ಸೋಮವಾರಪೇಟೆ, ಜು. ೩: ಶಾಂತಳ್ಳಿಯAತಹ ಗುಡ್ಡಗಾಡು ಹೋಬಳಿ ಪ್ರದೇಶದ ವಿದ್ಯಾರ್ಥಿಗಳು ಶೈಕ್ಷಣಿಕವಾಗಿ ಹೆಚ್ಚಿನ ಸಾಧನೆ ತೋರ ಬೇಕು. ಐಎಎಸ್, ಐಪಿಎಸ್ನಂತಹ ಹುದ್ದೆಗೇರುವ ಯತ್ನ ಮಾಡಬೇಕು ಎಂದು ಆಶಯ ವ್ಯಕ್ತಪಡಿಸಿದ ರಾಜ್ಯ ಒಕ್ಕಲಿಗರ ಸಂಘದ ಕಾರ್ಯಾಧ್ಯಕ್ಷ ಹರಪಳ್ಳಿ ರವೀಂದ್ರ ಅವರು, ಮುಂದಿನ ದಿನಗಳಲ್ಲಿ ಶಾಂತಳ್ಳಿಯಲ್ಲಿ ವಿದ್ಯಾರ್ಥಿ ವಸತಿ ನಿಲಯ ಸ್ಥಾಪನೆಗೆ ಕ್ರಮವಹಿಸಲಾಗುವುದು ಎಂದರು.
ಸಮೀಪದ ಶಾಂತಳ್ಳಿ-ಬೆಟ್ಟದಳ್ಳಿ ಶ್ರೀಕುಮಾರಲಿಂಗೇಶ್ವರ ವಿದ್ಯಾಸಂಸ್ಥೆಯ ವತಿಯಿಂದ ಶಾಲಾ ಸಭಾಂಗಣದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ದಾನಿಗಳಾದ ರವೀಂದ್ರ ಅವರು ೨೬೦ ವಿದ್ಯಾರ್ಥಿ ಗಳಿಗೆ ಉಚಿತವಾಗಿ ಪುಸ್ತಕ ಗಳನ್ನು ವಿತರಿಸಿ ಮಾತನಾಡಿದರು.
ಗ್ರಾಮೀಣ ಪ್ರದೇಶದ ಮಕ್ಕಳಿಗೂ ಸಹ ಆಂಗ್ಲಮಾಧ್ಯಮದ ಶಿಕ್ಷಣದ ಸೌಲಭ್ಯ ನೀಡಬೇಕೆಂಬ ಮಹತ್ವಾ ಕಾಂಕ್ಷೆಯಿAದ ಶ್ರೀಕುಮಾರಲಿಂಗೇಶ್ವರ ಆಂಗ್ಲಮಾಧ್ಯಮ ಶಾಲೆಯನ್ನು ಸ್ಥಾಪಿಸಲಾಗಿದ್ದು, ಗುಣಾತ್ಮಕ ಶಿಕ್ಷಣಕ್ಕೆ ಆದ್ಯತೆ ನೀಡಲಾಗುತ್ತಿದೆ. ಗರ್ವಾಲೆ, ಸೂರ್ಲಬ್ಬಿ ಭಾಗದಿಂದಲೂ ವಿದ್ಯಾರ್ಥಿಗಳು ಆಗಮಿಸುತ್ತಿದ್ದು, ಮುಂದಿನ ದಿನಗಳಲ್ಲಿ ವಸತಿ ಶಾಲೆಯನ್ನಾಗಿಸಲು ಕ್ರಮಕೈಗೊಳ್ಳ ಲಾಗುವುದು ಎಂದರು.
