ಕೂಡಿಗೆ: ಹೆಬ್ಬಾಲೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹುಲಸೆ ಗ್ರಾಮದಲ್ಲಿರುವ ಸರಕಾರಿ ಪ್ರಾಥಮಿಕ ಶಾಲೆಯ ಆವರಣದಲ್ಲಿ ಹೆಬ್ಬಾಲೆ ಉಪ ವಲಯ ಅರಣ್ಯ ಇಲಾಖೆಯ ವತಿಯಿಂದ ವನ ಮಹೋತ್ಸವ ಕಾರ್ಯಕ್ರಮವನ್ನು ನಡೆಸಲಾಯಿತು.

ಕಾರ್ಯಕ್ರಮಕ್ಕೆ ಚಾಲನೆಯನ್ನು ಉಪ ವಲಯ ಅರಣ್ಯಾಧಿಕಾರಿ ಭರತ್ ರವರು ನೀಡಿದರು. ನಂತರ ಮಾತನಾಡಿ, ಗ್ರಾಮೀಣ ಪ್ರದೇಶದ ರೈತರಿಗೆ ಅನುಕೂಲವಾಗುವ ದೃಷ್ಟಿಯಿಂದ ಕಣಿವೆಯ ಕಾವೇರಿ ನದಿ ದಡ ಸಮೀಪ ಸಸ್ಯ ಕ್ಷೇತ್ರದಲ್ಲಿ ವಿವಿಧ ಜಾತಿ ಸಸಿಗಳನ್ನು ಬೆಳೆಸಲಾಗಿದೆ. ಸರಕಾರ ನಿಗದಿ ಮಾಡಿದ ರಿಯಾಯಿತಿ ದರದ ಹಣವನ್ನು ಪಾವತಿಸಿ ಸಸಿಗಳನ್ನು ಪಡೆದುಕೊಂಡು ರೈತರು ತಮ್ಮ ಜಮೀನಿನ ಬದಿಗಳ ಅಂಚಿನಲ್ಲಿ ನೆಡಬಹುದಾಗಿದೆ ಎಂದರು.

ಗ್ರಾಮ ಪಂಚಾಯಿತಿ ಸದಸ್ಯ ಮಹೇಶ್ ವನಮಹೋತ್ಸವದ ವಿಷಯದ ಬಗ್ಗೆ ಮಾತನಾಡಿದರು. ವಿದ್ಯಾರ್ಥಿಗಳಿಗೆ ಪ್ರತಿಜ್ಞಾ ವಿಧಿಯನ್ನು ಬೋಧಿಸಿದರು. ಈ ಸಂದರ್ಭ ಗ್ರಾಮ ಪಂಚಾಯಿತಿ ಸದಸ್ಯ ಮಹೇಶ್, ಶಾಲಾ ಮುಖ್ಯೋಪಾಧ್ಯಾಯಿನಿ ಗೀತಾ, ಸಹ ಶಿಕ್ಷಕರು ಅರಣ್ಯ ವೀಕ್ಷಕ ರಾಜಪ್ಪ, ರಕ್ಷಕರಾದ ವರುಣ್, ಸುರೇಶ್, ವೇದಮೂರ್ತಿ ಸೇರಿದಂತೆ ಶಾಲಾ ವಿದ್ಯಾರ್ಥಿಗಳು ಹಾಜರಿದ್ದರು.ಕರಿಕೆ: ಮಡಿಕೇರಿ ಉಪ ವಿಭಾಗ ಸಂಪಾಜೆ ಅರಣ್ಯ ವಲಯದ ಪ್ರಾಥಮಿಕ ಶಾಲೆಯಲ್ಲಿ ವನ ಮಹೋತ್ಸವ ಆಚರಿಸಲಾಯಿತು. ೨೦೨೩-೨೪ ನೇ ಸಾಲಿನಲ್ಲಿ ಜುಲೈ ಒಂದರಿAದ ಏಳರವರೆಗೆ ಕೋಟಿ ಸಸಿಗಳ ನೆಟ್ಟು ಕರ್ನಾಟಕದಲ್ಲಿ ಹಸಿರು ಹೊದಿಕೆ ಕ್ರಾಂತಿ ಮಾಡುವ ನಿಟ್ಟಿನಲ್ಲಿ ಈ ವನ ಮಹೋತ್ಸವ ಆಚರಿಸಲಾಗುತ್ತಿದೆ.

