ಅಜ್ಞಾನಂ ತಿಮಿರಾಂದಸ್ಯ ಜ್ಞಾನಾಂಜನ ಶಲಾಖಯಾ

ಚಕ್ಷುರು ನ್ಮೀಲಿತಮ್ ಯೇನ ತಸ್ಮೆöÊ ಶ್ರೀ ಗುರುವೇ ನಮಃ

ಇವತ್ತು ಆಷಾಡ ಮಾಸದ ಪೂರ್ಣಿಮೆ. ಇಂದು ಆದಿ ಗುರುವೆನಿಸಿದ ಶ್ರೀ ವೇದವ್ಯಾಸರ ಜನ್ಮದಿನವಾಗಿರುತ್ತದೆ. ಅವರ ನೆನಪಿನ ದಿ. ವ್ಯಾಸರು ವೇದಗಳನ್ನು ವಿಂಗಡಿಸಿದವರು. ಹದಿನೆಂಟು ಪುರಾಣಗಳನ್ನೂ, ಮಹಾಭಾರತವನ್ನೂ ರಚಿಸಿದವರು. ಗುರು ಪೂರ್ಣಿಮೆಯನ್ನು ಶ್ರದ್ಧಾಭಕ್ತಿಯಿಂದ ಆಚರಿಸಿ, ನಾವು ಶ್ರೀ ವೇದವ್ಯಾಸರಿಗೆ, ಗುರು ಪರಂಪರೆಯ ಎಲ್ಲಾ ಸದ್ಗುರುಗಳಿಗೂ ಧನ್ಯತೆಯನ್ನೂ, ಕೃತಜ್ಞತೆಯನ್ನೂ ಅರ್ಪಿಸುವ ದಿನ.

ಸನಾತನ ಧರ್ಮದಲ್ಲಿ ‘ಗುರು’ ಎಂಬ ತತ್ವವು ಅನನ್ಯವಾದುದು. ಶಿಷ್ಯನ ಮನದ ಅಜ್ಞಾನವೆಂಬ ಕತ್ತಲೆಯನ್ನು, ಜ್ಞಾನದ ಬೆಳಕನ್ನು ನೀಡಿ ಹೋಗಲಾಡಿಸುವವನು ಗುರು. ಮಾನವತೆಯನ್ನು ಉದ್ಧಾರ ಮಾಡಲು ಭಗವಂತನೇ ಗುರುವಾಗಿ ಬಂದಿರುತ್ತಾನೆ. ಗುರು ಬೇರೆಯಲ್ಲ, ಈಶ್ವರ ಬೇರೆಯಲ್ಲ. ಮಾನವ ಜನ್ಮದ ಅತ್ಯುನ್ನತ ಆದರ್ಶದ ಸಂಕೇತವಾಗಿದ್ದಾನೆ ಗುರು. ಗುರು ಪ್ರೇಮ, ಕರುಣೆಗಳ ಸಾಕ್ಷಾತ್ ಸ್ವರೂಪವೂ, ಸರ್ವಜ್ಞನೂ ಆಗಿರುತ್ತಾನೆ. ಸಾಧಕನಾದವನಿಗೆ ಅವನು ತಾಃಕನಾಗಿರಲೀ, ತ್ಯಾಗಿಯಾಗಿರಲೀ, ಗುರುವೇ ಅಂತಿಮ. ಗುರುವೇ ಸರ್ವಸ್ವ. ಗುರುವನ್ನು ಮೀರಿದುದು, ಗುರುವಿಗೆ ಹಿರಿದಾದುದು ಯಾವ ಲೋಕದಲ್ಲೂ ಇಲ್ಲ. ಬೇರೆ ಇತರ ಸಂಬAಧಗಳಿಗೆ ಹೋಲಿಸಿದರೆ, ಗುರು-ಶಿಷ್ಯ ಸಂಬAಧಕ್ಕಿAತ ಅರ್ಥಪೂರ್ಣವಾದ ಸುಂದರವಾದ ಸಂಬAಧ ಬೇರೊಂದಿಲ್ಲ.

