ಪ್ರತೀ ವರ್ಷ ಭಾರತೀಯ ಹವಾಮಾನ ಇಲಾಖೆಯು ಮಾರ್ಚ್ ಅಥವಾ ಏಪ್ರಿಲ್ ತಿಂಗಳಿನಲ್ಲಿ ಮುಂಗಾರು ಮಳೆ ಮೋಡಗಳ ಆಗಮನದ ದಿನಾಂಕವನ್ನು ತಿಂಗಳ ಮೊದಲೇ ಅಧಿಕೃತವಾಗಿ ಪ್ರಕಟಪಡಿಸುತ್ತವೆ. ಈಗ ಆಕಾಶದಲ್ಲಿರುವ ಉಪಗ್ರಹಗಳು ಮತ್ತು ಅವುಗಳಲ್ಲಿರುವ ‘ಹೈ ರೆಸೊಲ್ಯೂಷನ್ ಲೆನ್ಸ್' ಮತ್ತು ಇತರ ಉಪಕರಣಗಳ ಸಹಾಯದಿಂದ ಭಾರತದ ಕೇರಳವನ್ನು ಪ್ರವೇಶಿಸುವ ಮುಂಗಾರು ಮೋಡಗಳ ನಿಖರ ದಿನಾಂಕವನ್ನು ಮೊದಲೇ ಪ್ರಕಟಿಸಲು ಸಾಧ್ಯ. ಮುಂಗಾರು ಮಾರುತಗಳಿಗೆ ‘ವಾಣಿಜ್ಯ ಮಾರುತ’ಗಳೆಂದೂ ಕರೆಯುತ್ತಾರೆ. ಯುರೋಪ್ ಖಂಡದ ಅನೇಕ ದೇಶಗಳು ನಾಲ್ಕಾರು ಶತಮಾನಗಳ ಹಿಂದೆ ಭಾರತದ ಸಾಂಬಾರು ಪದಾರ್ಥಗಳ ವ್ಯಾಪಾರಕ್ಕಾಗಿ ಇಲ್ಲಿಗೆ ಸಮುದ್ರ ಮಾರ್ಗವನ್ನು ಅನ್ವೇಷಿಸಿದಾಗ ಅವರ ಸಹಾಯಕ್ಕೆ ಒದಗಿದ್ದೇ ಈ ಮುಂಗಾರು ಮಾರುತಗಳು. ಯೂರೋಪಿನಿಂದ ಹೊರಟ ಹಡಗುಗಳು ಆಫ್ರಿಕಾ ಖಂಡವನ್ನು ಸುತ್ತುವರೆದು ಪೂರ್ವಾಭಿಮುಖವಾಗಿ ತಿರುಗಿದಾಗ ಪ್ರತೀ ಜೂನ್ ತಿಂಗಳಿAದ ತೊಡಗಿ ಮುಂದಿನ ನಾಲ್ಕು ತಿಂಗಳುಗಳ ಕಾಲ ಈ ಮುಂಗಾರು ಮಾರುತಗಳೆಂಬ ರಥವನ್ನೇರಿ ಬಹಳ ಸುಲಭವಾಗಿ ಹಾಯಿ ಹಡಗುಗಳ ಗಾಳಿಯ ನೂಕುಬಲದ ಸಹಾಯದಿಂದ ಭಾರತದ ಕೊಚ್ಚಿ, ಗೋವಾ, ಮುಂಬೈ ಬಂದರುಗಳನ್ನು