ಕರಿಕೆ, ಜು. ೭: ಕೆಲ ದಿನಗಳ ಹಿಂದೆ ಸುರಿದ ವ್ಯಾಪಕ ಮಳೆಗೆ ಮನೆಯ ಮೇಲ್ಛಾವಣಿ ಕುಸಿತವಾದ ಕರಿಕೆ ಚೆತ್ತುಕಾಯ ಹದಿಮೂರನೇ ಮೈಲು ನಿವಾಸಿ ಸುರೇಶ್ ಬಾಬು ಎಂಬವರಿಗೆ ಗ್ರಾಮ ಪಂಚಾಯಿತಿ ವತಿಯಿಂದ ತುರ್ತಾಗಿ ಟಾರ್ಪಲಿನ್ ವಿತರಿಸಲಾಯಿತು.

ಈ ಸಂದರ್ಭ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಎನ್. ಬಾಲಚಂದ್ರ ನಾಯರ್, ಅಭಿವೃದ್ಧಿ ಅಧಿಕಾರಿ ಗಣಪತಿ ಪಿ.ಪಿ. ಹಾಜರಿದ್ದರು.