ಮಡಿಕೇರಿ, ಜು. ೪ : ಗ್ರಾಮ ಪಂಚಾಯಿತಿ ಗ್ರಂಥಪಾಲಕರು, ವಾಟರ್ ಆಪರೇಟರ್‌ಗಳು, ಸ್ವಚ್ಛತಾಗಾರರ ಹಾಜರಾತಿಯನ್ನು ಪಂಚತAತ್ರ ಮೊಬೈಲ್ ಆ್ಯಪ್‌ನಲ್ಲಿ ದಾಖಲಿಸುವ ಸಂಬAಧ ರಾಜ್ಯದ ಎಲ್ಲಾ ಗ್ರಾಮ ಪಂಚಾಯಿತಿಗಳಿಗೆ ರಾಜ್ಯ ಪಂಚಾಯತ್ ರಾಜ್ ಆಯುಕ್ತಾಲಯ ನಿರ್ದೇಶನ ನೀಡಿದೆ. ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ತಮ್ಮ ಗ್ರಾಮ ಪಂಚಾಯಿತಿಯ ಗ್ರಂಥಾಲಯದ ಜಿಯೋ ಲೋಕೇಷನ್‌ನನ್ನು ಮ್ಯಾಪ್ ಮಾಡಬೇಕು, ನಂತರ ಗ್ರಂಥಪಾಲಕರು ತಮ್ಮ ಗ್ರಾಮ ಪಂಚಾಯಿತಿ ಗ್ರಂಥಾಲಯದ ಆವರಣದಲ್ಲಿ ಹಾಜರಾತಿಯನ್ನು ನೀಡಬೇಕು. (ರೇಡಿಯಸ್ ೫೦ ಮೀ. ಒಳಗೆ ಇರಬೇಕು) ವಾಟರ್ ಆಪರೇಟರ್ ಮತ್ತು ಸ್ವಚ್ಛತಾಗಾರರ ಹಾಜರಾತಿಯನ್ನು ನೀಡಲು ಗ್ರಾಮ ಪಂಚಾಯಿತಿಯಿAದ ನಿಯೋಜಿಸಿರುವ ಗ್ರಾಮಗಳನ್ನು ಮೊಬೈಲ್ ಆ್ಯಪ್‌ನಲ್ಲಿ ಆಯ್ಕೆ ಮಾಡಿ ಹಾಜರಾತಿಯನ್ನು ನೀಡಲು ಅವಕಾಶವನ್ನು ನೀಡಲಾಗಿದ್ದು, ಅದರಂತೆ ಕ್ರಮ ವಹಿಸಬೇಕೆಂದು ಆಯುಕ್ತಾಲಯ ಸೂಚಿಸಿದೆ.