ವೀರಾಜಪೇಟೆ, ಜು. ೨: ಹೂ ಕುಂಡಗಳಲ್ಲಿ ಗಾಂಜಾ ಬೆಳೆಸಿದ್ದ ಆರೋಪಿಯನ್ನು ಗ್ರಾಮಾಂತರ ಪೊಲೀಸರು ಬಂಧಿಸಿದ್ದಾರೆ. ನಲ್ವತೊಕ್ಲು ಗ್ರಾಮದ ಅಕ್ಷಯ್ ಬಂಧಿತ ಆರೋಪಿ.
ವೀರಾಜಪೇಟೆ ಗ್ರಾಮಾಂತರ ಠಾಣಾ ವ್ಯಾಪ್ತಿಯ ನಲ್ವತ್ತೊಕ್ಲು ಗ್ರಾಮದಲ್ಲಿ ಅಕ್ರಮವಾಗಿ ಗಾಂಜಾ ಗಿಡಗಳನ್ನು ವ್ಯಕ್ತಿಯೊಬ್ಬರು ಬೆಳೆಸಿದ ಬಗ್ಗೆ ದೊರೆತ ಖಚಿತ ವರ್ತಮಾನದ ಮೇರೆಗೆ ವೀರಾಜಪೇಟೆ ವೃತ್ತದ ಸಿಪಿಐ ಶಿವರುದ್ರ ಬಿ.ಎಸ್. ಅವರ ನೇತೃತ್ವದಲ್ಲಿ ವೀರಾಜಪೇಟೆ ಗ್ರಾಮಾಂತರ ಠಾಣೆಯ ಪೊಲೀಸ್ ತಂಡ ದಾಳಿ ನಡೆಸಿ, ನಲ್ವತ್ತೊಕ್ಲು ಗ್ರಾಮದ ವಾಸದ ಮನೆಯ ಬಳಿ ಆರೋಪಿ ೨ ಹೂ ಕುಂಡಗಳಲ್ಲಿ ಬೆಳೆಸಿದ ಸುಮಾರು ೧೩೦ ಗ್ರಾಂ. ತೂಕದ ೩ ಹಸಿ ಗಾಂಜಾ ಗಿಡಗಳನ್ನು ವಶಪಡಿಸಿಕೊಂಡು ಆರೋಪಿಯನ್ನು ಬಂಧಿಸಿ ಮುಂದಿನ ಕ್ರಮ ಕೈಗೊಳ್ಳಲಾಗಿದೆ.
ಮಾದಕ ವಸ್ತುಗಳನ್ನು ಬಳಸುವ ಮತ್ತು ಮಾರಾಟ ಮಾಡುವ ವ್ಯಕ್ತಿಗಳು ಕಂಡುಬAದಲ್ಲಿ ಸ್ಥಳೀಯ ಪೊಲೀಸ್ ಠಾಣೆ ಮತ್ತು ಕೆ.ಎಸ್.ಪಿ. ತಂತ್ರಾAಶದ ಮೂಲಕ ಮಾಹಿತಿ ನೀಡುವಂತೆ ಸಾರ್ವಜನಿಕರಲ್ಲಿ ಪೊಲೀಸರು ಕೋರಿದ್ದಾರೆ.