ಸುಂಟಿಕೊಪ್ಪ, ಜು. ೨: ಶಿಕ್ಷಣ ಕೇವಲ ಒಂದು ಕಲಿಕೆಯಾಗದೇ ಕಲಿತದ್ದನ್ನು ಅನುಷ್ಠಾನಕ್ಕೆ ತರುವುದೆಂದು ಸರಕಾರಿ ಪದವಿ ಪೂರ್ವ ಕಾಲೇಜು ಮಕ್ಕಳಿಗೆ ಉಚಿತ ನೋಟ್ ಪುಸ್ತಕ ವಿತರಿಸಿ ಹರಪ್ಪಳಿ ರವೀಂದ್ರ ಅವರು ಹೇಳಿದರು.

ಸುಂಟಿಕೊಪ್ಪ ಸರಕಾರಿ ಪದವಿ ಪೂರ್ವ ಕಾಲೇಜು ವಿದ್ಯಾರ್ಥಿಗಳಿಗೆ ಉಚಿತ ನೋಟ್ ಪುಸ್ತಕ ವಿತರಿಸಿ ಮಾತನಾಡಿದ ಅವರು ತಾವುಗಳು ತರಗತಿ ಕೋಣೆಯಲ್ಲಿ ಕಲಿತಂತಹ ವಿಷಯಗಳನ್ನು ತಮ್ಮ ದೈನಂದಿನ ಜೀವನದಲ್ಲಿ ಅಳವಡಿಸಿಕೊಳ್ಳುವುದರೊಂದಿಗೆ ಸಮಾಜದಲ್ಲಿ ಉತ್ತಮ ಪ್ರಜೆಗಳಾಗಿ ಬಾಳ್ವೆ ನಡೆಸಬೇಕೆಂದರು.

ಸಮಾರಂಭದ ಅಧ್ಯಕ್ಷತೆಯನ್ನು ಸರಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯರಾದ ಪಿ.ಎಸ್.ಜಾನ್ ವಹಿಸಿ ಮಾತನಾಡಿದರು. ವಿದ್ಯಾರ್ಥಿಗಳಿಗೆ ಉಚಿತ ನೋಟ್ ಪುಸ್ತಕಗಳನ್ನು ವಿತರಿಸಿದ ರಾಜ್ಯ ಒಕ್ಕಲಿಗ ಗೌಡ ಸಂಘದ ಸದಸ್ಯರು ಮತ್ತು ಸಮಾಜ ಸೇವಕರು ದಾನಿಗಳಾದ ಹರಪಳ್ಳಿ ರವೀಂದ್ರ ಅವರನ್ನು ಶಾಲು ಹೊದಿಸಿ ಫಲ ತಾಂಬೂಲ ನೀಡಿ ಸನ್ಮಾನಿಸಲಾಯಿತು.

ಸಮಾರಂಭದಲ್ಲಿ ಕಾಲೇಜು ಅಭಿವೃದ್ಧಿ ಸಮಿತಿ ಅಧ್ಯಕ್ಷರಾದ ವೈ.ಎಂ.ಕರುAಬಯ್ಯ, ಖಜಾಂಜಿ ರಮೇಶ್ ಪಿಳ್ಳೆ, ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಪ್ರಸಾದ್ ಕುಟ್ಟಪ್ಪ, ಸದಸ್ಯ ಶಬ್ಬೀರ್, ಸೋಮವಾರಪೇಟೆ ಹರಪಳ್ಳಿ ರವೀಂದ್ರ ಅಭಿಮಾನಿ ಬಳಗದ ಅಧ್ಯಕ್ಷ ನಾಗರಾಜ್, ಗುತ್ತಿಗೆದಾರ ಖಾಸಿಂ, ಬ್ಲೂಬಾಯ್ಸ್ ಯುವಕ ಸಂಘದ ಹಿರಿಯ ಸದಸ್ಯ ಆದಿಶೇಷ ಹಾಗೂ ಕಾಲೇಜು ಉಪನ್ಯಾಸಕರು ಮತ್ತಿರರಿದ್ದರು.