ಮಡಿಕೇರಿ, ಜು. ೫: ಕೊಡಗು ಜಿಲ್ಲಾ ಮೊಗೇರ ಸೇವಾ ಸಮಾಜದ ವಾರ್ಷಿಕ ಮಹಾಸಭೆ ತಾ. ೯ ರಂದು ಬೆಳಿಗ್ಗೆ ೧೦.೩೦ ಗಂಟೆಗೆ ಸುಂಟಿಕೊಪ್ಪದ ಮಂಜುನಾಥಯ್ಯ ಮೀನಾಕ್ಷಮ್ಮ ಕಲ್ಯಾಣ ಮಂಟಪದ ಸಭಾಂಗಣದಲ್ಲಿ ತಮ್ಮ ಅಧ್ಯಕ್ಷತೆಯಲ್ಲಿ ನಡೆಯಲಿದೆ ಎಂದು ಸಮಾಜದ ಜಿಲ್ಲಾಧ್ಯಕ್ಷ ಗೌತಮ್ ಶಿವಪ್ಪ ತಿಳಿಸಿದ್ದಾರೆ. ಮಹಾಸಭೆಯ ನಂತರ ಜಿಲ್ಲಾ ಸಮಿತಿಯ ಪುನರ್ ರಚನಾ ಪ್ರಕ್ರಿಯೆ ನಡೆಯಲಿದೆ.