ಚೆಯ್ಯಂಡಾಣೆ, ಜು. ೫: ಮದ್ಯ ಸೇವಿಸಿ ತನ್ನ ಪತ್ನಿ ಮತ್ತು ಮಗುವಿನ ಮೇಲೆ ಕತ್ತಿಯಿಂದ ಮಾರಣಾಂತಿಕ ಹಲ್ಲೆ ನಡೆಸಿ ಗಂಭೀರ ಗಾಯಗೊಳಿಸಿದ ಪತಿ ಜೈಲು ಪಾಲಾದ ಘಟನೆ ನಾಪೋಕ್ಲು ಠಾಣಾ ವ್ಯಾಪ್ತಿಯ ಕೋಕೇರಿ ಗ್ರಾಮದಲ್ಲಿ ನಡೆದಿದೆ.
ನರಿಯಂದಡ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚೆಯ್ಯಂಡಾಣೆ ಸಮೀಪದ ಕೋಕೇರಿ ಗ್ರಾಮದ ಚೆರುವಾಳಂಡ ಲವಿನ್ ಎಂಬವರ ಲೈನ್ ಮನೆಯಲ್ಲಿ ಕಾರ್ಮಿಕರಾಗಿ ಕೆಲಸ ನಿರ್ವಹಿಸುತ್ತಿದ್ದ ಭರತ್ ಬಂಧಿತ ಆರೋಪಿ.
ಮಂಗಳವಾರ ಮಧ್ಯಾಹ್ನ ನಾಪೋಕ್ಲುವಿನಿಂದ ಕಂಠಪೂರ್ತಿ ಮದ್ಯ ಸೇವಿಸಿ ಮನೆಗೆ ಬಂದ ಭರತ್ ಊಟ ಮಾಡಿದ ಬಳಿಕ ಸಂಜೆ ೪ ಗಂಟೆ ರಾತ್ರಿಗೆ ಅನ್ನ ಬೇಯಿಸುವಂತೆ ಹೆಂಡತಿ ಪ್ರೇಮಾಳ ಜೊತೆ ಹೇಳಿದ್ದಾನೆ. ಇದಕ್ಕೆ ಹೆಂಡತಿ ರಾತ್ರಿ ಅನ್ನ ತಯಾರು ಮಾಡುವೆ ಎಂದಿದ್ದಾಳೆ. ಇದಕ್ಕೆ ಒಪ್ಪದ ಗಂಡ ಭರತ್ ಪತ್ನಿಗೆ ಆವಾಚ್ಯ ಶಬ್ದಗಳಿಂದ ನಿಂದಿಸಿ ಇಬ್ಬರ ನಡುವಿನ ಜಗಳ ತಾರಕಕ್ಕೇರಿ ಮದ್ಯದ ಅಮಲಿನಲ್ಲಿದ್ದ ಭರತ್ ಪಕ್ಕದಲ್ಲೇ ಇದ್ದ ಕಾಫಿ ಕಪಾತು ಮಾಡುವ ಕತ್ತಿಯಿಂದ ಪತ್ನಿ ಪ್ರೇಮಾಳ ಎಡಕೈಗೆ ಕತ್ತಿಯಿಂದ ಹಲ್ಲೆ ಮಾಡಿದ್ದಾನೆ. ಇದರಿಂದ ಪ್ರೇಮಾಳ ಗಂಭೀರ ಗಾಯವಾಗಿದೆ. ಇದೇ ಸಂದರ್ಭ ಎರಡು ವರ್ಷದ ಮಗುವಿನ ಕಾಲಿಗೂ ಗಂಭೀರ ಗಾಯವಾಗಿದೆ. ತಾಯಿ ಮಗುವಿನ ಕಿರುಚಾಟ ಕೇಳಿ ಪಕ್ಕದ ಮನೆಯಲ್ಲಿದ್ದ ಪ್ರೇಮಾಳ ಅಕ್ಕ ಮತ್ತು ಬಾವ ಸ್ಥಳಕ್ಕೆ ಓಡಿಬಂದು ಇಬ್ಬರ ಜಗಳವನ್ನು ಬಿಡಿಸಿ ತೋಟದ ಮಾಲೀಕರಿಗೆ ಮಾಹಿತಿ ನೀಡಿದ್ದಾರೆ.
ಮಾಲೀಕರಾದ ಚೇರುವಾಳಂಡ ಲವೀನ್ ಸ್ಥಳಕ್ಕೆ ಬಂದು ಗಂಭೀರ ಗಾಯವಾಗಿ ರಕ್ತದ ಮಡುವಿನಲ್ಲಿದ್ದ ತಾಯಿ ಹಾಗೂ ಮಗುವನ್ನು ತಮ್ಮ ವಾಹನದಲ್ಲಿ ನಾಪೋಕ್ಲುವಿನ ಖಾಸಗಿ ಕ್ಲಿನಿಕ್ಗೆ ದಾಖಲಿಸಿದ್ದಾರೆ. ಪ್ರಕರಣಕ್ಕೆ ಸಂಬAಧಿಸಿದAತೆ ಪತ್ನಿ ಪ್ರೇಮಾ ನಾಪೋಕ್ಲು ಠಾಣೆಗೆ ನೀಡಿದ ದೂರಿನ ಅನ್ವಯ ಐಪಿಸಿ ೫೦೪, ೩೨೪, ೫೦೬, ಸೆಕ್ಷನ್ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡ ನಾಪೋಕ್ಲು ಪೊಲೀಸರು ಆರೋಪಿ ಭರತ್ನನ್ನು ಬಂಧಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.