ತಲಪುತ್ತಿದ್ದರು. ಭಾರತದ ಮುಂಗಾರು ಮಾರುತಗಳ ಆಗಮನ ಎಷ್ಟು ನಿಖರವಾಗಿ ಇರುತ್ತದೆ ಎಂದರೆ ಶತ ಶತಮಾನಗಳಿಂದಲೂ ಪ್ರತೀ ಜೂನ್ ತಿಂಗಳ ಮೊದಲ ವಾರದಂದು ಕೇವಲ ಒಂದೆರಡು ದಿವಸಗಳ ವ್ಯತ್ಯಾಸದಲ್ಲಿ ಕೇರಳ ರಾಜ್ಯದ ದಕ್ಷಿಣ ತುದಿಯನ್ನು ತಲಪಿ ಹಾಗೆ ಉತ್ತರದತ್ತ ಚಲಿಸುತ್ತಾ ಮಳೆಯನ್ನೂ ಸುರಿಸುತ್ತಾ ಸಂಪೂರ್ಣ ಭಾರತವನ್ನು ಆವರಿಸುತ್ತದೆ. ಹಾಗೆಯೇ ಮುಂಗಾರು ಮಾರುತಗಳು ಹೊತ್ತು ತರುವ ಮಳೆ ಮೋಡಗಳು ದೇಶಾದ್ಯಂತ ಸುರಿದು ದೇಶದ ಕೃಷಿ ಬದುಕಿನ ಬೆನ್ನೆಲುಬಾಗಿ ರೈತರ ಮುಖಗಳಲ್ಲಿ ಮಂದಹಾಸವನ್ನು ಮೂಡಿಸುತ್ತದೆ. ಆಧುನಿಕ ಕೃತಕ ಉಪಗ್ರಹಗಳ ಸಹಾಯವಿದ್ದರೂ, ಈ ವರ್ಷ ನಡೆದ ವಿದ್ಯಾಮಾನದಂತೆ; ಜೂನ್ ಒಂದನೇ ತಾರೀಕಿನಂದು ಮುಂಗಾರು ಮಾರುತಗಳು ಆಗಮಿಸುತ್ತವೆಂದು ಹವಾಮಾನ ಇಲಾಖೆ ಘೋಷಿಸಿದ್ದರೂ ಆಗಿದ್ದೇನು? ಮುಂಗಾರು ಮೋಡಗಳು ಬೇಕೋ ಬೇಡವೋ ಎಂಬAತೆ ಅಂಜುತ್ತಾ ಮೆಲ್ಲನೆ ಪಶ್ಚಿಮ ಕರಾವಳಿಗೆ ಹೆಜ್ಜೆ ಊರಿದ್ದು ತುಂಬಾ ತಡವಾಗಿ ಜೂನ್ ಹದಿನೈದನೇ ತಾರೀಕಿನ ಬಳಿಕ ! ಈ ವರ್ಷ ಎಂದಿನAತೆ ಸಾಮಾನ್ಯ ಸರಾಸರಿ ಮಳೆ ಸುರಿಯುತ್ತದೆ ಎಂದು ಅಂದಾಜಿಸಿದ್ದು ಏರುಪೇರಾಗಿ ಕೆಲವೆಡೆ ಬರಗಾಲ ಪರಿಸ್ಥಿತಿ ಏರ್ಪಡುವ ಸಂಭವ ಇದೆಯೆಂದು ಭಾವಿಸಲಾಗಿದೆ.

