ಮಡಿಕೇರಿ, ಜು. ೫: ಕೊಡಗು ಜಿಲ್ಲೆ ಸೇರಿದಂತೆ ರಾಜ್ಯದ ಇತರೆಡೆಗಳಲ್ಲಿ ಕಳೆದ ಕೆಲ ದಿನಗಳಿಂದ ಸಾಧಾರಣ ಪ್ರಮಾಣದಲ್ಲಿ ಮಳೆಯಾಗುತ್ತಿದೆ. ಇದು ಜುಲೈ ೮ ರವರೆಗೆ ಇದೆ ರೀತಿ ಮುಂದುವರಿಯಲಿದ್ದು, ಬಳಿಕ ಹೆಚ್ಚಾಗಲಿದೆ. ಜುಲೈ ೧೩ ರವರೆಗೂ ಅಧಿಕ ಮಳೆ ( ಕೆಲವಡೆ ೮ ಇಂಚಿನಷ್ಟು) ಕೊಡಗು ಸೇರಿದಂತೆ ರಾಜ್ಯವ್ಯಾಪ್ತಿ ಆಗಲಿದೆ ಎಂದು ರಾಜ್ಯ ಹವಾಮಾನ ಇಲಾಖೆ ಪ್ರಕಟಣೆ ತಿಳಿಸಿದೆ.