ಸೋಮವಾರಪೇಟೆ, ಜು. ೫: ಇಲ್ಲಿನ ಲಯನ್ಸ್ ಮತ್ತು ಲಿಯೋ ಕ್ಲಬ್ ಆಫ್ ಸೋಮವಾರಪೇಟೆಯ ಪದಗ್ರಹಣ ಕಾರ್ಯಕ್ರಮ ಶನಿವಾರ ಸ್ಥಳೀಯ ಒಕ್ಕಲಿಗರ ಸಮುದಾಯ ಭವನದಲ್ಲಿ ನಡೆಯಿತು.

ನೂತನ ಸಾಲಿನ ಪದಾಧಿಕಾರಿಗಳಿಗೆ ಜಿಲ್ಲಾ ಗವರ್ನರ್ ಡಾ. ಗೀತ ಪ್ರಕಾಶ್ ಪದಗ್ರಹಣ ನೆರವೇರಿಸಿದರು. ನಂತರ ಮಾತನಾಡಿ, ಲಯನ್ಸ್ ಸಂಸ್ಥೆಯು, ಸೇವೆಯಲ್ಲಿ ೧೦೦ ವರ್ಷಕ್ಕೂ ಹೆಚ್ಚಿನ ಸಮಯದಿಂದ ಕೆಲಸ ಮಾಡುವ ಮೂಲಕ ವಿಶ್ವದ ಅತಿ ಶ್ರೇಷ್ಠ ಸೇವಾ ಸಂಸ್ಥೆಯಾಗಿ ಗುರುತಿಸಿಕೊಂಡಿದೆ. ಸದಸ್ಯರಲ್ಲಿ ನಾಯಕತ್ವ ಗುಣಗಳನ್ನು ಬೆಳೆಸುವ ಕೆಲಸವನ್ನು ನಿರಂತರವಾಗಿ ಮಾಡಿಕೊಂಡು ಬರುತ್ತಿದೆ. ಯಾವುದೇ ಸಂಘ ಸಂಸ್ಥೆಗಳಲ್ಲಿ ಒಬ್ಬರ ಸೇವೆಗಿಂತಲೂ ಎಲ್ಲರೂ ಸೇರಿ ಮಾಡುವ ಸೇವೆ ಪ್ರಾಮುಖ್ಯತೆ ಪಡೆದಿದ್ದು, ಸಮಾಜದ ಕಟ್ಟ ಕಡೆಯ ವ್ಯಕ್ತಿಗೂ ಸಂಸ್ಥೆಯ ಸೇವೆ ಸಿಗುವಂತಾಗಬೇಕೆAದರು. ಕ್ಷೇತ್ರದ ಶಾಸಕ ಡಾ. ಮಂಥರ್ ಗೌಡ ಮಾತನಾಡಿ, ಜೀವನದಲ್ಲಿ ಸಮಾಜ ಸೇವೆ ಪ್ರಮುಖ ಸ್ಥಾನದಲ್ಲಿ ನಿಲ್ಲುತ್ತದೆ. ನಾವು ಮಾಡುವ ಎಲ್ಲ ಸೇವೆಗಳಲ್ಲಿ ಸಮಾಜ ಸೇವೆಯಿಂದ ಹೆಚ್ಚಿನ ಆತ್ಮತೃಪ್ತಿ ಪಡೆಯಬಹುದು. ಜೀವನದಲ್ಲಿ ಸೇವೆ ಮಾಡಲು ಸಿಕ್ಕ ಅವಕಾಶವನ್ನು ಬಳಸಿಕೊಳ್ಳಬೇಕು. ಸೇವಾ ಸಂಸ್ಥೆಗಳು ತಮ್ಮಲ್ಲಿ ಯುವಜನರನ್ನು ಹೆಚ್ಚಾಗಿ ಸದಸ್ಯರನ್ನಾಗಿ ಮಾಡಿಕೊಳ್ಳುವ ಮೂಲಕ, ಸಮಾಜ ಸೇವೆಗೆ ಅವರನ್ನು ಕೊಂಡೊಯ್ಯಬೇಕೆAದರು.

ನೂತನ ಸಾಲಿನ ಅಧ್ಯಕ್ಷ ಎ.ಎಸ್. ಮಹೇಶ್, ಕಾರ್ಯದರ್ಶಿ ಸಿ.ಕೆ. ಶಿವಕುಮಾರ್, ಖಜಾಂಚಿ ಕೆ.ಡಿ. ವೀರಪ್ಪ, ಲಿಯೋ ಸಂಸ್ಥೆಯ ಅಧ್ಯಕ್ಷೆ ಒ.ಪಿ. ಪ್ರತೀಕ್ಷ ಮತ್ತು ಪದಾಧಿಕಾರಿಗಳು ಪ್ರತಿಜ್ಞಾವಿಧಿ ಸ್ವೀಕರಿಸುವ ಮೂಲಕ ಅಧಿಕಾರ ಪಡೆದುಕೊಂಡರು.

ವೇದಿಕೆಯಲ್ಲಿ ಪ್ರಾಂತೀಯ ಅಧ್ಯಕ್ಷ ಅಂಬೆಕಲ್ ನವೀನ್, ವಲಯ ಸಂಯೋಜಕರಾದ ಮಹದೇವ್, ಕವಿತ, ಲಯನ್ಸ್ ಸಂಸ್ಥೆಯ ನಿರ್ಗಮಿತ ಅಧ್ಯಕ್ಷ ಸಿ.ಕೆ. ರೋಹಿತ್, ಕಾರ್ಯದರ್ಶಿ ಕೆ.ಎನ್. ಶಿವಕುಮಾರ್, ಖಜಾಂಚಿ ಜಿ.ಟಿ. ಯೋಗೇಂದ್ರ ಇದ್ದರು.

ಇದೇ ಸಂದರ್ಭ ವೈದ್ಯರ ದಿನದ ಅಂಗವಾಗಿ ಡಾ. ಮಂಥರ್ ಗೌಡ ಹಾಗೂ ಡಾ. ಗೀತ ಪ್ರಕಾಶ್ ಅವರುಗಳನ್ನು ಸನ್ಮಾನಿಸಲಾಯಿತು.