ಇಷ್ಟೆಲ್ಲಾ ಆಧುನಿಕ ಸೌಲಭ್ಯಗಳಿದ್ದರೂ ಮುಂಗಾರು ಮಾರುತಗಳು ಭಾರತದ ದಕ್ಷಿಣ ಕರಾವಳಿಯಲ್ಲಿ ನೆಲೆಯೂರಲು ನಿಗದಿತ ಸಮಯದಲ್ಲಿ ಅಸಾಧ್ಯವಾಗಿದ್ದು; ಪ್ರಕೃತಿಯ ಮತ್ತೊಂದು ಅನಿರೀಕ್ಷಿತ ಘಟನೆಯಾದ 'ಸೈಕ್ಲೋನ್'ಗಳೆಂಬ ಚಂಡಮಾರುತದ ಬಿರುಗಾಳಿಯ ಅಬ್ಬರ ಕಾರಣ. ಪ್ರಕೃತಿಯ ಹೊಂದಾಣಿಕೆಗಳು ಎಷ್ಟೊಂದು ಸೂಕ್ಷö್ಮವಾಗಿದೆಯೆಂದರೆ ನಾವು ಮನುಷ್ಯರು ಅದನ್ನು ಅರ್ಥ ಮಾಡಿಕೊಳ್ಳಲು ಇನ್ನೂ ಸಾಧ್ಯವಾಗಿಲ್ಲ! ಹೆಚ್ಚೆಂದರೆ ಅದರ ಪರಿಣಾಮವನ್ನು ಅನುಭವಿಸಿದ ನಂತರ ‘ಇದು ಹೀಗಾಗಲು ಕಾರಣ ಏನೆಂದು' ವಿಶ್ಲೇಷಣೆ ಮಾಡಬಹುದಷ್ಟೆ. ಜೂನ್ ಮೊದಲ ವಾರದಲ್ಲಿ ಭಾರತದ ಹೊಸ್ತಿಲಲ್ಲಿ ಕಾಲಿಡಲು ಸಜ್ಜಾಗಿದ್ದ ‘ನವವಧು ಮುಂಗಾರುವಿ’ನಲ್ಲಿದ್ದ ಮಳೆ ಮೋಡಗಳನ್ನು, ತೇವಾಂಶವನ್ನು ‘ಸೈಕೋನ್’ ಎಂಬ ರಾಕ್ಷಸ ಅಪಹರಿಸಿಕೊಂಡು ಉತ್ತರ ದಿಕ್ಕಿನತ್ತ ನಿಧಾನವಾಗಿ ಚಲಿಸಿ, ದೂರದ ಗುಜರಾತ್ ಮತ್ತು ರಾಜಾಸ್ತಾನ ರಾಜ್ಯಗಳಲ್ಲಿ ಅತಿವೃಷ್ಟಿ ಮಾಡಿ, ಪ್ರವಾಹ ಪರಿಸ್ಥಿತಿ ಉಂಟುಮಾಡಿತು. ಲಕ್ಷಾಂತರ ಜನ, ಜಾನುವಾರುಗಳಿಗೆ ಮಾರಕವಾಯಿತು. ಇತ್ತ ದಕ್ಷಿಣದ ರಾಜ್ಯಗಳಲ್ಲಿ, ಪ್ರಮುಖವಾಗಿ ಕರ್ನಾಟಕದ ಮೂವತ್ತು ಜಿಲ್ಲೆಗಳ ಪೈಕಿ ಇನ್ನೂರ ಹದಿನೇಳು ತಾಲೂಕುಗಳಲ್ಲಿ ಮಳೆಯಿಲ್ಲದೆ, ಸಕಾಲದಲ್ಲಿ ಬೀಜ ಬಿತ್ತನೆಯಾಗದೆ ಬರ ಪರಿಸ್ಥಿತಿ ಉಂಟಾಗಿದೆಯೆAದು ಸರ್ಕಾರ ಪ್ರಕಟಪಡಿಸಿದೆ. ಹಾಗಾದರೆ ಇದೇನಿದು ಮುಂಗಾರಿನ ನಡುವೆ ತೂರಿಕೊಂಡ ಸೈಕ್ಲೋನು? ಏಕೆ, ಹೇಗೆ ಎಂಬ ಬಗ್ಗೆ ಒಂದು ವೈಜ್ಞಾನಿಕ ವಿಶ್ಲೇಷಣೆ ಈ ಲೇಖನ.

