ಕೋವರ್ ಕೊಲ್ಲಿ ಇಂದ್ರೇಶ್

ಬೆAಗಳೂರು, ಜು. ೫: ಈಗಾ ಗಲೇ ದಿನೇ ದಿನೇ ಹೆಚ್ಚುತ್ತಿರುವ ವಾಹನ ಅಪಘಾತಗಳ ಕಾರಣದಿಂದ ಸುದ್ದಿಯಲ್ಲಿರುವ ಬೆಂಗಳೂರು -ಮೈಸೂರು ಎಕ್ಸ್ಪ್ರೆಸ್ ವೇಯಲ್ಲಿ ಇನ್ನು ಮುಂದೆ ಅತಿ ವೇಗಪ್ರಿಯರ ಹುಚ್ಚಾಟಕ್ಕೆ ಬ್ರೇಕ್ ಹಾಕಲು ಪೊಲೀಸ್ ಇಲಾಖೆ ಮುಂದಾಗಿದೆ.

ಈ ನೂತನ ಹೆದ್ದಾರಿಯಲ್ಲಿ ವಾಹನಗಳ ದಟ್ಟಣೆಯೂ ದಿನೇ ದಿನೇ ಹೆಚ್ಚಾಗುತಿದ್ದು, ಕಳೆದ ಒಂದು ವರ್ಷದಲ್ಲಿ ೫೦೦ಕ್ಕೂ ಹೆಚ್ಚು ಅಪಘಾತಗಳು ಸಂಭವಿಸಿದ್ದು, ಹಲ ವಾರು ಸವಾರರು ಪ್ರಾಣ ಕಳೆದು ಕೊಂಡಿದ್ದಾರೆ. ಅತಿ ವೇಗಕ್ಕೆ ಕಡಿವಾಣ ಹಾಕಲು ಪೊಲೀಸ್ ಇಲಾಖೆ ಸ್ಪೀಡ್ ರೇಡಾರ್ ಗನ್ (sಠಿeeಜ ಡಿಚಿಜಚಿಡಿ guಟಿs) ಮತ್ತು ವಾಹನಗಳ ನಂಬರ್ ಪ್ಲೇಟ್ ರೆಕಗ್ನಿಷನ್ ಕ್ಯಾಮರಾಗಳನ್ನು ಹೆದ್ದಾರಿಯಲ್ಲಿ ಅಳವಡಿಸಲು ಮುಂದಾಗಿದೆ.

ಸಾಮಾನ್ಯವಾಗಿ ಹೆದ್ದಾರಿಗಳ ಅಗಲಕ್ಕೆ ಅನುಗುಣವಾಗಿ ಪ್ರತಿ ಹೆದ್ದಾರಿಗೂ ವೇಗದ ಮಿತಿ ನಿಗದಿ ಪಡಿಸಲಾಗುತ್ತದೆ. ಅದರಂತೆ ಬೆಮೈ ಹೆದ್ದಾರಿಗೆ ೧೦೦ ಕಿಲೋಮೀಟರ್ ಗರಿಷ್ಠ ವೇಗ ನಿಗದಿಪಡಿಸಲಾಗಿದೆ. ಇದನ್ನು ಮೀರಿದರೆ ದಂಡ ವಿಧಿಸ ಲಾಗುತ್ತದೆ ಎಂದು ರಸ್ತೆ ಸುರಕ್ಷತಾ ಮತ್ತು ಸಂಚಾರ ಎಡಿಜಿಪಿ ಅಲೋಕ್ ಕುಮಾರ್ ಟ್ವೀಟ್ ಮೂಲಕ ತಿಳಿಸಿದ್ದಾರೆ.

ಈಗಾಗಲೇ ರಾಮನಗರ ಪೊಲೀ ಸರು ಬೆಂಗಳೂರು-ಮೈಸೂರು ಎಕ್ಸ್ಪ್ರೆಸ್‌ವೇನಲ್ಲಿ ನಿಗದಿತ ವೇಗದಲ್ಲಿ ಚಲಿಸದ ವಾಹನಗಳ ಪತ್ತೆಗಾಗಿ ಸ್ಪೀಡ್ ರಡಾರ್‌ಗನ್ನು ಬಳಸಲು ಶುರು ಮಾಡಿದ್ದು, ಮುಂದಿನ ದಿನಗಳಲ್ಲಿ ಮಂಡ್ಯ ಮತ್ತು ಮೈಸೂರು ಪೊಲೀಸರು ಬಳಸಲು ಶುರು ಮಾಡಲಿದ್ದಾರೆ. ಅದರಂತೆ ಜುಲೈ ೪ ರಂದು ರಾಮನಗರ ಪೊಲೀಸರು ವೇಗ ಮೀತಿ ಮೀರಿದ ೪೪ ವಾಹನಗಳ ಮೇಲೆ ಕೇಸ್‌ಗಳನ್ನು ಬುಕ್ ಮಾಡಿದ್ದಾರೆ. ಎಕ್ಸಪ್ರೆಸ್ ವೇ ನಲ್ಲಿ ನಡೆದಿರುವ ಬಹುತೇಕ ಅಪಘಾತಗಳು ಮಿತಿ ಮೀರಿದ ವೇಗದಿಂದ ಸಂಭವಿಸಿದ್ದಾಗಿದ್ದು, ಬಹುತೇಕ ವಾಹನಗಳು ಗಂಟೆಗೆ ೧೨೦-೧೪೦ ಕಿ.ಮೀ. ವೇಗದಲ್ಲಿ ಚಲಿಸಿ ಅಪಘಾತಕ್ಕೀಡಾಗಿವೆ ಎಂದು ಅವರು ಹೇಳಿದ್ದಾರೆ. ಇನ್ನು ವೇಗದ ಚಾಲನೆಗೆ ೧೦೦೦ ರೂಪಾಯಿ ದಂಡ ವಿಧಿಸಲಾಗುತ್ತದೆ.

