ಬೆಂಗಳೂರು, ಜು. ೨: ಕೇರಳ ರಾಜ್ಯ ಸರ್ಕಾರದ ಸಹಕಾರಿ ಹಾಲು ಉತ್ಪಾದನಾ ಸಂಸ್ಥೆ ಮಿಲ್ಮಾ ತನ್ನ ಮಾರಾಟವನ್ನು ವಿಸ್ತರಿಸಲು ಯೋಜಿಸಿದ್ದು ಕರ್ನಾಟಕದ ಮಾರುಕಟ್ಟೆಗೆ ಕಾಲಿಡಲು ಯೋಜನೆ ರೂಪಿಸಿದೆ. ಮೊದಲಿಗೆ ಬೆಂಗಳೂರು, ಮೈಸೂರು ಮತ್ತು ಕೊಡಗಿನಲ್ಲಿ ತನ್ನ ರೀಟೇಲ್ ಔಟ್‌ಲೆಟ್‌ಗಳನ್ನು ತೆರೆಯಲಿದೆ ಎಂದು ಕೆಸಿಎಂಎAಎಫ್ (ಏeಡಿಚಿಟಚಿ ಛಿo oಠಿeಡಿಚಿಣive miಟಞ mಚಿಡಿಞeಣiಟಿg ಜಿeಜeಡಿಚಿಣioಟಿ) ಅಧ್ಯಕ್ಷ ಕೆ.ಎಸ್. ಮಣಿ ಸುದ್ದಿಗಾರರಿಗೆ ತಿಳಿಸಿದ್ದಾರೆ.

ಕೇರಳದ ಸಹಕಾರಿ ಸಂಸ್ಥೆಯೊAದು ಕರ್ನಾಟಕದಲ್ಲೇ ಪ್ರಬಲವಾಗಿರುವ ಸಹಕಾರಿ ಸಂಸ್ಥೆ ಕೆಎಂಎಫ್‌ನ ತವರು ರಾಜ್ಯದಲ್ಲೇ ಮಳಿಗೆ ತೆರೆಯಲು ಮುಂದಾಗಿರುವುದು ಅಚ್ಚರಿಯ ಸಂಗತಿ ಆಗಿದೆ. ದೇಶದಲ್ಲಿ ಅತೀ ದೊಡ್ಡ ಹಾಲಿನ ಸಹಕಾರಿ ಸಂಸ್ಥೆ ಅಮುಲ್ ನಿತ್ಯ ೧೨೬.೫ ಲಕ್ಷ ಲೀಟರ್ ಹಾಲನ್ನು ಸಂಗ್ರಹಿಸುತ್ತಿದ್ದರೆ ಎರಡನೇ ಸ್ಥಾನದಲ್ಲಿರುವ ಕೆಎಂಎಫ್ ನಿತ್ಯ ೮೭.೬ ಲಕ್ಷ ಲೀಟರ್‌ಗಳಷ್ಟು ಹಾಲನ್ನು ಸಂಗ್ರಹಿಸುತ್ತಿದೆ. ಆದರೆ ಕೇರಳದ ಸಂಸ್ಥೆ ಮಿಲ್ಮಾ ನಿತ್ಯ ಸಂಗ್ರಹ ೧೫.೮ ಲಕ್ಷ ಲೀಟರ್‌ಗಳಷ್ಟು ಮಾತ್ರ ಇದೆ. ಅಲ್ಲದೆ ಕೇರಳವೇ ಹಾಲಿನ ಕೊರತೆ ಎದುರಿಸುತ್ತಿದ್ದು ತಮಿಳುನಾಡು, ಆಂಧ್ರಪ್ರದೇಶ ಮತ್ತು ಕರ್ನಾಟಕದಿಂದಲೂ ಹಾಲನ್ನು ಸರಬರಾಜು ಮಾಡಲಾಗುತ್ತಿದೆ.

