ಗೋಣಿಕೊಪ್ಪ, ಜು. ೬: ಆರ್ಟ್ ಆಫ್ ಲೀವಿಂಗ್ ವತಿಯಿಂದ ಗುರು ಪೂಜೆಯನ್ನು ಆಚರಿಸಲಾಯಿತು. ಉಮಾಮಹೇಶ್ವರಿ ದೇವಸ್ಥಾನ ಸಭಾಂಗಣದಲ್ಲಿ ಗುರು ಪೂರ್ಣಿಮೆಯ ಅಂಗವಾಗಿ ಧ್ಯಾನ, ಜ್ಞಾನದ ಉತ್ಸವ ನಡೆಯಿತು. ಆರ್ಟ್ ಆಫ್ ಲಿವಿಂಗ್ನ ಅಳಮೇಂಗಡ ಡಾನ್ ರಾಜಪ್ಪ ಹಾಗೂ ಅವರ ತಾಯಿ ಸರಸ್ವತಿ ಮತ್ತು ಪೊಡಮಾಡ ಭವಾನಿ ನಾಣಯ್ಯ ಅವರಿಂದ ಗುರು ಪೂಜೆ ನೆರವೇರಿತು.
ಆರ್ಟ್ ಆಫ್ ಲಿವಿಂಗ್ನ ಸೀನಿಯರ್ ಶಿಕ್ಷಕಿ ಲಕ್ಷಿö್ಮಜಿಯವರು ಗುರು ಪೂರ್ಣಿಮೆಯ ಮಹತ್ವವನ್ನು ತಿಳಿಸಿದರು. ಶಾಂತೆಯAಡ ಮಧು ಮಾಚಯ್ಯ ಹಾಗೂ ಟೀನಾ ಮಾಚಯ್ಯ ತಂಡದಿAದ ಸತ್ಸಂಗ ಕಾರ್ಯಕ್ರಮ ನೆರವೇರಿತು.
ಕಾಳಿಮಾಡ ರೇಷ್ಮೆ, ವೈದ್ಯ ಸುರೇಶ, ಕಾಳೇಂಗಡ ನವೀನ್ ನಂಜಪ್ಪ, ಮುರುವಂಡ ಗ್ರೇಸಿ, ಜಗದೀಶ್, ಸೋನಿಕ ಇದ್ದರು.