ವೀರಾಜಪೇಟೆ, ಜು. ೭: ವೀರಾಜಪೇಟೆ ನಗರದಲ್ಲಿ ನಿರ್ಮಾಣಗೊಂಡಿರುವ ಡಾ. ಬಿ.ಆರ್. ಅಂಬೇಡ್ಕರ್ ಭವನದ ಕಾಮಗಾರಿ ಮುಗಿಯುವ ಹಂತದಲ್ಲಿದ್ದು, ಇನ್ನು ಬಾಕಿ ಇರುವ ಸಣ್ಣ ಪುಟ್ಟ ಕೆಲಸ ಪೂರ್ಣಗೊಳಿಸುವ ಮೂಲಕ ಸಾರ್ವಜನಿಕರ ಉಪಯೋಗಕ್ಕೆ ನೀಡುವಂತೆ ಅಂಬೇಡ್ಕರ್ ಯೋಜನಾಭಿವೃದ್ಧಿ ಸಂಘದಿAದ ವೀರಾಜಪೇಟೆ ಶಾಸಕ ಎ.ಎಸ್. ಪೊನ್ನಣ್ಣ ಅವರಿಗೆ ಮನವಿ ಸಲ್ಲಿಸಲಾಯಿತು.
ಅಂಬೇಡ್ಕರ್ ಭವನ ಕಟ್ಟಡಕ್ಕೆ ಕಳೆದ ೫ ವರ್ಷಗಳ ಹಿಂದೆ ಭೂಮಿ ಪೂಜೆ ನಡೆದು ಅಂದಿನ ಸರಕಾರ ಕಟ್ಟಡಕ್ಕೆ ರೂ. ೧೮೦ ಲಕ್ಷ ಅನುದಾನ ಅಂದಾಜಿಸಲಾಗಿತ್ತು. ನಂತರ ನಿರ್ಮಿತಿ ಕೇಂದ್ರದವರು ಕಾಮಗಾರಿ ಪ್ರಾರಂಭಿಸಿದರು. ಕೊನೆಗೆ ಅಂದಿನ ಸರಕಾರ ರೂ. ೧೫೦ ಲಕ್ಷ ಬಿಡುಗಡೆಗೊಳಿಸಿ ನಂತರ ಇನ್ನುಳಿದ ರೂ. ೩೦ ಲಕ್ಷವನ್ನು ಸ್ಥಳೀಯ ಸಂಸ್ಥೆಗಳಿAದ ಪಡೆದುಕೊಳ್ಳಲು ತಿಳಿಸಿದಾಗ ತಾಲೂಕು ಪಂಚಾಯಿತಿಯಿAದ ಮಂಜೂರಾದ ರೂ. ೫ ಲಕ್ಷ, ಪಟ್ಟಣ ಪಂಚಾಯಿತಿಯಿAದ ರೂ. ೫ ಲಕ್ಷ ಹಾಗೂ ಇನ್ನು ಉಳಿಕೆ ಅನುದಾನವನ್ನು ತಾಲೂಕಿನ ಎಲ್ಲಾ ಗ್ರಾಮ ಪಂಚಾಯಿತಿಗಳಿAದ ಹಿಂದಿನ ಸರಕಾರ ಇದ್ದಾಗ ಪಡೆದು ಕಾಮಗಾರಿ ಮುಗಿಯುವ ಹಂತದಲ್ಲಿ ಅಂಬೇಡ್ಕರ್ ಭವನ ತಲೆಎತ್ತಿ ನಿಂತಿದೆ.
ಅದರಿಂದ ಕಟ್ಟಡದ ಉಳಿಕೆ ಕಾಮಗಾರಿ ಪೂರ್ಣಗೊಳಿಸಿ ಕಟ್ಟಡಕ್ಕೆ ಮೂಲಭೂತ ಸೌಕರ್ಯ ಒದಗಿಸಿಕೊಡುವುದರೊಂದಿಗೆ ಸಮಾಜ ಕಲ್ಯಾಣ ಇಲಾಖೆಗೆ ಸೂಕ್ತ ನಿರ್ದೇಶನ ನೀಡಬೇಕಾಗಿಯೂ ಕಟ್ಟಡವನ್ನು ಸರ್ಕಾರಿ ಕಾರ್ಯಕ್ರಮಗಳಿಗೆ ಮತ್ತು ಸಾರ್ವಜನಿಕರ ಉಪಯೋಗಕ್ಕೆ ಬಳಸಲು ಅನುವು ಮಾಡಿಕೊಡುವಂತೆ ಶಾಸಕ ಪೊನ್ನಣ್ಣರಿಗೆ ನೀಡಿದ ಮನವಿಯಲ್ಲಿ ಒತ್ತಾಯಿಸಿದ್ದಾರೆ.
ಮನವಿ ಸಲ್ಲಿಸುವ ಸಂದರ್ಭ ಅಂಬೇಡ್ಕರ್ ಯೋಜನಾಭಿವೃದ್ಧಿ ಸಂಘದ ಪದಾಧಿಕಾರಿಗಳಾದ ಎನ್. ವೀರಭದ್ರಯ್ಯ, ಹೆಚ್.ಆರ್. ಶಿವಪ್ಪ, ಮಹಾದೇವ, ಸಣ್ಣಯ್ಯ, ಗಾಯತ್ರಿ ನರಸಿಂಹ, ರಜನಿಕಾಂತ್ ಮತ್ತು ಸತೀಶ್ ಹಾಜರಿದ್ದರು.