ಕೆಎಂಎಫ್ ಈಗಾಗಲೇ ನೆರೆಯ ರಾಜ್ಯಗಳೂ ಸೇರಿದಂತೆ, ಈಶಾನ್ಯ ರಾಜ್ಯಗಳು, ರಕ್ಷಣಾ ಇಲಾಖೆ ಮತ್ತು ವಿದೇಶಗಳಿಗೂ ಹಾಲನ್ನು ರಫ್ತು ಮಾಡುತ್ತಿದೆ. ತನ್ನ ಮಾರುಕಟ್ಟೆ ವಿಸ್ತರಣೆಯ ಅಂಗವಾಗಿ ಪ್ರಸ್ತುತ, ಎರ್ನಾಕುಲಂ ಜಿಲ್ಲೆಯ ಕಾಕ್ಕನಾಡ್ ಮತ್ತು ಎಲಮಕರ, ಪತ್ತನಂತಿಟ್ಟ ಜಿಲ್ಲೆಯ ಪಂದಳA, ಮಲ್ಲಪುರಂನ ಮಂಜೇರಿ ಮತ್ತು ತಿರೂರ್ ಮತ್ತು ಇಡುಕ್ಕಿ ಜಿಲ್ಲೆಯ ತೊಡುಪುಳದಲ್ಲಿ ನಂದಿನಿ ಔಟ್‌ಲೆಟ್‌ಗಳು ಕಾರ್ಯನಿರ್ವಹಿಸುತ್ತಿವೆ. ಶೀಘ್ರದಲ್ಲೇ ಕೋಝಿಕ್ಕೋಡ್, ತಲಚೇರಿ ಮತ್ತು ಗುರುವಾಯೂರ್‌ನಲ್ಲಿಯೂ ಔಟ್‌ಲೆಟ್‌ಗಳನ್ನು ತೆರೆಯಲು ಕೆಎಂಎಫ್ ಯೋಜಿಸಿದೆ. ಮುಂದಿನ ಆರು ತಿಂಗಳಿನಲ್ಲಿ ಪ್ರತೀ ಜಿಲ್ಲೆಗೆ ಒಂದರAತೆ ೨೫ ರೀಟೇಲ್ ಔಟ್‌ಲೆಟ್‌ಗಳನ್ನು ತೆರೆಯಲು ನಂದಿನಿ ಯೋಜಿಸಿದ್ದು ೨೫ ಮಳಿಗೆಗಳ ಮೂಲಕ ನಿತ್ಯ ೨೫,೦೦೦ ಲೀಟರ್ ಹಾಲು ಪೂರೈಕೆ ಮಾಡುವ ಗುರಿ ಹೊಂದಲಾಗಿದೆ. ಮುಂದಿನ ಎರಡು ವರ್ಷಗಳಲ್ಲಿ ಪ್ರತಿ ತಾಲೂಕಿನಲ್ಲಿ ಒಂದು ಮಳಿಗೆಯನ್ನು ತೆರೆಯಲೂ ನಂದಿನಿ ಸಿದ್ಧತೆ ನಡೆಸಿದೆ.

ಆದರೆ ಈ ವಿಸ್ತರಣೆ ಕೇರಳದ ಕಣ್ಣು ಕೆಂಪಗಾಗಿಸಿದೆ. ನಂದಿನಿ ಪ್ರವೇಶಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿರುವ ಕೇರಳ ಈಗಾಗಲೇ ಎನ್‌ಡಿಡಿಬಿ (ಓಚಿಣioಟಿಚಿಟ ಜಚಿiಡಿಥಿ ಜeveಟoಠಿmeಟಿಣ boಚಿಡಿಜ) ದೂರು ನೀಡಿದೆ. ಅಲ್ಲದೆ ಈ ರೀತಿಯ ಮಳಿಗೆ ತೆರಯಲು ಸರ್ಕಾರದಿಂದ ಅನುಮತಿ ಪಡೆದುಕೊಂಡಿಲ್ಲ ಎಂದು ಹೇಳಿದೆ. ಆದರೆ ಕೆಎಂಎಫ್ ಸ್ಪಷ್ಟನೆ ನೀಡಿದ್ದು ಕೇರಳ ಮಾರುಕಟ್ಟೆಗೆ ಎರಡೂವರೆ ಲಕ್ಷ ಲೀಟರ್ ಕೊರತೆಯ ಹಾಲನ್ನು ಪೂರೈಸುವುದು ಮಾತ್ರ ನಮ್ಮ ಗುರಿ ಆಗಿದ್ದು ಮಿಲ್ಮಾದೊಂದಿಗೆ ಸ್ಪರ್ಧಿಸುವುದಿಲ್ಲ ಎಂದಿದೆ. ಅಲ್ಲದೆ ನಂದಿನಿ ಬ್ರಾö್ಯಂಡ್‌ನ ಏಜೆನ್ಸಿ ಹಕ್ಕುಗಳನ್ನು ಸಣ್ಣ ಅಂಗಡಿಗಳಿಗೆ ನೀಡಲಾಗುವುದಿಲ್ಲ ಎಂದು ಸ್ಪಷ್ಟಪಡಿಸಿದ್ದು ಸರಿಯಾದ ತಾಪಮಾನದಲ್ಲಿ ಹಾಲು ಸಂಗ್ರಹಿಸಲು ಮತ್ತು ವಿತರಿಸಲು ಕೋಲ್ಡ್ ಸ್ಟೋರೇಜ್ ಸೌಲಭ್ಯ ಹೊಂದಿರುವ ವಾಹನ ಹೊಂದಿರುವವರಿಗೆ ಮಾತ್ರ ಏಜೆನ್ಸಿ ನೀಡಲಾಗುತ್ತದೆ ಎಂದಿದೆ.

