ಸೋಮವಾರಪೇಟೆ, ಜು. ೩: ಅವಿರತ ಸಂಸ್ಥೆ ವತಿಯಿಂದ ಸಾಹಿತಿ ಹಾಗೂ ವೈದ್ಯರಾದ ಡಾ. ಶಾಲಿನಿ ಹಾಗೂ ನಿವೃತ್ತ ಶಿಕ್ಷಕ ಲಕ್ಷö್ಮಪ್ಪ ಅವರ ನೇತೃತ್ವದಲ್ಲಿ ಸಮೀಪದ ಕಿರಗಂದೂರು ಸರ್ಕಾರಿ ಮಾದರಿ ಪ್ರಾಥಮಿಕ ಮತ್ತು ಪ್ರೌಢ ಶಾಲಾ ವಿದ್ಯಾರ್ಥಿಗಳಿಗೆ ಪುಸ್ತಕಗಳನ್ನು ವಿತರಿಸಲಾಯಿತು. ನಿವೃತ್ತ ಶಿಕ್ಷಕ ಲಕ್ಷö್ಮಪ್ಪ ಮಾತನಾಡಿ, ಪಠ್ಯಪುಸ್ತಕಗಳನ್ನು ಮಕ್ಕಳಿಗಾಗಿ ಸರ್ಕಾರ ನೀಡುತ್ತದೆ. ಆದರೆ ಬರೆಯುವ ಪುಸ್ತಕಗಳನ್ನು ನೀಡುತ್ತಿಲ್ಲ. ಇಂದಿಗೂ ಸಾಕಷ್ಟು ಬಡ ಮಕ್ಕಳಿಗೆ ಪುಸ್ತಕಗಳನ್ನು ತೆಗೆದುಕೊಳ್ಳುವುದಕ್ಕೆ ಕಷ್ಟದ ಪರಿಸ್ಥಿತಿ ಇದೆ. ಈ ಹಿನ್ನೆಲೆ ಯಲ್ಲಿ ಕಳೆದ ಹಲವು ವರ್ಷಗಳಿಂದ ವಿದ್ಯಾರ್ಥಿಗಳಿಗೆ ಬರೆಯುವ ಪುಸ್ತಕಗಳನ್ನು ಸಂಸ್ಥೆಯ ಮೂಲಕ ನೀಡುತ್ತಿದ್ದೇವೆ ಎಂದರು. ಇತ್ತಿಚಿನ ದಿನಗಳಲ್ಲಿ ಸರ್ಕಾರಿ ಶಾಲೆಗಳು ಮುಚ್ಚುವಂತಹ ಸ್ಥಿತಿಯಲ್ಲಿದೆ. ಸರ್ಕಾರಿ ಶಾಲೆಯಲ್ಲಿ ಓದಿದಂತಹ ಸಾಕಷ್ಟು ವಿದ್ಯಾರ್ಥಿ ಗಳು ಒಳ್ಳೆಯ ಹುದ್ದೆಗಳನ್ನು ಅಲಂಕರಿಸಿದ್ದಾರೆ. ಅವಿರತ ಸಂಸ್ಥೆಯು ಸುಮಾರು ಹದಿನೈದು ವರ್ಷಗಳಿಂದ ನಿರಂತರ ವಾಗಿ ಶಾಲಾ ವಿದ್ಯಾರ್ಥಿಗಳಿಗೆ ಸೇವೆ ಯನ್ನು ಮಾಡುತ್ತಿದೆ ಎಂದು ಹೇಳಿದರು. ಈ ಸಂದರ್ಭದಲ್ಲಿ ಪ್ರೌಢ ಶಾಲೆಯ ಮುಖ್ಯ ಶಿಕ್ಷಕರಾದ ಚಂದ್ರಾಚಾರಿ, ಹಿರಿಯ ಶಿಕ್ಷಕ ಧರ್ಮಪ್ಪ, ಶಿಕ್ಷಕರಾದ ರಶ್ಮಿ, ಬಿ. ವಿಜಯಕುಮಾರ್, ಯಲ್ಲಪ್ಪ ಪೂಜಾರಿ, ಶ್ರೀಲೇಖಾ ಹಾಗೂ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕರಾದ ಮಂಜುನಾಥ, ಶಿಕ್ಷಕರಾದ ವಿನೋದ, ಕೆಂಪರಾಜು, ಸ್ಮಿತಾ, ಪುನೀತ್ ಇದ್ದರು.