ಕಾರ್ಯಕ್ರಮದಲ್ಲಿ ಸಂಪಾಜೆ ವಲಯ ಅರಣ್ಯ ಅಧಿಕಾರಿ ಮಧುಸೂದನ್ ಎಂ.ಕೆ., ಉಪ ವಲಯ ಅರಣ್ಯ ಅಧಿಕಾರಿ ವಿಜೇಂದ್ರ ಕುಮಾರ್ ಎಂ., ಬಸವರಾಜಪ್ಪ, ಎನ್.ಎಚ್. ಪ್ರೇಮ್ ಕುಮಾರ್, ಸಿಬ್ಬಂದಿಗಳು ಗ್ರಾಮ ಪಂಚಾಯಿತಿ ಆಡಳಿತ ಮಂಡಳಿ, ಶಾಲಾಭಿವೃದ್ಧಿ ಸಮಿತಿ, ಶಿಕ್ಷಕರು, ವಿದ್ಯಾರ್ಥಿಗಳು ಭಾಗವಹಿಸಿದ್ದರು.

ಕೂಡಿಗೆ: ನಾವು ನಮ್ಮ ಸುತ್ತಮುತ್ತಲಿನ ಪರಿಸರದಲ್ಲಿ ಹೆಚ್ಚೆಚ್ಚು ಗಿಡ- ಮರಗಳನ್ನು ಬೆಳೆಸಿ ಅರಣ್ಯ ಪ್ರದೇಶವನ್ನು ವೃದ್ಧಿಸುವ ಮೂಲಕ ಉತ್ತಮ ಪರಿಸರ ವ್ಯವಸ್ಥೆಯೊಂದಿಗೆ ಭವಿಷ್ಯಕ್ಕಾಗಿ ನೀರು ಮತ್ತು ಜೀವ ವೈವಿಧ್ಯ ಸಂರಕ್ಷಣೆ ಮಾಡಲು ಸಮುದಾಯದ ಸಹಕಾರ ಅಗತ್ಯ ಎಂದು ಅರಣ್ಯ ಇಲಾಖೆಯ ಮಡಿಕೇರಿ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಎ.ಟಿ.ಪೂವಯ್ಯ ಹೇಳಿದರು.

ಅರಣ್ಯ ಇಲಾಖೆಯ ಕೊಡಗು ವೃತ್ತದ ಮಡಿಕೇರಿ ವಿಭಾಗ ಮತ್ತು ಕುಶಾಲನಗರ ಅರಣ್ಯ ವಲಯ ಹಾಗೂ ಶಾಲಾ ಶಿಕ್ಷಣ ಇಲಾಖೆಯ ರಾಷ್ಟಿçÃಯ ಹಸಿರು ಪಡೆಯ ಇಕೋ ಕ್ಲಬ್ ಘಟಕದ ವತಿಯಿಂದ ಕುಶಾಲನಗರ ತಾಲ್ಲೂಕಿನ ಬಸವನಹಳ್ಳಿ ಸರ್ಕಾರಿ ಪ್ರೌಢಶಾಲೆಯಲ್ಲಿ ನಿಸರ್ಗ ಇಕೋ ಕ್ಲಬ್ ಹಾಗೂ ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು ಜಿಲ್ಲಾ ಸಮಿತಿಯ ಸಹಯೋಗದಲ್ಲಿ ಶಾಲಾವರಣದಲ್ಲಿ "ನಮ್ಮ ನಡೆ ಹಸಿರೆಡೆಗೆ'( ಗ್ರೋ ಗ್ರೀನ್ ) ಹಾಗೂ 'ನನ್ನ ಗಿಡ ನನ್ನ ಹೆಮ್ಮೆ' ಅಂಗವಾಗಿ ಏರ್ಪಡಿಸಿದ್ದ ವನ ಮಹೋತ್ಸವ ಸಪ್ತಾಹ :೨೦೨೩ ರ ಅಂಗವಾಗಿ ೧೦೦ ಅರಣ್ಯ ಸಸಿ ನೆಡುವ ಕಾರ್ಯಕ್ಕೆ ಚಾಲನೆ ನೀಡಿ ಮಾತನಾಡಿದರು.

