ಮಡಿಕೇರಿ, ಜು. ೭: ಸರಕಾರದ ಮುಖ್ಯ ವಿದ್ಯುತ್ ಪರಿವೀಕ್ಷಕರಾಗಿ ಕೊಡಗಿನವರಾದ ತೀತಿರ ರೋಶನ್ ಅಪ್ಪಚ್ಚು ಅವರು ನೇಮಕಗೊಂಡಿದ್ದಾರೆ. ಈ ಸ್ಥಾನಕ್ಕೆ ಇವರು ಪದೋನ್ನತಿ ಹೊಂದಿದ್ದು ಇದರೊಂದಿಗೆ ವಿದ್ಯುತ್ ಇಲಾಖೆಯ ಹೆಚ್ಚುವರಿ ಕಾರ್ಯ ದರ್ಶಿಗಳಾಗಿಯೂ ನಿಯುಕ್ತಿಗೊಂಡಿದ್ದಾರೆ.
ರಾಜ್ಯ ಸರ್ಕಾರದ ಇಂಧನ ಸಚಿವಾಲಯದ ಅಧೀನದಲ್ಲಿ ಬರುವ ವಿದ್ಯುತ್ ಪರಿವೀಕ್ಷಣಾ ಇಲಾಖೆಯ ಪ್ರಬಾರ ಮುಖ್ಯ ವಿದ್ಯುತ್ ಪರಿವೀಕ್ಷಕರಾಗಿದ್ದ ತೀತಿರ ರೋಷನ್ ಅಪ್ಪಚ್ಚು ಅವರನ್ನು ಸರ್ಕಾರ ಇದೀಗ ಮುಖ್ಯ ವಿದ್ಯುತ್ ಪರಿವೀಕ್ಷಕರಾಗಿ ನೇಮಕ ಮಾಡಿ ಆದೇಶ ಹೊರಡಿಸಿದ್ದು ಇದರೊಂದಿಗೆ ವಿದ್ಯುತ್ ಇಲಾಖೆಯ ಹೆಚ್ಚುವರಿ ಕಾರ್ಯದರ್ಶಿಗಳಾಗಿ ನೇಮಕಗೊಳಿಸಿದ್ದು, ವಿದ್ಯುತ್ ಇಲಾಖೆಯಲ್ಲಿ ರಾಜ್ಯಕ್ಕೆ ಇದು ಏಕೈಕ ಹುದ್ದೆಯಾಗಿದ್ದು ಇಲಾಖೆಯ ಮುಖ್ಯಸ್ಥರಾಗಿದ್ದಾರೆ.
ಹುದಿಕೇರಿಯ ಜಿಎಂಪಿ ಪ್ರಾಥಮಿಕ ಶಾಲೆಯಲ್ಲಿ ತಮ್ಮ ವಿದ್ಯಾಭ್ಯಾಸ ಆರಂಭಿಸಿದ ರೋಶನ್ ಅಪ್ಪಚ್ಚು ನಂತರ ಮೈಸೂರಿನ ರಾಮಕೃಷ್ಣ ವಿದ್ಯಾಶಾಲೆಯಲ್ಲಿ ಪ್ರೌಢಶಾಲಾ ವಿದ್ಯಾಭ್ಯಾಸ ಮುಗಿಸಿದ್ದರು. ಚಿಕ್ಕಮಗಳೂರಿನ ಆದಿಚುಂಚನಗಿರಿ ಇನ್ಸಿ÷್ಟಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ಇಲೆಕ್ಟಿçಕಲ್ ಮತ್ತು ಎಲೆಕ್ಟಾçನಿಕ್ಸ್ ವಿಭಾಗದಲ್ಲಿ ಇಂಜಿನಿಯರಿAಗ್ ಪದವಿ ಪಡೆದ ಇವರು ಕೋಲ್ಕತಾದ ಮೆಂಬರ್ ಆಫ್ ಇನ್ಸಿ÷್ಟಟ್ಯೂಟ್ ಆಫ್ ಇಂಜಿನಿಯರ್ಸ್ ಮತ್ತು ದೆಹಲಿಯ ಮೆಂಬರ್ ಆಫ್ ಇಂಡಿಯನ್
ಸೊಸೈಟಿ ಫಾರ್ ಟೆಕ್ನಿಕಲ್ ಎಜುಕೇಷನ್ನಲ್ಲಿ ಉನ್ನತ ಶಿಕ್ಷಣವನ್ನು ಪಡೆದರು.