ವಿದ್ಯಾವAತ ಮಕ್ಕಳೇ ದೇಶದ ಶಕ್ತಿ. ಮಕ್ಕಳಿಗೆ ವಿದ್ಯೆ ನೀಡಿದರೆ ಅದುವೇ ಆಸ್ತಿಯಾಗಲಿದೆ. ಮಕ್ಕಳಿ ಗಾಗಿ ಆಸ್ತಿ ಮಾಡುವ ಬದಲು ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಿ ಅವರನ್ನೇ ಆಸ್ತಿಯನ್ನಾಗಿ ಮಾಡಬೇಕು ಎಂದು ಹೇಳಿದರು. ಪ್ರೌಢಶಾಲಾ ಮುಖ್ಯೋಪಾಧ್ಯಾಯಿನಿ ಉಷಾ ಕುಮಾರಿ ಮಾತನಾಡಿ, ರವೀಂದ್ರ ಅವರು ಕಳೆದ ೨೫ ವರ್ಷಗಳಿಂದ ನಿರಂತರವಾಗಿ ವಿದ್ಯಾರ್ಥಿಗಳಿಗೆ ಪುಸ್ತಕಗಳನ್ನು ವಿತರಿಸುತ್ತಿದ್ದಾರೆ. ಇದು ಶ್ಲಾಘನೀಯ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀಕುಮಾರಲಿಂಗೇಶ್ವರ ವಿದ್ಯಾ ಸಂಸ್ಥೆಯ ಅಧ್ಯಕ್ಷ ಕೆ.ಕೆ. ಗೋಪಾಲ್ ವಹಿಸಿದ್ದರು. ವೇದಿಕೆ ಯಲ್ಲಿ ಶಾಲಾಡಳಿತ ಮಂಡಳಿಯ ನಿರ್ದೇಶಕರು, ದಾನಿಗಳೂ ಆದ ಅರುಣ್ ಕೊತ್ನಳ್ಳಿ, ಎ.ವಿ. ಎಂಟರ್ಪ್ರೆöÊಸಸ್ನ ವೆಂಕಟೇಶ್, ಕಾರ್ಯದರ್ಶಿ ಕಾರ್ಯಪ್ಪ, ಖಜಾಂಚಿ ವೀರಪ್ಪ, ನಿರ್ದೇಶಕರಾದ ಸಂಪತ್, ಮಾಜಿ ಅಧ್ಯಕ್ಷ ಟಿ.ಪಿ. ಚಂಗಪ್ಪ, ಶ್ರೀಕುಮಾರಲಿಂಗೇಶ್ವರ ಆಂಗ್ಲ ಮಾಧ್ಯಮ ಶಾಲೆಯ ಮುಖ್ಯ ಶಿಕ್ಷಕಿ ಲೀಲಾವತಿ ಸೇರಿದಂತೆ ಇತರರು ಉಪಸ್ಥಿತರಿದ್ದರು.
ವಿದ್ಯಾರ್ಥಿ ಪ್ರಥಮ್ ಪ್ರಾರ್ಥಿಸಿ, ಶಿಕ್ಷಕರಾದ ಡಿ.ಜಿ. ಶ್ವೇತಾ, ಜಿ.ಕೆ. ಭವ್ಯ, ಕುಶಾಲಪ್ಪ ಅವರುಗಳು ಕಾರ್ಯಕ್ರಮ ನಿರ್ವಹಿಸಿದರು.
ಶ್ರೀಕುಮಾರಲಿಂಗೇಶ್ವರ ಪ್ರೌಢಶಾಲೆ, ಬೆಟ್ಟದಳ್ಳಿ ಸರ್ಕಾರಿ ಪ್ರಾಥಮಿಕ ಶಾಲೆ, ಶ್ರೀಕುಮಾರ ಲಿಂಗೇಶ್ವರ ಆಂಗ್ಲಮಾಧ್ಯಮ ಶಾಲೆಯ ೨೬೦ ವಿದ್ಯಾರ್ಥಿಗಳಿಗೆ ಉಚಿತವಾಗಿ ನೋಟ್ ಪುಸ್ತಕಗಳನ್ನು ವಿತರಿಸ ಲಾಯಿತು.