ತನ್ನ ದೂರಿಗೆ ಎನ್‌ಡಿಡಿಬಿ ಯಾವುದೇ ಪ್ರತಿಕ್ರಿಯೆ ನೀಡದಿರುವುದು ಕೇರಳದ ಅಸಮಾಧಾನಕ್ಕೆ ಕಾರಣ ಆಗಿದ್ದು ಇದೇ ಕಾರಣಕ್ಕೆ ಕರ್ನಾಟಕಕ್ಕೆ ಕಾಲಿಡಲು ಮುಂದಾಗಿದೆ ಎನ್ನಲಾಗಿದೆ. ಆದರೆ ಕೆಎಂಎಫ್ ನಂತಹ ಬೃಹತ್ ಸಂಸ್ಥೆಯ ಎದುರು ಸ್ಪರ್ಧಿಸಿ ಮಾರುಕಟ್ಟೆಯಲ್ಲಿ ಸ್ಥಾನ ಪಡೆಯುವುದು ಮಿಲ್ಮಾಗೆ ಸಾಧ್ಯವಾಗಲಿದೆಯೇ ಎಂಬುದು ಪ್ರಶ್ನೆ. ಮಿಲ್ಮಾ ಹಾಲನ್ನು ಸರಬರಾಜು ಮಾಡುವುದಿಲ್ಲ ಬದಲಿಗೆ ಹಾಲಿನ ಉತ್ಪನ್ನಗಳನ್ನು ಮಾತ್ರ ರಾಜ್ಯದಲ್ಲಿ ಮಾರಾಟ ಮಾಡಲು ಉದ್ದೇಶಿಸಿದೆ ಎಂದು ಹೇಳಿಕೊಂಡಿದೆ.

ಈಗಾಗಲೇ ಕರ್ನಾಟಕ ಮತ್ತು ಕೇರಳ ರಾಜ್ಯಗಳಲ್ಲಿ ತಮಿಳುನಾಡು, ಮಹಾರಾಷ್ಟç, ಆಂಧ್ರಪ್ರದೇಶದ ಖಾಸಗಿ ಕಂಪೆನಿಗಳೂ ಹಾಲನ್ನು ಸರಬರಾಜು ಮಾಡುತ್ತಿದ್ದು ಅವರಿಗೆ ಇಲ್ಲದ ವಿರೋಧ ಸಹಕಾರಿ ಸಂಸ್ಥೆಯ ಪ್ರವೇಶಕ್ಕೆ ಏಕೆ ಎಂಬುದು ಜನತೆಗೆ ತಿಳಿಯದ ಸಂಗತಿ ಆಗಿದೆ.

ನಾಲ್ಕು ತಿಂಗಳ ಹಿಂದೆ ಅಮುಲ್ ಕರ್ನಾಟಕದಲ್ಲಿ ತನ್ನ ರಿಟೇಲ್ ಔಟ್‌ಲೆಟ್ ತೆರೆÀಯಲು ಮುಂದಾಗಿದ್ದಕ್ಕೆ ಕೆಲ ಕನ್ನಡ ಪರ ಸಂಘಟನೆಗಳು ಮತ್ತು ವಿಪಕ್ಷಗಳಿಂದಲೂ ತೀವ್ರ ವಿರೋಧ ವ್ಯಕ್ತವಾಗಿದ್ದವು. ಕೆಎಂಎಫ್ ಅಸ್ತಿತ್ವ ಕಳೆದುಕೊಳ್ಳಲಿದೆ ಎಂದು ಹುಯಿಲೆಬ್ಬಿಸಲಾಗಿತ್ತು. ಆದರೆ ಈ ವಿರೋಧದÀ ಹಿಂದೆ ಇದ್ದದ್ದು ರಾಜಕೀಯ ಉದ್ದೇಶ ಮಾತ್ರ ಆಗಿತ್ತು. ಏಕೆಂದರೆ ನಂದಿನಿ ಹಾಲಿಗೆ ಇದೇ ರೀತಿ ಪರ ರಾಜ್ಯಗಳಲ್ಲೂ ವಿರೋಧ ವ್ಯಕ್ತವಾದರೆ ಹೇಗೆ ಎಂದು ಯಾರೂ ಯೋಚಿಸಲಿಲ್ಲ. ಇಂದಿಗೂ ಅಮುಲ್ ಕರ್ನಾಟಕ ರಾಜ್ಯದಲ್ಲಿ ಪ್ರತಿ ನಿತ್ಯ ೧.೨೫ ಲಕ್ಷ ಲೀಟರ್ ಐಸ್‌ಕ್ರೀಮ್ ನ್ನು ಮಾರಾಟ ಮಾಡುತ್ತಿದ್ದು ಇದು ತಯಾರಾಗುತ್ತಿರುವುದು ಕೆಎಂಎಫ್‌ನ ಉತ್ಪಾದನಾ ಘಟಕದಲ್ಲೇ ಆಗಿದೆ.

ಏನೇ ಆದರೂ ಸಹಕಾರಿ ಸಂಸ್ಥೆಗಳು ಪರಸ್ಪರ ಸ್ಪರ್ಧೆಗೆ ಇಳಿದರೆ ಅದು ಸಹಕಾರಿ ರಂಗದ ಬೆಳವಣಿಗೆಗೆ ಕುಂಠಿತ ಆಗಲಿದೆ ಎಂಬುದು ವಾಸ್ತವ.

- ಕೋವರ್‌ಕೊಲ್ಲಿ ಇಂದ್ರೇಶ್