ಆರಂಭದಲ್ಲಿ ಗೋಣಿಕೊಪ್ಪಲಿನ ಕಾವೇರಿ ಪಾಲಿಟೆಕ್ನಿಕ್ ವಿದ್ಯಾಸಂಸ್ಥೆಯಲ್ಲಿ ಉಪನ್ಯಾಸಕರಾಗಿ ಸೇವೆ ಆರಂಭಿಸಿದ ಇವರು ನಂತರ ೧೯೯೪ರಲ್ಲಿ ಕೆ.ಪಿ.ಎಸ್.ಸಿ. ಪರೀಕ್ಷೆಯಲ್ಲಿ ತೇರ್ಗಡೆಗೊಂಡು ಅಸಿಸ್ಟೆಂಟ್ ಎಲೆಕ್ಟಿçಕಲ್ ಇನ್ಸ್ಪ್ಪೆಕ್ಟರ್ ಆಗಿ ನೇಮಕಗೊಂಡರು. ನಂತರ ಡೆಪ್ಯುಟಿ ಎಲೆಕ್ಟಿçಕಲ್ ಇನ್ಸ್ಪ್ಪೆಕ್ಟರ್ ಆಗಿ, ಎಲೆಕ್ಟಿçಕಲ್ ಇನ್ಸ್ಪ್ಪೆಕ್ಟರ್ ಆಗಿ ಸೇವೆ ಸಲ್ಲಿಸಿ, ೨೦೧೮ರಲ್ಲಿ ಡೆಪ್ಯುಟಿ ಚೀಫ್ ಎಲೆಕ್ಟಿçಕಲ್ ಇನ್ಸ್ಪ್ಪೆಕ್ಟರ್ ಬಡ್ತಿ ಹೊಂದಿ ನಂತರ ಪ್ರಭಾರ ಮುಖ್ಯ ವಿದ್ಯುತ್ ಪರಿವೀಕ್ಷಕರಾಗಿ ನೇಮಕಗೊಂಡಿದ್ದರು. ಕಳೆದ ಸರ್ಕಾರ ಇರುವಾಗಲೇ ಮುಖ್ಯ ವಿದ್ಯುತ್ ಪರಿವೀಕ್ಷಕರಾಗಿ ನೇಮಕಗೊಂಡಿದ್ದರಾದರು ಚುನಾವಣೆ ನೀತಿ ಸಂಹಿತೆಯಿAದ ಹುದ್ದೆ ಹಾಗೆ ಉಳಿದಿತ್ತು. ಇದೀಗ ನೂತನ ಸರ್ಕಾರ ಅಪ್ಪಚ್ಚು ಅವರನ್ನು ಮುಖ್ಯ ವಿದ್ಯುತ್ ಪರಿವೀಕ್ಷಕರಾಗಿ ನೇಮಕ ಮಾಡಿ ಆದೇಶ ಹೊರಡಿಸುವುದರ ಜೊತೆಗೆ ವಿದ್ಯುತ್ ಇಲಾಖೆಯ ಹೆಚ್ಚುವರಿ ಕಾರ್ಯದರ್ಶಿಗಳಾಗಿ ನೇಮಿಸಿ ಆದೇಶ ಹೊರಡಿಸಿದೆ.
ಇವರು ಪೊನ್ನಂಪೇಟೆ ತಾಲೂಕಿನ ಹುದಿಕೇರಿ ಗ್ರಾಮದವರಾದ ತೀತೀರ ನಂಜಪ್ಪ ಹಾಗೂ ಶಾಂತಿ ದಂಪತಿ ಪುತ್ರ ರೋಶನ್ ಅಪ್ಪಚ್ಚು ಮೈಸೂರು, ಮಂಡ್ಯ, ಬೆಂಗಳೂರು, ಶಿವಮೊಗ್ಗ, ಕೊಲಾರ, ಕಲ್ಬುರ್ಗಿ, ರಾಯಚೂರು ಬಳ್ಳಾರಿ ಮೊದಲಾದ ಕಡೆಗಳಲ್ಲಿ ಸೇವೆ ಸಲ್ಲಿಸಿದ್ದಾರೆ. ಇವರು ಅಮ್ಮತಿ ಪಚ್ಚಾಟ್ ಗ್ರಾಮದ ಬೇರೆರ ನಾಣಯ್ಯ ಹಾಗೂ
ಪೊನ್ನಮ್ಮ ದಂಪತಿ ಮಗಳಾದ ಶರ್ಮಿಲಿ ಅವರನ್ನು ಮದುವೆಯಾಗಿದ್ದಾರೆ.