ಅತಿ ವೇಗದಲ್ಲಿ ಚಲಿಸುವವರನ್ನು ಯಾರು ತಡೆಯುವುದಿಲ್ಲ ಆದರೆ ಸ್ವಯಂ ಚಾಲಿತ ಕ್ಯಾಮೆರಾಗಳು ವೇಗವನ್ನು ದಾಖಲಿಸಿಕೊಳ್ಳುತ್ತವೆ. ನಂತರ ಫೋಟೋದೊಂದಿಗೆ ಮನೆಗೆ ದಂಡದ ನೋಟೀಸ್ ಕಳಿಸಲಾಗುತ್ತದೆ. ಅಲ್ಲದೆ ದ್ವಿ ಮತ್ತು ತ್ರಿ ಚಕ್ರ ವಾಹನಗಳ ಓಡಾಟವು ಎಕ್ಸ್ಪ್ರೆಸ್ ವೇ ಯ ಇತರ ವಾಹನಗಳ ಓಡಾಟಕ್ಕೆ ಅಡಚಣೆ ಆಗುವುದರಿಂದ ರಾಷ್ಟಿçÃಯ ಹೆದ್ದಾರಿ ಪ್ರಾಧಿಕಾರವು ಈ ವಾಹನಗಳ ಸಂಚಾರವನ್ನು ಜುಲೈ ೧೫ ರಿಂದ ನಿಷೇಧಿಸಲಿದೆ ಎಂದೂ ತಿಳಿದು ಬಂದಿದೆ.

ಎಕ್ಸ್ಪ್ರೆಸ್ವೇನಲ್ಲಿ ಅಪಘಾತ ಹೆಚ್ಚಳ ಕುರಿತು ಪ್ರತಾಪ್ ಸಿಂಹ ಪ್ರತಿಕ್ರಿಯೆ ನೀಡಿ ‘ವಾಹನಗಳು ಗಂಟೆಗೆ ೧೨೦ ಕಿಮೀ ಗರಿಷ್ಠ ವೇಗದ ಮಿತಿಯೊಂದಿಗೆ ಚಲಿಸಲು ಈ ಹೆದ್ದಾರಿಯನ್ನು ವಿನ್ಯಾಸಗೊಳಿಸಲಾಗಿದೆ. ಆದರೆ, ಸುರಕ್ಷತೆಯ ದೃಷ್ಟಿಯಿಂದ ವಾಹನ ಸವಾರರಿಗೆ ನೂರು ಕಿಲೋಮೀಟರ್‌ಗಳ ಗರಿಷ್ಠ ಮಿತಿ ನಿಗದಿಪಡಿಸಲಾಗಿದೆ. ೮೦ ಕಿ.ಮೀ. ನಿಂದ ೧೦೦ ಕಿಮೀ ವೇಗದಲ್ಲಿ ಪ್ರಯಾಣಿಸುವಾಗ ಅಪಘಾತಗಳು ಸಂಭವಿಸುವುದಿಲ್ಲ. ಈ ವೇಗದಲ್ಲಿ ಪ್ರಯಾಣಿಸಿದಾಗಲೂ ಒಂದೂವರೆ ಗಂಟೆಯಲ್ಲಿ ಬೆಂಗಳೂರು ಸೇರಬಹುದು. ೧೦-೧೫ ನಿಮಿಷ ಉಳಿಸುವುದಕ್ಕಾಗಿ ಜನರು ವೇಗದ ಮಿತಿಯನ್ನು ದಾಟಬಾರದು. ಐಷಾರಾಮಿ ಕಾರಿನಲ್ಲಿ, ಕೆಲವರು ೧೪೦-೧೫೦ ಕಿ.ಮೀ. ವೇಗದಲ್ಲಿ ಚಾಲನೆ ಮಾಡುತ್ತಿರುತ್ತಾರೆ. ಅದನ್ನು ನೋಡಿ ದೇಶೀ ಸಣ್ಣ ಕಾರುಗಳ ಸವಾರರೂ ವೇಗದ ಮಿತಿ ಹೆಚ್ಚಿಸುತ್ತಾರೆ ಇದು ಅಪಘಾತಕ್ಕೆ ಕಾರಣವಾಗುತ್ತದೆ ಎಂದು ಹೇಳಿದ್ದರು. ಇನ್ನಾದರೂ ಹೆಚ್ಚುತ್ತಿರುವ ವಾಹನ ಅಪಘಾತಗಳು ಕಡಿಮೆ ಆಗಲಿ ಎಂಬುದೇ ಎಲ್ಲರ ಆಶಯ.