ವೀರಾಜಪೇಟೆ, ಜು. ೪: ವೀರಾಜ ಪೇಟೆಯ ವಕೀಲ ಪ್ರಶಾಂತ್ ಚಿಣ್ಣಪ್ಪ ವಿರುದ್ಧ ಮೊಕದ್ದಮೆ ದಾಖಲಾಗಿರು ವುದನ್ನು ವಿರೋಧಿಸಿ ವೀರಾಜಪೇಟೆ ವಕೀಲರ ಸಂಘದಿAದ ನ್ಯಾಯಾಲ ಯದ ಸಭಾಂಗಣದಲ್ಲಿ ಪ್ರತಿಭಟನೆ ನಡೆಸಿ, ಘಟನೆಯನ್ನು ಖಂಡಿಸಲಾಯಿತು.
ಶೀತಲ್ ದೇವಯ್ಯ ಎಂಬವರು ವೀರಾಜಪೇಟೆ ವಕೀಲ ಪ್ರಶಾಂತ್ ಚಿಣ್ಣಪ್ಪ ವಿರುದ್ಧ ದೂರು ದಾಖಲಿ ಸಿದ್ದು, ದೂರಿನಲ್ಲಿ ನವೆಂಬರ್ ೨೩, ೨೦೨೨ ರಂದು ವಕೀಲ ಪ್ರಶಾಂತ್ ಚಿಣ್ಣಪ್ಪ, ಶೀತಲ್ ಅವರ ಮೊಬೈಲ್‌ಗೆ ಕರೆ ಮತ್ತು ಮೆಸೇಜ್ ಮಾಡಿ ಅವರನ್ನು ಭೇಟಿಯಾಗುವಂತೆ ತಿಳಿ ಸಿದ್ದು ನಂತರ ಶೀತಲ್ ದೇವಯ್ಯ ಅವರ ತಂದೆ ಮುತ್ತಣ್ಣನವರನ್ನು ಭೇಟಿ ಮಾಡಿ ಅವರಿಗೂ ಬೆದರಿಕೆ ಹಾಕಿದ್ದಾರೆ ಎನ್ನಲಾದ ವಿಚಾರವಾಗಿ ಅಲ್ಲದೇ, ೩೦-೬-೨೦೨೩ರಂದು ಪತ್ರಿಕೆಯಲ್ಲಿ ನಿಹಾಲ್ ಬಿದ್ದಪ್ಪ ಎನ್ನುವ ವಿದ್ಯಾರ್ಥಿಯ ಪ್ರಕರಣ ಸಂಬAಧ ದಲ್ಲಿ ಶೀತಲ್ ದೇವಯ್ಯ ಅವರ ವೈಯಕ್ತಿಕ ವಿಚಾರದ ಬಗ್ಗೆ ಸಾರ್ವ ಜನಿಕ ಪ್ರಕಟಣೆಯನ್ನು ಪತ್ರಿಕೆಯಲ್ಲಿ ಪ್ರಕಟಿಸಿದ ಹಿನ್ನೆಲೆ ವಕೀಲ ಪ್ರಶಾಂತ್ ಚಿಣ್ಣಪ್ಪನವರ ಮೇಲೆ ಗೋಣಿಕೊಪ್ಪ ಪೊಲೀಸ್ ಠಾಣೆಯಲ್ಲಿ ಮೊಕದ್ದಮೆ ದಾಖಲಿಸಲಾಗಿದೆ.
ಈ ವಿಚಾರದ ಸಂಬAಧವಾಗಿ ವೀರಾಜಪೇಟೆ ವಕೀಲರ ಸಂಘದಿAದ ಇಂದು ವಿಶೇಷ ಸಭೆ ಕರೆದು ಸರ್ವಾ ನುಮತದಿಂದ ವಕೀಲ ಪ್ರಶಾಂತ್ ಚಿಣ್ಣಪ್ಪ ವಿರುದ್ಧ ದೂರು ದಾಖಲಿ ಸಿರುವುದನ್ನು ಖಂಡಿಸಲಾಯಿತು.
ಹಿರಿಯ ವಕೀಲರುಗಳಾದ ಎನ್.ಜಿ. ಕಾಮತ್, ಎಂ.ಕೆ. ಪೂವಯ್ಯ, ಐ.ಆರ್. ಪ್ರಮೋದ್, ದಿನೇಶ್ ಎಂ.ಕೆ. ಈ ಘಟನೆಯನ್ನು ಖಂಡಿಸಿ ಮಾತನಾಡಿದರು. ವಕೀಲ ಪ್ರಶಾಂತ್ ಚಿಣ್ಣಪ್ಪ ಘಟನೆಯ ಬಗ್ಗೆ ವಿವರಿಸಿದರು.
ಈ ಸಂದರ್ಭ ವೀರಾಜಪೇಟೆ ವಕೀಲರ ಸಂಘದ ವತಿಯಿಂದ ವಕೀಲರ ಸಂರಕ್ಷಣೆ ಕಾಯ್ದೆಯನ್ನು ಜಾರಿಗೊಳಿಸಬೇಕೆಂದು ಶಾಸಕರ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲು ತೀರ್ಮಾನಿಸಲಾಯಿತು.