ಹಿಂದೂ ಮಹಾಸಾಗರಕ್ಕೆ ಹೊಂದಿಕೊAಡAತಿರುವ ಭಾರತ, ಬಾಂಗ್ಲಾ, ಮಯನ್ಮಾರ್, ಪಾಕಿಸ್ಥಾನ, ಶ್ರೀಲಂಕಾಗಳಲ್ಲದೆ ಸೌದಿ, ಕತಾರ್, ಯೆಮನ್ ಇರಾನ್ ಮುಂತಾದ ಒಟ್ಟು ಹದಿಮೂರು ರಾಷ್ಟçಗಳು ಅರಬಿ ಸಮುದ್ರ ಮತ್ತು ಬಂಗಾಳಕೊಲ್ಲಿಗಳ ಪ್ರಭಾವ ವಲಯದೊಳಗೆ ಇವೆ. ಇವುಗಳ ಮೇಲೆ ಬಹುತೇಕವಾಗಿ ಮುಂಗಾರು ಮಾರುತಗಳ ಖಚಿತ ಮತ್ತು ಸೈಕೋನ್ ಚಂಡಮಾರುತಗಳ ಅನಿಶ್ಚಿತ ಪರಿಣಾಮ ನಿಸರ್ಗ ಏರ್ಪಡಿಸಿದ ವಿಧಿ. ಮುಂಗಾರು ಮೋಡ-ಮಳೆಗಾಳಿಗೆ ಒಂದು ನಿಯಮ, ಸಮಯ ಬದ್ಧತೆ ಇದ್ದರೆ, ಸೈಕ್ಲೋನ್‌ಗಳಿಗೆ ಅಂತಹ ಸಮಯ ಕಟ್ಟು ಪಾಡುಗಳಿಲ್ಲ. ಎಲ್ಲೋ ದೂರದ ಶಾಂತ ಸಾಗರದಲ್ಲಿ ಎಲ್‌ನೀನೋದಂತಹ ಪರಿಣಾಮದಿಂದ ಸಮುದ್ರದಗಳಲ್ಲಿ ಉಂಟಾಗುವ ಉಷ್ಣಾಂಶದಲ್ಲಿನ ಏರುಪೇರು ಅಥವಾ ಸಾಗರದ ದಕ್ಷಿಣ ಮತ್ತು ಉತ್ತರ ದ್ರುವಗಳಲ್ಲಿನ ತಣ್ಣನೆಯ ನೀರು, ಭೂಮಧ್ಯ ರೇಖೆಯ ಬಳಿ ಸೂರ್ಯನ ಶಾಖದಿಂದ ಬಿಸಿಯಾದ ನೀರಿನತ್ತ ಸಾಗುವ ಭೌತಿಕ ಕ್ರಿಯೆಯ ಪರಿಣಾಮ ಏರುಪೇರು ಉಂಟಾಗುತ್ತದೆ. ಇದರಿಂದ ಸಮುದ್ರದ ಮೇಲ್ಮೆöÊಯ ಗಾಳಿಯಲ್ಲಿ, ನೀರಾವಿಯ ಭಾಷ್ಪದಿಂದ ಉಂಟಾಗುವ ಮೋಡಗಳಲ್ಲಿ ಒಂದು ರೀತಿಯ ವೃತ್ತಾಕಾರದ ಚಾಲನೆ ಪ್ರಾರಂಭವಾಗಿ ಕ್ರಮೇಣ ಬಲವನ್ನು ಪಡೆದುಕೊಂಡು ಅತೀ ವೇಗದಿಂದ ಸಮುದ್ರದಿಂದ ಭೂಮಿಯ ಕಡೆ ಸುರುಳಿಯಾ ಕೃತಿಯಲ್ಲಿ ಚಲಿಸುತ್ತವೆ. ಇದೆ ಸೈಕ್ಲೋನ್‌ಗಳೆಂಬ ತೂಫಾನು ರಾಕ್ಷಸ ಶಕ್ತಿಯ ಹುಟ್ಟು. ಇದು