ಮಡಿಕೇರಿ, ಜು. ೭: ಹಾಕತ್ತೂರು ಗ್ರಾಮದ ತೋಟವೊಂದರಲ್ಲಿ ಕೂಲಿ ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದು, ಲೈನ್ಮನೆಯಲ್ಲಿ ನೆಲೆಸಿದ್ದ ನಂಜುAಡ (೪೦) ಅವರು ಕಾಣೆಯಾಗಿರುವುದಾಗಿ ಪತ್ನಿ ಮಡಿಕೇರಿ ಗ್ರಾಮಾಂತರ ಠಾಣೆಗೆ ದೂರು ನೀಡಿದ್ದಾರೆ.
ನಂಜುAಡ ಅವರು ಪ್ರತಿನಿತ್ಯ ಕುಡಿದು ಜಗಳವಾಡುತ್ತಿದ್ದು, ಜೂನ್ ೨೭ ರಂದು ಮಾಲೀಕರಿಂದ ರೂ. ೫೦೦ ಪಡೆದು ತೆರಳಿದವರು ಮನೆಗೆ ವಾಪಸ್ಸಾಗಲಿಲ್ಲ ಎಂದು ಪತ್ನಿ ದೂರು ನೀಡಿದ್ದಾರೆ. ವ್ಯಕ್ತಿ ಪತ್ತೆಯಾದಲ್ಲಿ ಮಡಿಕೇರಿ ಗ್ರಾಮಾಂತರ ಠಾಣೆ ದೂ.೦೮೨೭೨-೨೨೮೭೭೭ ಅನ್ನು ಸಂಪರ್ಕಿಸುವAತೆ ಕೋರಲಾಗಿದೆ.