ಚೆಯ್ಯಂಡಾಣೆ, ಜು. ೫: ನಾಪೋಕ್ಲುವಿನ ಕರ್ನಾಟಕ ಪಬ್ಲಿಕ್ ಶಾಲೆಯ ನಿಸರ್ಗ ಇಕೋ ಕ್ಲಬ್, ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್, ಇಂಟ್ರಾಕ್ಟ್ ಕ್ಲಬ್, ರಾಷ್ಟಿçÃಯ ಸೇವಾ ಯೋಜನೆ ವತಿಯಿಂದ ಮಡಿಕೇರಿ ವಲಯ ಅರಣ್ಯ ಇಲಾಖೆಯ ಸಹಯೋಗದೊಂದಿಗೆ ವಿಶ್ವ ಪರಿಸರ ದಿನ ಹಾಗೂ ವನಮಹೋತ್ಸವ ಕಾರ್ಯಕ್ರಮವನ್ನು ಆಚರಿಸಲಾಯಿತು.
ಈ ಸಂದರ್ಭ ಮಾತನಾಡಿದ ವಲಯ ಆರ್‌ಎಫ್‌ಒ ರವೀಂದ್ರ ನಮ್ಮ ಒಟ್ಟಾರೆ ಭೂಮಿಯಲ್ಲಿ ಕನಿಷ್ಟ ಪಕ್ಷ ಶೇ.೩೩ ಕಾಡು ಇದ್ದರೆ ಮಾತ್ರ ನಮ್ಮ ನಾಗರಿಕತೆಯ ಉಳಿವು, ಹಸಿರು ಹೊದಿಕೆ ಇಲ್ಲದಿದ್ದರೆ, ಯಾವುದು ಕೂಡ ಉತ್ತುಂಗಕ್ಕೆ ಏರಲು ಸಾಧ್ಯವಿಲ್ಲ, ಶಾಲಾ ಕಾಲೇಜುಗಳಲ್ಲಿ ಅರಿವು ಮೂಡಿಸುವ ಉದ್ದೇಶದಿಂದ ವನಮಹೋತ್ಸವ ಮಾಡಬೇಕೆಂದು ಸರಕಾರದ ಆದೇಶ ಇದೆ ಅದರ ಅಂಗವಾಗಿ ನಾವು ಈ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದೇವೆ ಎಂದು ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ ಶಾಲೆಯ ಹಳೇ ವಿದ್ಯಾರ್ಥಿ ಹಾಗೂ ದಾನಿಗಳಾದ ಕೇಟೋಳಿರ ರಾಜ ಗಣಪತಿ ಅವರು ವೈಯಕ್ತಿಕವಾಗಿ ನೀಡಿದ ೩೦೦ಕ್ಕೂ ಅಧಿಕ ವಿವಿಧ ತಡಿಯ ತಳಿಯ ಗಿಡಗಳನ್ನು ಶಾಲೆಯ ಆವರಣದಲ್ಲಿ ನೆಡಲಾಯಿತು.
ಈ ಸಂದರ್ಭದಲ್ಲಿ ಶಾಲೆಯ ಪ್ರಭಾರ ಪ್ರಾಂಶುಪಾಲ ವಿಜಿತ, ಪ್ರಭಾರ ಉಪ ಪ್ರಾಂಶುಪಾಲ ಎನ್.ಎಸ್. ಶಿವಣ್ಣ, ಅರಣ್ಯ ಇಲಾಖೆಯ ಡಿಆರ್‌ಎಫ್‌ಓ ಸುರೇಶ್, ಗಸ್ತು ಅರಣ್ಯ ಪಾಲಕ ಕಾಳೇಗೌಡ, ಸೋಮಣ್ಣ, ಮಂಜುನಾಥ್, ರಾಹುಲ್, ಕೇಶವಮೂರ್ತಿ, ಕಾರ್ತಿಕ್, ಬೆಳೆಗಾರರಾದ ಕುಂಡ್ಯೋಳAಡ ರಮೇಶ್ ಮುದ್ದಯ್ಯ, ಕಾಂಡAಡ ಜೋಯಪ್ಪ, ಶಾಲೆಯ ಆಡಳಿತ ಮಂಡಳಿಯ ಉಪಾಧ್ಯಕ್ಷ ಹಾರಿಸ್, ಸದಸ್ಯರು, ಶಾಲೆಯ ಎಲ್ಲಾ ಉಪನ್ಯಾಸಕ ಮತ್ತು ಶಿಕ್ಷಕ ವೃಂದದವರು, ವಿದ್ಯಾರ್ಥಿಗಳು ಮತ್ತಿತರರು ಹಾಜರಿದ್ದರು.