ಬಲವಾದ ಮಳೆ-ಗಾಳಿಯೊಡನೆ ಗಂಟೆಗೆ ನೂರಾ ಐವತ್ತು ಕಿಲೋಮೀಟರ್‌ನಿಂದ ನಾಲ್ಕುನೂರಾ ಎಂಬತ್ತು ಕಿಲೋ ಮೀಟರ್‌ವರೆಗಿನ ಗರಿಷ್ಠ ವೇಗದಲ್ಲಿ ಕರಾವಳಿ ತೀರಕ್ಕೆ ಅಪ್ಪಳಿಸುವ ಸಾಧ್ಯತೆ ಇರುತ್ತದೆ. ನಮ್ಮ ಹಿಂದೂ ಮಹಾ ಸಾಗರದಲ್ಲಿ ಹೀಗೆ ಉಂಟಾಗುವ ತೂಫಾನು ಅಥವಾ ಚಂಡಮಾರುತಗಳಿಗೆ "ಸೈಕ್ಲೋನ್" ಎಂದು ಹೆಸರಿದ್ದರೆ, ಅಮೆರಿಕಾ ಖಂಡಗಳ ಪೂರ್ವ ತೀರದಿಂದ ಆಫ್ರಿಕಾ ಖಂಡದ ಪಶ್ಚಿಮ ತೀರದ ಇಂತಹ ತೂಫಾನುಗಳಿಗೆ "ಹರಿಕೇನ್"ಗಳೆಂದೂ, ಅಂತೆಯೇ ಚೀನಾ, ಜಪಾನು, ವಿಯಟ್ನಾಮ್ ದೇಶಗಳ ಪೂರ್ವ ಕರಾವಳಿ ಭಾಗಗಳಲ್ಲಿ ಉದ್ಭವಿಸುವ ತೂಫಾನುಗಳಿಗೆ "ಟೈಫೂನ್" ಎಂದು ಕರೆಯುತ್ತಾರೆ.

ಭೂ ವಿಜ್ಞಾನಿಗಳು ಈ "ಹುರಿಕೇನ್, ಸೈಕ್ಲೋನು, ಟೈಫೂನುಗಳ" ನಿರ್ದಿಷ್ಟ ಗಡಿರೇಖೆಯನ್ನು ರೇಖಾಂಶಗಳ ಆಧಾರದ ಮೇಲೆ ಗುರುತಿಸಿದ್ದಾರೆ. ಉದಾಹರಣೆಗೆ, ಸೈಕ್ಲೋನ್‌ಗಳ ಗಡಿರೇಖೆ ೪೫ ಡಿಗ್ರಿ ಪೂರ್ವ ರೇಖಾಂಶದಿAದ, ೧೦೦ ಡಿಗ್ರಿ ಪೂರ್ವ ರೇಖಾಂಶದ ನಡುವೆ ಉಂಟಾಗುವ ಚಂಡಮಾರುತಗಳು. ಈಗ, ಇಪ್ಪತ್ತೊಂದನೇ ಶತಮಾನದ ನಂತರ ಉಂಟಾಗುವ ಎಲ್ಲಾ ಚಂಡಮಾರುತಗಳಿಗೆ ಹವಾಮಾನ ಇಲಾಖೆಗಳ ಸಂಘಟನೆಗಳಿAದ ಹೆಸರಿಸುವ ಕ್ರಮ ಪ್ರಾರಂಭವಾಯಿತು. ಈ ಮೊದಲೇ ವಿವರಿಸಿದಂತೆ ಸೈಕ್ಲೋನ್‌ಗಳ ಪ್ರಭಾವಳಿಗೆ ಸಿಲುಕುವ ಹಿಂದೂ ಮಹಾಸಾಗರ ವಲಯದಲ್ಲಿ ಭಾರತವೂ ಸೇರಿದಂತೆ, ಹದಿಮೂರು ರಾಷ್ಟçಗಳ ಹವಾಮಾನ ಇಲಾಖೆಗಳ ಸಂಘಟನೆಯ ನಿಯಮದಂತೆ ಹೆಸರಿಸುವ ಕ್ರಮ ನಡೆಯುತ್ತದೆ. ಕ್ರಮವಾಗಿ ಈ ಹದಿಮೂರು ರಾಷ್ಟçಗಳು ಮಾತ್ರ ಈ ವಲಯದಲ್ಲಿ ಉದ್ಭವಿಸುವ ಸೈಕ್ಲೋನ್‌ಗಳಿಗೆ ಹೆಸರಿಸುವ ಹಕ್ಕು ಇರುತ್ತದೆ. ನಿಯಮದಂತೆ ಪ್ರಸ್ತುತದ ಸೈಕ್ಲೋನಿಗೆ "ಬಿಪರ್ ಜಾಯ್" ಹೆಸರಿಟ್ಟಿದ್ದು ಬಾಂಗ್ಲಾ ದೇಶ. ಬಾಂಗ್ಲಾ ಭಾಷೆಯಲ್ಲಿ ಬಿಪರ್ ಜಾಯ್ ಅರ್ಥವೆಂದರೆ "ವಿಪತ್ತು"; ಬಹಳ ಅನ್ವರ್ಥಕ ಎನಿಸುತ್ತದೆ.

ಪ್ರಕೃತಿಯ ವಿಸ್ಮಯ, ಲೆಕ್ಕಾಚಾರ ಅಲ್ಪ ಮಾನವನ ಬುದ್ಧಿಗೆ ಎಟುಕದ ವಿಚಾರ. ಮುಂಗಾರು ಮಳೆ ಜೂನ್ ತಿಂಗಳಿನ ಮೊದಲ ವಾರದಲ್ಲಿ ಪ್ರಾರಂಭವಾದರೆ ಜುಲೈ ಪ್ರಾರಂಭದ ಹೊತ್ತಿಗೆ ಒಂದು ತಿಂಗಳಿನ ಅವಧಿಯಲ್ಲಿ ಭಾರತದಾದ್ಯಂತ ಮಳೆ ಸುರಿಸಿ, ತಣ್ಣನೆಯ ಗಾಳಿ ಬೀಸುತ್ತ ಭೂಮಿಯನ್ನು, ಜೀವಿಗಳನ್ನು ತಂಪುಗೊಳಿಸುತ್ತದೆ, ಹಸಿರಾಗಿಸುತ್ತದೆ. ಆದರೆ ರಾಜಸ್ತಾನದ ‘ಥಾರ್' ಮರುಭೂಮಿಗೆ ಮುಂಗಾರು ಬಲು ದೂರ. ಬರಡು ನೆಲದಲ್ಲಿ ನೀರು ನೆರಳಿನ ಹಸಿರು ತೀರಾ ಅಪರೂಪ. ಆದರೆ ಅಲ್ಲಿಗೂ ಸಲ್ಲುವ ಬದುಕುತ್ತಿರುವ ಜೀವಗಳಿವೆ, ಪ್ರಾಣಿ ಪಕ್ಷಿ ಕೀಟಗಳಿವೆ. ಈಗ ಪ್ರಕೃತಿ ಮಾತೆ ನಮ್ಮ ಮುಂಗಾರಿನ ಒಂದು ಚೂರು ಮೋಡ,ಮಳೆ ಮತ್ತು ತಂಪನ್ನು ಕಿತ್ತು ಬಿಪರ್ ಜಾಯ್ ಚಂಡಮಾರುತದ ರೂಪದಲ್ಲಿ ಅಲ್ಲಿಗೂ ನ್ಯಾಯ ಸಲ್ಲಿಸಿದೆ ಎಂದು ಭಾವಿಸಲು ಅಡ್ಡಿಯಿಲ್ಲ.

- ವಿಶ್ವನಾಥ್ ಎಡಿಕೇರಿ, ಬೆಂಗಳೂರು.

ಮೊ. ೬೩೬೦೩೪೯೯೩೮