ಜಿಲ್ಲೆಯಲ್ಲಿ ಉತ್ತಮ ಹಸಿರು ಹೊದಿಕೆಯೊಂದಿಗೆ ಶೇ.೪೫ ರಷ್ಟು ಅರಣ್ಯ ಪ್ರದೇಶವಿದೆ.

ಜಿಲ್ಲೆಯ ಶಾಲಾ- ಕಾಲೇಜು, ಸರ್ಕಾರಿ ಸಂಸ್ಥೆಗಳ ಆವರಣ, ಅರಣ್ಯ ಇಲಾಖೆ ಸೇರಿದಂತೆ ಸಾರ್ವಜನಿಕ ಸ್ಥಳಗಳಲ್ಲಿ ಅರಣ್ಯ ಸಸಿಗಳನ್ನು ನೆಟ್ಟು ಬೆಳೆಸುವ ಮೂಲಕ ಜಿಲ್ಲೆಯಲ್ಲಿ ಅರಣ್ಯ ಪ್ರದೇಶವನ್ನು ವೃದ್ಧಿಸಲು ಕ್ರಮವಹಿಸಲಾಗಿದೆ ಎಂದರು.

ಸ್ವಚ್ಛAದ ವಾತಾವರಣ ನಿರ್ಮಾಣಕ್ಕೆ ಪ್ರತಿಯೊಬ್ಬ ನಾಗರಿಕರು ಕೈಜೋಡಿಸಬೇಕು. ಪ್ರಸ್ತುತ ಕಾರ್ಖಾನೆ, ವಾಹನಗಳ ದಟ್ಟಣೆಯಿಂದ ಅಪಾರ ಪ್ರಮಾಣದಲ್ಲಿ ಪರಿಸರ ಹಾನಿ ಉಂಟಾಗುತ್ತಿದೆ. ಹೀಗಾಗಿ ನಗರದಲ್ಲಿ ಹೆಚ್ಚು ಸಸಿಗಳನ್ನು ನೆಟ್ಟು ಉತ್ತಮ ವಾತಾವರಣ ನಿರ್ಮಿಸುವ ಕೆಲಸ ಮಾಡಬೇಕು ಎಂದು ಪೂವಯ್ಯ ಹೇಳಿದರು.

ಶಿಕ್ಷಣ ಇಲಾಖೆಯ ರಾಷ್ಟಿçÃಯ ಹಸಿರು ಪಡೆಯ ಜಿಲ್ಲಾ ನೋಡಲ್ ಅಧಿಕಾರಿಯೂ ಆದ ಕೂಡುಮಂಗಳೂರು ಸರ್ಕಾರಿ ಪ್ರೌಢಶಾಲೆಯ ಮುಖ್ಯ ಶಿಕ್ಷಕ ಟಿ.ಜಿ. ಪ್ರೇಮಕುಮಾರ್ ಮಾತನಾಡಿ, ವಿದ್ಯಾರ್ಥಿಗಳು ಪರಿಸರ ಜಾಗೃತಿ ಮೂಡಿಸಿಕೊಂಡು ತಲಾ ಒಂದು ಸಸಿ ನೆಟ್ಟು ಪರಿಸರ ಸಂರಕ್ಷಣೆಗೆ ಪಣ ತೊಡಬೇಕು ಎಂದರು.

ಪರಿಸರವನ್ನು ಸಂರಕ್ಷಿಸುವ ಕಾರ್ಯ ಪ್ರತಿಯೊಬ್ಬನ ಕರ್ತವ್ಯವಾಗಿದ್ದು, ಪ್ರಕೃತಿ ನೀಡುವ ಆಮ್ಲಜನಕದ ಮಹತ್ವವನ್ನು ನಾವು ಅರಿಯಬೇಕಾಗಿದೆ ಎಂದರು. ಬಸವನಹಳ್ಳಿ ಲ್ಯಾಂಪ್ಸ್ ಸೊಸೈಟಿಯ ಅಧ್ಯಕ್ಷ ಅರುಣ್ ರಾವ್ ಮಾತನಾಡಿ, ಇಂತಹ ಪರಿಸರ ಕಾರ್ಯಕ್ರಮಕ್ಕೆ ಎಲ್ಲರೂ ಕೈಜೋಡಿಸಬೇಕು ಎಂದರು. ಶಾಲಾ ಮುಖ್ಯ ಶಿಕ್ಷಕಿ ಕೆ.ಎಂ. ಅಯಚ್ಚು, ಎನ್.ಎಸ್.ಎಸ್.ಅಧಿಕಾರಿ ಎ.ಎ.ಲಕ್ಷö್ಮಣ್ ಮಾತನಾಡಿದರು.

ಕಾವೇರಿ ನದಿ ಸಂರಕ್ಷಣಾ ಸಮಿತಿಯ ಸಂಚಾಲಕ ಎಂ.ಎನ್. ಚಂದ್ರಹೋಹನ್, ಎಸಿಎಫ್ ಎ.ಎ.ಗೋಪಾಲ್, ಆರ್.ಎಫ್.ಓ. ಕೆ.ವಿ.ಶಿವರಾಂ, ಡಿಆರ್‌ಎಫ್‌ಓಗಳಾದ ಅನಿಲ್ ಡಿ'ಸೋಜ, ಕೆ.ಎನ್. ದೇವಯ್ಯ, ಕೆ.ಎಸ್.ಸುಬ್ರಾಯ, ಲ್ಯಾಂಪ್ಸ್ ಸೊಸೈಟಿಯ ಮಾಜಿ ಅಧ್ಯಕ್ಷರಾದ ಕೆ.ಸಿ. ಉದಯಕುಮಾರ್, ಕಾಳಿಂಗ, ನಿರ್ದೇಶಕಿ ಕಾವೇರಿ, ಅರಣ್ಯ ರಕ್ಷಕರಾದ ಮಂಜೇಗೌಡ, ದಿನೇಶ್, ಸಿದ್ದರಾಮ, ಶಿಕ್ಷಕರು, ಅರಣ್ಯ ವೀಕ್ಷಕರು, ವಿದ್ಯಾರ್ಥಿಗಳು ಇದ್ದರು.

ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು "ಕಾಡು ಬೆಳೆಸಿ ನಾಡು ಉಳಿಸಿ’, ‘ಹಸಿರೇ ಉಸಿರು’, 'ಪಶ್ಚಿಮ ಘಟ್ಟ ಸಂರಕ್ಷಣೆ ನಮ್ಮೆಲ್ಲರ ಹೊಣೆ', 'ಗಿಡನೆಟ್ಟು ಬೆಳೆಸೋಣ ಬನ್ನಿ' ಎಂಬಿತ್ಯಾದಿ ಪರಿಸರ ಘೋಷಣೆಗಳ ಭಿತ್ತಿ ಫಲಕಗಳನ್ನು ಹಿಡಿದು ಘೋಷಣೆಗಳನ್ನು ಹಾಕಿದರು.