ವೀರಾಜಪೇಟೆ, ಜು. ೬: ಬಣ್ಣಗಳು ಮನುಷ್ಯನ ಆರೋಗ್ಯದ ಮೇಲೆ ಮಹತ್ತರವಾದ ಪರಿಣಾಮವನ್ನು ಉಂಟುಮಾಡುತ್ತವೆ, ಸೂಕ್ತಬಣ್ಣದ ವಸ್ತç ಧಾರಣೆಯಿಂದ ಆರೋಗ್ಯವನ್ನು ಬಲಗೊಳಿಸಿಕೊಳ್ಳಬಹುದು ಎಂಬುದರ ಬಗ್ಗೆ ಮೈಸೂರಿನ ಪ್ರಕೃತಿ ಚಿಕಿತ್ಸಕಿ ವಿಜಯಲಕ್ಷಿö್ಮಯವರು ವಿವರಿಸಿದರು. ಇಲ್ಲಿಗೆ ಸಮೀಪದ ಶ್ರೀ ಅರಮೇರಿ ಕಳಂಚೇರಿ ಮಠದ ೨೧೧ನೆಯ ಮಾಸಿಕ ತತ್ವ ಚಿಂತನಾ ಗೋಷ್ಠಿಯಲ್ಲಿ ವರ್ಣ ಚಿಕಿತ್ಸೆಯ ಬಗ್ಗೆ ಉಪನ್ಯಾಸ ವನ್ನು ನೀಡುತ್ತ ಮೈದಾ ಹಾಗೂ ಕೃತಕ ತಂಪುಪಾನೀಯಗಳ ಬಳಕೆಯಿಂದ ಮಕ್ಕಳಲ್ಲಿ ಮಧುಮೇಹವು ಹೆಚ್ಚಾಗುತ್ತಿರುವುದು ಕಳವಳದ ವಿಷಯವೆಂದು ತಿಳಿಸಿದರು.

ಕಾರ್ಯಕ್ರಮದ ಉದ್ಘಾಟನೆಯನ್ನು ಮಾಡಿದ ಕೊಡಗು ಕಸಾಪದ ಅಧ್ಯಕ್ಷ ಕೇಶವ ಕಾಮತ್ ಅವರು ಬಿಳಿಯಬಣ್ಣದೊಳಗೆ ಲೀನವಾಗಿರುವ ಏಳು ಬಣ್ಣಗಳ ಬಗ್ಗೆ ಮಾಹಿತಿ ನೀಡಿದರು.

ಶ್ರೀಮಠದ ಶ್ರೀ ಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮಿಗಳು ಆಶೀರ್ವಚನವನ್ನು ನೀಡುತ್ತ ಔಷಧೀಯ ಸಸ್ಯಗಳನ್ನು ಬೆಳೆಸುವ ಅಗತ್ಯವನ್ನು ತಿಳಿಸಿದರು. ಶ್ರೀಮಠದ ವಿದ್ಯಾರ್ಥಿಗಳು ಪ್ರಾರ್ಥಿಸಿ, ಸ್ವಾಗತಿಸಿ ವಂದಿಸಿದರು.