ಬೆಂಗಳೂರು, ಜು. ೪ : ಲೋಕಾಯುಕ್ತ ಬಲೆಗೆ ಬಿದ್ದಿರುವ ಬೆಂಗಳೂರು ನಗರದ ಕೆ.ಆರ್. ಪುರಂ ತಹಶೀಲ್ದಾರ್ ಅಜಿತ್ ರೈ ಹೊಂದಿರುವ ನೂರಾರು ಕೋಟಿ ರೂಪಾಯಿಗಳ ಬೇನಾಮಿ ಆಸ್ತಿಯ ಕುರಿತು ಲೋಕಾಯುಕ್ತದ ವಿಶೇಷ ತನಿಖಾ ತಂಡ ತನಿಖೆಯನ್ನು ಚುರುಕುಗೊಳಿಸಿದೆ.

೨೦೦೨ ರಲ್ಲಿ ಪ್ರಥಮ ದರ್ಜೆ ಗುಮಾಸ್ತನಾಗಿ ಅನುಕಂಪದ ಆಧಾರದಲ್ಲಿ ಕೆಲಸಕ್ಕೆ ಸೇರಿದ ಅಜಿತ್ ರೈ ೨೦೦೮ ರಲ್ಲಿ ತಹಶೀಲ್ದಾರ್ ಆಗಿ ಬಡ್ತಿ ಹೊಂದಿದ್ದರು. ಸರ್ಕಾರಿ ಕೆಲಸಕ್ಕೆ ಸೇರಿದ ೨೧ ವರ್ಷಗಳಲ್ಲಿ ರೈ ಅವರ ಆಸ್ತಿ ೫೦೦ ಕೋಟಿ ರೂಪಾಯಿಗೂ ಹೆಚ್ಚಾಗಿದ್ದು ಬೆಂಗಳೂರು, ಚಿಕ್ಕಬಳ್ಳಾಪುರ, ದೇವನಹಳ್ಳಿ ಮತ್ತು ಇತರೆಡೆಗಳಲ್ಲಿ ತಮ್ಮ ಆಪ್ತ ಮತ್ತು ಸ್ನೇಹಿತರ ಹೆಸರಿನಲ್ಲಿ ಬೇನಾಮಿ ಆಸ್ತಿ ಹೊಂದಿರುವುದು ಪತ್ತೆ ಆಗಿದೆ. ಅಜಿತ್ ರೈ ಕೊಡಗಿನ ಕುಶಾಲನಗರ ಮತ್ತು ಮಡಿಕೇರಿ ಸಮೀಪ ಸ್ಥಿರಾಸ್ತಿ ಹೊಂದಿರುವ ಕುರಿತು ಅಧಿಕಾರಿಗಳು ಶೋಧ ಕೈಗೊಂಡಿದ್ದಾರೆ. ಜಿಲ್ಲೆಯಲ್ಲಿ ರೆಸಾರ್ಟ್ ಹೊಂದಿದ್ದಾರೆ ಎಂದೂ ಹೇಳಲಾಗುತ್ತಿದ್ದು ಈ ಕುರಿತು ಮಾಹಿತಿ ನೀಡಿದ ಲೋಕಾಯುಕ್ತ ಅಧಿಕಾರಿಯೊಬ್ಬರು ಪುತ್ತೂರು ಮೂಲದ ಈ ಅಧಿಕಾರಿ ಹೊಂದಿರುವ ಬಹುತೇಕ ಆಸ್ತಿಗಳು ಬೇನಾಮಿ ಹೆಸರಿನಲ್ಲಿದ್ದು ೭ ದಿನಗಳ ಕಸ್ಟಡಿ ಪಡೆದಿರುವ ಅಧಿಕಾರಿಗಳು ಪ್ರತಿ ಮಾಹಿತಿಯನ್ನೂ ಕೂಲಂಕುಷವಾಗಿ ಪರಿಶೀಲಿಸುತ್ತಿದ್ದಾರೆ. ಬೇನಾಮಿ ಹೆಸರಿನಲ್ಲಿರುವುದರಿಂದ ಇದು ಈತನೇ ಅಕ್ರಮ ಸಂಪಾದನೆಯಿAದ ಗಳಿಸಿದ್ದು ಎಂದು ಸಾಬೀತುಪಡಿಸುವುದು ಕಷ್ಟದ ಕೆಲಸವಾಗಿದೆ.

ಅಜಿತ್ ರೈ ೧೧ ಐಷಾರಾಮಿ ಕಾರುಗಳು, ಬೈಕ್‌ಗಳನ್ನೂ ಹೊಂದಿದ್ದು ಈ ಕಾರುಗಳ ಮೌಲ್ಯವೇ ೧೦ ಕೋಟಿ ರೂಪಾಯಿ ಮೀರಿದೆ. ಸಹಕಾರ ನಗರದ ಅಜಿತ್ ರೈ ಮನೆ ಮೇಲೆ ದಾಳಿ ಮಾಡಿದ ವೇಳೆ ಫಾರ್ಮುಲಾ ರೇಸಿಂಗ್ ಟ್ರಾö್ಯಕ್ ನಿರ್ಮಾಣ ಮಾಡಲು ಸಿದ್ಧಪಡಿಸಿದ್ದ ನೀಲ ನಕಾಶೆ ಪತ್ತೆಯಾಗಿದ್ದು, ದೇವನಹಳ್ಳಿ ಬಳಿ ರೇಸಿಂಗ್ ಟ್ರಾö್ಯಕ್ ನಿರ್ಮಾಣ ಮಾಡಲು ಮುಂದಾಗಿದ್ದುದು ತಿಳಿದು ಬಂದಿದೆ.

ಈ ಅಧಿಕಾರಿಯು ಬೆಂಗಳೂರಿನಲ್ಲಿಯೇ ಇದ್ದರೆ ತನಿಖೆಯಲ್ಲಿ ಹಸ್ತಕ್ಷೇಪ ಮಾಡಬಹುದು ಎಂಬ ಕಾರಣಕ್ಕಾಗಿ ರಾಜ್ಯ ಸರ್ಕಾರ ಇವರನ್ನು ಹಿಂಬಡ್ತಿ ನೀಡಿ ರಾಯಚೂರು ಜಿಲ್ಲೆಯ ಸಿರಿವಾರ ತಾಲೂಕಿನ ಗ್ರೇಡ್ ೨ ತಹಶೀಲ್ದಾರ್‌ನನ್ನಾಗಿ ವರ್ಗಾವಣೆ ಮಾಡಿದೆ. ಆದರೆ ಸಿರಿವಾರದ ನಾಗರಿಕರು, ಸಂಘ ಸಂಸ್ಥೆಗಳು ಈ ವರ್ಗಾವಣೆಯನ್ನು ತೀವ್ರವಾಗಿ ವಿರೋಧಿಸಿದ್ದು ದಕ್ಷ ಅಧಿಕಾರಿಯನ್ನು ನೇಮಿಸುವಂತೆ ಒತ್ತಾಯಿಸಿವೆ. ತಪ್ಪಿದಲ್ಲಿ ತೀವ್ರ ಪ್ರತಿಭಟನೆಯ ಎಚ್ಚರಿಕೆಯನ್ನೂ ನೀಡಿವೆ. - ಕೋವರ್ ಕೊಲ್ಲಿ ಇಂದ್ರೇಶ್