ಮಡಿಕೇರಿ, ಜು. ೪: ಜೆಂಬು ಸಮೀಪದ ಊರುಬೈಲು - ಮಾರ್ಪಡ್ಕದ ಹಳೆ ಸೇತುವೆ ಕೆಡವಲಾಯಿತು. ಚೆಂಬು ಗ್ರಾಮದ ಊರುಬೈಲು-ಮಾರ್ಪಡ್ಕ ಭಾಗದಲ್ಲಿ ಪ್ರಸ್ತುತ ಇರುವ ಸಂಪರ್ಕ ಸೇತುವೆಯ ಎದುರು ಬದಿ, ಶಿಥಿಲಗೊಂಡ ಹಳೆ ಸೇತುವೆ ಇದೆ. ಇದರಿಂದಾಗಿ ಮಳೆಗಾಲದಲ್ಲಿ ಸುಲಲಿತ ನೀರಿನ ಹರಿವಿಗೆ ತೊಂದರೆ ಉಂಟಾಗಿ ಪ್ರವಾಹ ಭೀತಿ ಮಾತ್ರವಲ್ಲದೇ ಪ್ರಸ್ತುತ ಇರುವ ಸೇತುವೆಗೆ ಅಪಾಯ ಮತ್ತು ಅಕ್ಕಪಕ್ಕದ ಆಸ್ತಿಗಳಿಗೆ ನೀರು ನುಗ್ಗಿ ಆಸ್ತಿ ಹಾನಿ ಆಗುವ ಆತಂಕವಿತ್ತು.

ಇದನ್ನು ಮನಗಂಡ ನೂತನ ಶಾಸಕ ಎ.ಎಸ್ ಪೊನ್ನಣ್ಣ ಅವರು ಸ್ಥಳೀಯ ನಿವಾಸಿಗಳ ಕೋರಿಕೆ ಮೇರೆಗೆ ಕೂಡಲೇ ಸ್ಪಂದಿಸಿ, ಜಿಲ್ಲಾ ಪಂಚಾಯತ್ ಇಂಜಿನಿಯರ್‌ಗೆ ಸೂಚನೆ ನೀಡಿದ ಮೇರೆಗೆ ಹಳೆ ಸೇತುವೆಯನ್ನು ಕೆಡವಲಾಗಿದೆ.