ವೀರಾಜಪೇಟೆ, ಜು. ೭: ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸುಮಾರು ಇಪ್ಪತ್ತು ವರ್ಷಗಳ ಕಾಲ ದೈಹಿಕ ಶಿಕ್ಷಣ ಶಿಕ್ಷಕಿಯಾಗಿ ಸೇವೆ ಸಲ್ಲಿಸಿ, ಹಾತೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ವರ್ಗಾವಣೆಗೊಂಡಿರುವ ಎ. ಕೆ. ನೇತ್ರಾವತಿ ಅವರನ್ನು ಪ್ರೌಢಶಾಲಾ ಶಿಕ್ಷಕರು ಹಾಗೂ ಅಡುಗೆ ಸಹಾಯಕರು ನೆನಪಿನ ಕಾಣಿಕೆ ನೀಡಿ ಬೀಳ್ಕೊಟ್ಟರು.
ಈ ಸಂದರ್ಭ ಅಮ್ಮತ್ತಿ ಕ್ಲಸ್ಟರ್ನ ಸಿ.ಆರ್.ಪಿ. ಪ್ರವೀಣ್ ಹಾಗೂ ಪ್ರೌಢ ಶಾಲೆಯ ಮುಖ್ಯ ಶಿಕ್ಷಕಿ ಅರುಣ ಆನ್ಸಿ ಡಿಸೋಜಾ, ಸಹಶಿಕ್ಷಕರಾದ ಲೀಲಾವತಿ, ಲಿನ್ನಿ, ಪವಿತ್ರ, ಕಿರಣ್ ಕುಮಾರ್, ಅಲ್ಲಾಬಕ್ಷ ಬಡೇಘರ್, ಸಾವಿತ್ರಿ ಹಾಗೂ ಆಶಾರಾಣಿ, ಯಶೋಧ ಮತ್ತು ಎಲ್ಲಾ ಅಡುಗೆ ಸಿಬ್ಬಂದಿಗಳು ಹಾಜರಿದ್ದರು.