ಮಡಿಕೇರಿ, ಜು. ೭: ಪೊನ್ನಂಪೇಟೆಯ ಅಪ್ಪಚ್ಚಕವಿ ವಿದ್ಯಾಲಯ ಹಿರಿಯ ಪ್ರಾಥಮಿಕ ಹಾಗೂ ಪ್ರೌಢಶಾಲೆಯ ವಿದ್ಯಾರ್ಥಿ ಸಂಘದ ಪದಗ್ರಹಣ ಸಮಾರಂಭವು ಶಾಲಾ ಆಡಳಿತ ಮಂಡಳಿಯ ಅಧ್ಯಕ್ಷರಾದ ಮಂಡಚAಡ ದಿನೇಶ್ ಚಿಟ್ಟಿಯಪ್ಪ ಅವರ ಅಧ್ಯಕ್ಷತೆಯಲ್ಲಿ ಇತ್ತೀಚೆಗೆ ನಡೆಯಿತು.

ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪ್ರಮುಖರಾದ ಕೈಬುಲಿರ ಪಾರ್ವತಿ ಅವರು ಪಾಲ್ಗೊಂಡಿದ್ದರು.

ವೇದಿಕೆಯಲ್ಲಿದ್ದ ಗಣ್ಯ ವ್ಯಕ್ತಿಗಳು ಕಾರ್ಯಕ್ರಮವನ್ನು ಉದ್ಘಾಟಿಸಿದರು. ಅಧ್ಯಕ್ಷರು ಹಾಗೂ ಮುಖ್ಯ ಅತಿಥಿಗಳು ಕಾಯಕ್ರಮದ ಕುರಿತು ಮಾತನಾಡಿ ವಿದ್ಯಾರ್ಥಿಗಳಿಗೆ ಹಿತವಚನಗಳನ್ನು ಬೋಧಿಸಿದರು.

ವಿದ್ಯಾರ್ಥಿ ಸಂಘದ ಎಲ್ಲಾ ನಾಯಕರಿಗೂ ಬ್ಯಾಡ್ಜ್ ವಿತರಣೆ ಮಾಡಿ, ಪ್ರತಿಜ್ಞಾವಿಧಿ ಬೋಧಿಸಲಾಯಿತು. ಶಾಲಾ ನಾಯಕಿ ಅಸ್ಮೀನಾ, ಉಪನಾಯಕಿಯಾಗಿ ಮುತ್ತಮ್ಮ ಶಿಸ್ತಿನ ನಾಯಕನಾಗಿ ನವನೀತ್ ಎ.ಡಿ., ಉಪನಾಯಕನಾಗಿ ಅಜಿತ್ ಪಿ.ಎನ್., ಕ್ರೀಡಾ ನಾಯಕನಾಗಿ ಶಾಹಿಲ್ ಎಂ.ಎಸ್., ಉಪನಾಯಕಿಯಾಗಿ ರಸಿಕಬಾನು, ಆಹಾರ ವಿಭಾಗದ ನಾಯಕನಾಗಿ ಮುಜಾಮಿಲ್ ಎಂ.ಎA., ಉಪನಾಯಕಿಯಾಗಿ ಅನನ್ಯ ಎನ್.ವಿ., ಸಾಂಸ್ಕೃತಿಕ ವಿಭಾಗದ ನಾಯಕಿಯಾಗಿ ಎಂ.ಎ. ಮುತ್ತಮ್ಮ, ಉಪನಾಯಕಿ ಯಾಗಿ ತನುಶ್ರೀ ಪದಗ್ರಹಣ ಮಾಡಿದರು.

ಕಾರ್ಯಕ್ರಮದಲ್ಲಿ ಶಾಲಾ ಆಡಳಿತ ಮಂಡಳಿಯ ಕಾರ್ಯದರ್ಶಿ ಗಳಾದ ಮೂಕಳಮಾಡ ಅರಸು ನಂಜಪ್ಪ, ಚಿರಿಯಪಂಡ ಇಮ್ಮಿ ಉತ್ತಪ್ಪ, ಮೂಕಳೆರ ಕಾವ್ಯ ಮಧುಕುಮಾರ್, ಕೊಣಿಯಂಡ ಸಂಜು ಸೋಮಯ್ಯ, ಮುಖ್ಯ ಶಿಕ್ಷಕರಾದ ತನುಜ, ಬೋಧಕ ಹಾಗೂ ಬೋಧಕೇತರ ಸಿಬ್ಬಂದಿಗಳು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ವಿದ್ಯಾರ್ಥಿಯಾದ ಆದಿಲ್ ಕಾರ್ಯಕ್ರಮವನ್ನು ನಿರೂಪಿಸಿದರು. ಸಹಶಿಕ್ಷಕಿಯಾದ ಗಲೀನಾ ಸರ್ವರಿಗೂ ವಂದಿಸಿದರು.