ಕೂಡಿಗೆ, ಜು. ೪: ಕುಶಾಲನಗರ ತಾಲೂಕು ವ್ಯಾಪ್ತಿಯಲ್ಲಿ ರೈತರು ಮಳೆಯ ಆಧಾರಿತವಾಗಿ ಸಾವಿರಾರು ಎಕರೆಗಳಷ್ಟು ಪ್ರದೇಶಗಳಲ್ಲಿ ಮೆಕ್ಕೆಜೋಳದ ಬೆಳೆಯನ್ನು ಬೆಳೆಯುತ್ತಾರೆ, ಆದರೆ ಈ ಸಾಲಿನಲ್ಲಿ ಮುಂಗಾರು ಮಳೆಯು ಕಡಿಮೆ ಬಿದ್ದರೂ ಸಹ ರೈತರು ಮುಂದೆ ಮಳೆ ಅಗಬಹುದು ಎಂಬ ನಿರೀಕ್ಷೆಯಲ್ಲಿ ಜೋಳದ ಬಿತ್ತನೆಯನ್ನು ಮಾಡಿರುತ್ತಾರೆ, ಮೆಕ್ಕೆಜೋಳದ ಬೆಳೆಗೆ ಕಡಿಮೆ ಪ್ರಮಾಣದ ನೀರಾವರಿ ಸೌಲಭ್ಯ ಒದಗಿದರೆ ಸಾಕು ಬೆಳೆ ಬೆಳೆಯಲು ಆರಂಭವಾಗುವುದು, ಆದರೆ ಮೆಕ್ಕೆಜೋಳವು ಒಂದು ಅಡಿಯಷ್ಟು ಬೆಳೆಯುವಷ್ಟರಲ್ಲಿ ರೋಗ ಕಾಣಿಸಿಕೊಂಡು ಜೋಳದ ಗರಿಗಳನ್ನು ಹುಳುಗಳು ತಿನ್ನಲು ಆರಂಭ ಮಾಡಿದ ಹಿನ್ನೆಲೆಯಲ್ಲಿ ಮೆಕ್ಕೆಜೋಳದ ಬೆಳೆ ಕುಂಠಿತವಾಗುತ್ತಿದೆ.

ಮೆಕ್ಕೆಜೋಳಕ್ಕೆ ರೋಗ ಕಾಣಿಸಿಕೊಂಡ ಕುಶಾಲನಗರ ತಾಲೂಕಿನ ತೊರೆನೂರು, ಶಿರಂಗಾಲ, ಹೆಬ್ಬಾಲೆ ಸೀಗೆಹೊಸೂರು ಭುವನಗಿರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳಿಗೆ ಸೋಮವಾರಪೇಟೆ ತಾಲೂಕು ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ಯಾದವ್ ಬಾಬು ಅವರು ಭೇಟಿ ನೀಡಿ ಪರಿಶೀಲನೆ ನಡೆಸಿ ರೋಗ ನಿರೋಧಕ ಶಕ್ತಿ ಔಷಧಿಗಳ ಸಿಂಪಡಣೆಗೆ ಸಲಹೆ ನೀಡಿದರು.

ಮೆಕ್ಕೆಜೋಳಕ್ಕೆ ಈ ಬಾರಿ ಹವಾಮಾನ ವೈಪರೀತ್ಯದಿಂದ ಜೋಳಕ್ಕೆ ಸಂಜೆ ಸಮಯದಲ್ಲಿ ಸೈನಿಕ ಹುಳುಗಳ ಹಾವಳಿಯು ಹೆಚ್ಚಾಗಿ ಕಂಡುಬರುತ್ತದೆ. ಇದಕ್ಕೆ ಪ್ರತಿಯಾಗಿ ರೋಗ ನಿರೋಧಕ ಶಕ್ತಿ ಔಷಧಿಯಾಗಿ ಬಿನ್‌ಜೋಟೋ (beಟಿzoಚಿಣe) ಔಷಧಿಯನ್ನು ೦.೪ ಜಿ,ಎಂ, ಪ್ರತಿ ಒಂದು ಲೀಟರ್ ನೀರಿನಲ್ಲಿ ಬಳಸಿಕೊಂಡು ಸಿಂಪಡಣೆ ಮಾಡುವಂತೆ ರೈತರಿಗೆ ಸಲಹೆಯನ್ನು ನೀಡಿದರು. ಕೃಷಿ ಇಲಾಖೆಯ ಅಧಿಕಾರಿಗಳ ಸಲಹೆಯಂತೆ ರೋಗ ನಿರೋಧಕ ಶಕಿ ಔಷಧಿಯನ್ನು ಸಿಂಪಡಣೆ ಮಾಡಲಾಗುತ್ತಿದೆ.