ಸೋಮವಾರಪೇಟೆ, ಜು.೭: ಸಮೀಪದ ತೋಳೂರುಶೆಟ್ಟಳ್ಳಿ ಗ್ರಾಮದ ಹೃದಯ ಭಾಗದಲ್ಲಿರುವ ಪ್ರಯಾಣಿಕರ ಬಸ್ ನಿಲ್ದಾಣ ಮದ್ಯಪಾನದ ಅಡ್ಡೆಯಾಗಿ ಮಾರ್ಪಟ್ಟಿದೆ.
ತೋಳೂರುಶೆಟ್ಟಳ್ಳಿ, ದೊಡ್ಡತೋಳೂರು, ಕೂತಿ ಗ್ರಾಮಗಳಿಗೆ ತೆರಳುವ ಜಂಕ್ಷನ್ ಇದಾಗಿದ್ದು, ರಾಜ್ಯಹೆದ್ದಾರಿಗೆ ಒತ್ತಿಕೊಂಡAತೆ ಸಾರ್ವಜನಿಕ ಪ್ರಯಾಣಿಕರಿಗೆ ಅನುಕೂಲವಾಗಲೆಂದು ಬಸ್ ನಿಲ್ದಾಣ ನಿರ್ಮಿಸಲಾಗಿದೆ.
ಈ ನಿಲ್ದಾಣದಲ್ಲಿ ಪ್ರತಿನಿತ್ಯ ಶಾಲಾ ಕಾಲೇಜಿಗೆ ತೆರಳುವ ವಿದ್ಯಾರ್ಥಿಗಳು, ಸಾರ್ವಜನಿಕರು ಬಸ್‌ಗಾಗಿ ಕಾಯುತ್ತಿರುತ್ತಾರೆ. ಇಂತಹ ಜನೋಪಯೋಗಿ ಬಸ್ ನಿಲ್ದಾಣವನ್ನು ಕೆಲ ಕುಡುಕರು ಮದ್ಯಪಾನದ ಅಡ್ಡೆಯನ್ನಾಗಿ ಮಾಡಿಕೊಂಡಿದ್ದಾರೆ.
ಸAಜೆ ಹಾಗೂ ರಾತ್ರಿವೇಳೆ ಬಸ್ ನಿಲ್ದಾಣದಲ್ಲಿ ಮದ್ಯ ಸೇವಿಸಿ ಅದರ ಪೊಟ್ಟಣಗಳನ್ನು ನಿಲ್ದಾಣದೊಳಗೆ ಎಸೆದು ಅಶುಚಿತ್ವಕ್ಕೆ ಕಾರಣರಾಗುತ್ತಿದ್ದಾರೆ. ಕೆಲ ಕುಡುಕರ ಅನಾಗರಿಕತೆ ಯಿಂದಾಗಿ ಬಸ್ ನಿಲ್ದಾಣದಲ್ಲಿ ಬಸ್‌ಗಾಗಿ ಕಾಯುವ ವಿದ್ಯಾರ್ಥಿಗಳು, ಮಹಿಳೆಯರು, ಸಾರ್ವಜನಿಕರಿಗೆ ಕಿರಿಕಿರಿ ಯಾಗುತ್ತಿದೆ.
ಸ್ಥಳೀಯ ಗ್ರಾಮ ಪಂಚಾಯಿತಿ ಮತ್ತು ಬೀಟ್ ಪೊಲೀಸರು ಇತ್ತ ಗಮನಹರಿಸಿ ಕುಡುಕರ ಅಡ್ಡೆಯಾಗಿರುವ ಬಸ್ ನಿಲ್ದಾಣವನ್ನು ಪ್ರಯಾಣಿಕರ ತಂಗುದಾಣವನ್ನಾಗಿಸಬೇಕೆAದು ಸಾರ್ವಜನಿಕರು ಒತ್ತಾಯಿಸಿದ್ದಾರೆ.