ಮಡಿಕೇರಿ, ಜು. ೫: ಕದ್ದುಮುಚ್ಚಿ ನಗರದಲ್ಲಿ ಮಾಲಿನ್ಯ ಹರಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಮಡಿಕೇರಿ ನಗರಸಭೆ ಮುನ್ನೆಚ್ಚರಿಕೆಯಿತ್ತಿದೆ.
ಕಾನ್ವೆಂಟ್ ಮೇಲ್ಭಾಗದ ರಸ್ತೆ ತಿರುವಿನಲ್ಲಿ ಅಂಗಡಿಯೊAದರ ಬಳಿಯ ಚರಂಡಿಯಲ್ಲಿ ಹಣ್ಣುಗಳ ಸಿಪ್ಪೆಗಳು, ಪ್ಲಾಸ್ಟಿಕ್ ಬಾಟಲಿಗಳನ್ನು ಯಾರೋ ಎಸೆದು ಚರಂಡಿ ಮುಚ್ಚಿ ಹೋಗಿತ್ತು. ಇಂದು ಸುರಿದ ಭಾರೀ ಮಳೆಯಿಂದಾಗಿ ರಸ್ತೆಯ ಮೇಲೆಲ್ಲ ನೀರು ಚಲಿಸುವುದರೊಂದಿಗೆ ಮಾಲಿನ್ಯ ಪಸರಿಸಿತ್ತು. ಈ ಬಗ್ಗೆ ನಾಗರಿಕರು ನೀಡಿದ ದೂರಿನ ಅನ್ವಯ ನಗರಸಭಾಧ್ಯಕ್ಷೆ ಅನಿತಾ ಪೂವಯ್ಯ ಸ್ಥಳಕ್ಕೆ ತೆರಳಿ ಪರಿಶೀಲಿಸಿದರು. ಬಳಿಕ ಚರಂಡಿಯನ್ನು ಶುಚಿಗೊಳಿಸ ಲಾಯಿತು.
ಅನಿತಾ ಪೂವಯ್ಯ ಅವರು ಈ ಕುರಿತು “ಶಕ್ತಿ”ಯೊಂದಿಗೆ ಮಾತನಾಡಿ “ಎರಡು ದಿನಗಳ ಹಿಂದೆಯಷ್ಟೇ ನಗರಸಭಾ ನೌಕರರು ಈ ಚರಂಡಿಯನ್ನು ಸಂಪೂರ್ಣ ಶುಚಿಗೊಳಿಸಿ ನೀರು ಸುಗಮವಾಗಿ ಹರಿಯುವಂತೆ ಮಾಡಿದ್ದರು. ಆದರೆ, ಕಿಂಚಿತ್ತೂ ನಾಗರಿಕ ಪ್ರಜ್ಞೆಯಿಲ್ಲದ ಯಾರೋ ಹಣ್ಣಿನ ಜ್ಯೂಸ್ ಇತ್ಯಾದಿ ತಯಾರಿಸಿ ಸಿಪ್ಪೆಗಳನ್ನು, ಪ್ಲಾಸ್ಟಿಕ್ ಬಾಟಲಿಗಳನ್ನು
(ಮೊದಲ ಪುಟದಿಂದ) ಚರಂಡಿಗೆ ಎಸೆದಿರುವುದು ಖಂಡನೀಯ. ಬೆಳಿಗ್ಗೆ ಕಸ- ಮಾಲಿನ್ಯ ಸಂಗ್ರಹಕ್ಕೆAದು ದಿನವೂ ವಾಹನಗಳು ಮನೆಗಳ ಬಳಿ ತೆೆರಳುತ್ತಿದ್ದರೂ ಈ ರೀತಿಯ ಕೃತ್ಯ ಎಸಗುತ್ತಿರುವುದು ದು:ಖಕರವಾಗಿದೆ. ತೀವ್ರ ಮಳೆ ಸಂದರ್ಭ ಸಿಬ್ಬಂದಿಗೂ ಚರಂಡಿ ಶುಚಿಗೊಳಿಸುವುದು ಕಷ್ಟದ ಕೆಲಸವಾಗಿದೆ. ಪರಿಸರ ರಕ್ಷಣೆಯಲ್ಲಿ ಎಲ್ಲ ನಾಗರಿಕರು ಕೈಜೋಡಿಸ ಬೇಕಾಗಿದೆ. ಇದೇ ರೀತಿ ಮುಂದೆ ಯಾರಾದರೂ ಮಾಲಿನ್ಯದ ಕೃತ್ಯ ಎಸಗುತ್ತಿದ್ದರೆ ಅಂತಹುದನ್ನು ಪತ್ತೆ ಹಚ್ಚಿ ಕಠಿಣ ಕ್ರಮ ಕೈಗೊಳ್ಳ ಲಾಗುತ್ತದೆ” ಎಂದು ನಗರಸಭಾಧ್ಯಕ್ಷೆ ಮುನ್ನೆಚ್ಚರಿಕೆಯಿತ್ತಿದ್ದಾರೆ.