ಮಡಿಕೇರಿ, ಜು. ೫: ಕುಶಾಲನಗರ ಇಂಜಿನಿಯರಿAಗ್ ಕಾಲೇಜು ಬಳಿಯ ಹೊಟೇಲ್ ಒಂದರ ಕೊಳಕು ನೀರು, ತ್ಯಾಜ್ಯಗಳು ನೇರವಾಗಿ ಕಾವೇರಿ ನದಿ ಸೇರುತ್ತಿದ್ದು, ಕುಶಾಲನಗರದ ಆರೋಗ್ಯ ನಿರೀಕ್ಷಕ ಉದಯಕುಮಾರ್ ಹಾಗೂ ಇಲಾಖೆ ಸಿಬ್ಬಂದಿ ಬಂಗಾರಿ ಅವರುಗಳು ಸ್ಥಳಕ್ಕೆ ಭೇಟಿ ನೀಡಿ ಹೊಟೇಲ್ ಮಾಲೀಕರಿಗೆ ಎಚ್ಚರಿಸಿದ್ದು, ತ್ಯಾಜ್ಯ ನೀರನ್ನು ಸಮರ್ಪಕವಾಗಿ ನಿರ್ವಹಿಸುವಂತೆ ಸೂಚಿಸಿದ್ದಾರೆೆ. ನದಿಗೆ ನೇರವಾಗಿ ನೀರು ಹರಿಸಿ ಕಲುಷಿತಗೊಳ್ಳುತ್ತಿದ್ದ ಬಗ್ಗೆ ಜೂನ್ ೩೦ ರಂದು 'ಶಕ್ತಿ'ಯಲ್ಲಿ ವರದಿ ಪ್ರಕಟಗೊಂಡಿತ್ತು. ಇದಕ್ಕೆ ಸ್ಪಂದಿಸಿದ ಆರೋಗ್ಯ ನಿರೀಕ್ಷಕರು ಹೊಟೇಲ್ಗೆ ಭೇಟಿ ನೀಡಿ ಹೊಟೇಲ್ ಬಳಿ ಗುಂಡಿ ತೋಡಿ ತ್ಯಾಜ್ಯ ನೀರನ್ನು ಅಲ್ಲೆ ವಿಲೇವಾರಿ ಮಾಡುವಂತೆ ಸೂಚಿಸಿ ತಪ್ಪಿದಲ್ಲಿ ಕ್ರಮ ಕೈಗೊಳ್ಳುವಂತೆ ಎಚ್ಚರಿಸಿದ್ದಾರೆ.
-ಟಿ.ಜಿ. ಸತೀಶ್