್ತಿದ್ದು ಜನರು ಆತಂಕ ಎದುರಿಸುವಂತಾಗಿದೆ. ಇಂದು ಬೆಳಗಿನ ಜಾವ ಅಲ್ಲಿನ ಕೃಷ್ಣ ತೋಟದ ಗೇಟನ್ನು ಆನೆ ತುಳಿದು ಹಾನಿಪಡಿಸಿದೆ. ಕಾಡಾನೆಗಳ ದಾಳಿಯಿಂದ ವಿವಿಧ ಫಸಲುಗಳು ನಾಶಗೊಳ್ಳುತ್ತಿದ್ದು, ಜನರು ಭೀತಿಯೊಂದಿಗೆ ನಷ್ಟವನ್ನು ಅನುಭವಿಸುತ್ತಿದ್ದಾರೆ. ಜನರು ಹಾಗೂ ವಾಹನ ಸವಾರರು ಆತಂಕದಿAದಲೇ ತಿರುಗಾಡುವಂತಾಗಿದೆ. ಕಳೆದ ಕೆಲ ದಿನಗಳ ಹಿಂದೆ ಅಲ್ಲಿನ ಹಿಂದೂ ರುದ್ರಭೂಮಿಯ ಗೇಟನ್ನು ಆನೆಗಳು ಹಾನಿಪಡಿಸಿತ್ತು. ಅರಣ್ಯಾಧಿಕಾರಿಗಳು ಈ ಬಗ್ಗೆ ಗಮನಹರಿಸಿ ಕಾಡಾನೆ ಹಾವಳಿ ತಡೆಗೆ ಕ್ರಮ ಕೈಗೊಳ್ಳುವಂತೆ ಜನರು ಆಗ್ರಹಿಸಿದ್ದಾರೆ. - ರಾಜು ರೈ