ಗೋಣಿಕೊಪ್ಪ ವರದಿ, ಜು. ೭: ವಿದ್ಯುತ್ ಸಮಸ್ಯೆ ಪರಿಹಾರಕ್ಕೆ ಆಗ್ರಹಿಸಿ ತಾ. ೧೦ ರಂದು ಮಡಿಕೇರಿ ಸೆಸ್ಕ್ ಕಛೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಲು ರೈತ ಸಂಘದ ವತಿಯಿಂದ ನಿರ್ಧಾರ ಕೈಗೊಳ್ಳಲಾಯಿತು.
ಗೋಣಿಕೊಪ್ಪ ಕಚೇರಿಯಲ್ಲಿ ನಡೆದ ರೈತರ ಹೋರಾಟದ ಪೂರ್ವಭಾವಿ ಸಭೆಯಲ್ಲಿ ಕಾಫಿ ತೋಟದಲ್ಲಿ ಹಾದು ಹೋಗಿರುವ ವಿದ್ಯುತ್ ಮಾರ್ಗ ದಲ್ಲಿರುವ ಕಾಡು ತೆರವು ಗೊಳಿಸದಿರುವುದು, ಕೆಟ್ಟುಹೋಗಿರುವ ಟ್ರಾನ್ಸ್ ಫಾರ್ಮರ್ಗಳನ್ನು ದುರಸ್ತಿಪಡಿಸದೆ ನಿರ್ಲಕ್ಷö್ಯತೋರುತ್ತಿರುವ ಬಗ್ಗೆ ಅಸಮಾಧಾನ ವ್ಯಕ್ತವಾಯಿತು.
ರೈತ ಸಂಘದ ಜಿಲ್ಲಾಧ್ಯಕ್ಷ ಕಾಡ್ಯಮಾಡ ಮನು ಸೋಮಯ್ಯ ಮಾತನಾಡಿ, ನಿರಂತರವಾಗಿ ವಿದ್ಯುತ್ ಸಮಸ್ಯೆ ತಲೆದೋರಿದೆ. ತೋಟಗಳಲ್ಲಿ ಮರದ ರೆಂಬೆಗಳನ್ನು ಕಡಿಯದೇ ಇರುವುದರಿಂದ ದಕ್ಷಿಣ ಕೊಡಗು ಹಾಗೂ ಸೋಮವಾರಪೇಟೆ ತಾಲೂಕಿನಲ್ಲಿ ವಿದ್ಯುತ್ ಆಗಾಗ್ಗೆ ಕಡಿತಗೊಳ್ಳುತ್ತಿದೆ. ಸೆಸ್ಕ್ ಅಧಿಕಾರಿಗಳ ಗಮನಕ್ಕೆ ತಂದರೂ ಸ್ಪಂದಿಸುತ್ತಿಲ್ಲ. ಕೆಟ್ಟಿರುವ ಟ್ರಾನ್ಸ್ಫಾರ್ಮರ್ ದುರಸ್ತಿಪಡಿಸದೆ ನಿರ್ಲಕ್ಷö್ಯ ವಹಿಸಲಾಗಿದೆ. ಇದರ ವಿರುದ್ಧ ಹೋರಾಟ ನಡೆಸುವುದು ಅನಿವಾರ್ಯ. ೧೦ ಹೆಚ್.ಪಿ. ಪಂಪ್ಸೆಟ್ಗಳಿಗೆ ಉಚಿತ ವಿದ್ಯುತ್ ನೀಡುವ ಬಗ್ಗೆ, ರೈತರಿಗೆ ಸಬ್ಸಿಡಿ ವಿಚಾರ, ಸೆಸ್ಕ್ ಅಧಿಕಾರಿಗಳು ಪರಿಶೀಲನೆ ನೆಪದಲ್ಲಿ ೧೦ ಹೆಚ್.ಪಿ. ನೀರಾವರಿ ಮೋಟಾರ್ ಬಳಸುತ್ತಿರುವ ರೈತರಿಗೆ ಅಧಿಕ ಬಿಲ್ ನೀಡುತ್ತಿರುವ ಬಗ್ಗೆ ಸೇರಿ ದಂತೆ ೧೦ ಅಂಶಗಳನ್ನು ಮುಂದಿಟು ್ಟಕೊಂಡು ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದರು
(ಮೊದಲ ಪುಟದಿಂದ) ಕಾಫಿ ಬೆಳೆಗಾರ ನೀತು ಮಾತನಾಡಿ, ಮನೆಯಲ್ಲಿ ವಾಸವಿಲ್ಲದಿದ್ದರೂ ಕೂಡ ತಿಂಗಳಿಗೆ ೧೨-೧೩ ಸಾವಿರ ವಿದ್ಯುತ್ ಬಿಲ್ ಬರುತ್ತಿದ್ದು, ಇಷ್ಟು ದೊಡ್ಡ ಮೊತ್ತವನ್ನು ಪಾವತಿಸಲು ಕಷ್ಟಕರವಾಗಿದೆ. ಸಮಸ್ಯೆ ಕುರಿತು ರೈತ ಸಂಘದ ಗಮನ ಸೆಳೆದಿದ್ದೇನೆ ಎಂದರು.
ಸAಚಾಲಕ ಪುಚ್ಚಿಮಾಡ ಸುಭಾಶ್ ಸುಬ್ಬಯ್ಯ, ಪ್ರಧಾನ ಕಾರ್ಯದರ್ಶಿ ಸುಜಯ್ ಬೋಪಯ್ಯ, ಖಜಾಂಚಿ ಇಟ್ಟೀರ ಸಬಿತ, ಕಾನೂನು ಸಲಹೆಗಾರ ಹೇಮಚಂದ್ರ, ವೀರಾಜಪೇಟೆ ತಾಲೂಕು ಅಧ್ಯಕ್ಷ ಭವಿಕುಮಾರ್, ಪೊನ್ನಂಪೇಟೆ ತಾಲೂಕು ಅಧ್ಯಕ್ಷ ಅಲೆಮಾಡ ಮಂಜುನಾಥ್, ಅಮ್ಮತ್ತಿ ಹೋಬಳಿ ಅಧ್ಯಕ್ಷ ಮಂಡೇಪAಡ ಪ್ರವೀಣ್, ಶ್ರೀಮಂಗಲ ಹೋಬಳಿ ಅಧ್ಯಕ್ಷ ಕಂಬ ಕಾರ್ಯಪ್ಪ ಇದ್ದರು.