ಶ್ರೀ ಕೃಷ್ಣ ಪರಮಾತ್ಮನಿಗೂ, ಸಂಧೀಪನಿ, ಶ್ರೀರಾಮನಿಗೆ ವಸಿಷ್ಠರು, ರಾಮಕೃಷ್ಣರಿಗೆ ತೋತಾಪುರಿ ಎಂಬ ಗುರುಗಳಿದ್ದರು. ಗುರುಕುಲ ಸಂಪ್ರದಾಯದಲ್ಲಿ ಗುರುವು ಗುರುವಿನ ಸನ್ನಿಧಿಯಲ್ಲಿ ಆಶ್ರಯ ಪಡೆದ ಶಿಷ್ಯನು ಪ್ರೇಮದಿಂದಲೂ ಭಯ ಭಕ್ತಿಯಿಂದಲೂ ಗುರುವಿನ ಸೇವೆ ಮಾಡುತ್ತಾನೆ. ಗುರುವು ಎತ್ತರವಾದ ಪೀಠದಲ್ಲಿ ಆಸೀನನಾಗಿ, ಶಿಷ್ಯರಿಗೆ ಹಾಗೆ ಮಾಡಿ, ಹೀಗೆ ಮಾಡಿರೆಂದು ಆದೇಶಿಸುವುದಿಲ್ಲ. ಅಹಂಕಾರದಿAದ ಮೆರೆಯುವುದೂ ಇಲ್ಲ. ಅವರೊಂದಿಗೆ ಬೆರೆತು ಅವರ ಹಿತಕ್ಕಾಗಿಯೇ ಚಿಂತಿಸುತ್ತಿರುತ್ತಾನೆ.

ಮಕ್ಕಳಿಗೆ ಮನೆಯೇ ಮೊದಲ ಪಾಠಶಾಲೆ. ಜನನಿಯೇ ಮೊದಲ ಗುರುವಾಗುತ್ತಾಳೆ. ಒಬ್ಬ ವೈದ್ಯನಾಗಬೇಕಾದರೆ, ಉತ್ತಮ ಶಿಕ್ಷಣ ಪಡೆಯಬೇಕಾದರೆ, ನೃತ್ಯ, ಸಂಗೀತ, ಅಡುಗೆ ಮಾಡಬೇಕಾದರೆ, ಹೀಗೆ ಹತ್ತು ಹಲವಾರು ವಿದ್ಯೆಗಳನ್ನು ಕಲಿಯಬೇಕಾದರೆ ಕೊನೆಗೆ ಕಳ್ಳತನ ಮಾಡಬೇಕಾದರೂ ನುರಿತವರಿಂದಲೇ ಕಲಿಯಬೇಕಾಗುತ್ತದೆ. ಇವರೆಲ್ಲರೂ ಅನಿಯತ ಗುರುಗಳೆನಿಸಿಕೊಳ್ಳುತ್ತಾರೆ.

ಮನುಷ್ಯ ಜನ್ಮ ಸಿಕ್ಕಬೇಕಾದರೆ ೮೪ ಲಕ್ಷ ಜನ್ಮಗಳನ್ನು ದಾಟಿ ಬರಬೇಕಾಗುತ್ತದೆ. ನಾವು ಹುಟ್ಟು-ಸಾವೆಂಬ ಚಕ್ರದಲ್ಲಿ ಸಿಲುಕಿ, ಒದ್ದಾಡುತ್ತಿದ್ದೇವೆ. ಶ್ರೀ ಶಂಕರಾಚಾರ್ಯರು ಹೇಳುತ್ತಾರೆ. ‘ಪುನರಪಿ ಜನನಂ, ಪುನರಪಿ ಮರಣಂ’ ಅಂತ. ಇದರಿಂದ ಮುಕ್ತಿಯನ್ನು ಹೊಂದಬೇಕಾದರೆ ಒಬ್ಬ ಆತ್ಮಜ್ಞಾನಿಯಾದ ಗುರುವನ್ನು ಪಡೆದು, ಅವರ ಮಾರ್ಗದರ್ಶನವನ್ನನುಸರಿಸಬೇಕು. ಉಪನಿಷತ್ತು ‘ಆಚಾರ್ಯವಾನ್ ಪುರುಷೋ ವೇದಹ’. ಅಂದರೆ ಆಚಾರ್ಯ(ಗುರು)ನನ್ನು ಹೊಂದಿದ ಪುರುಷನೇ ಪರಮ ಜ್ಞಾನವನ್ನು ಪಡೆದುಕೊಳ್ಳುತ್ತಾನೆಂದು ಉಪದೇಶಿಸಿದೆ.

ಗುರುವಾದರೂ, ಸಾಧನಾ ಮಾರ್ಗಕ್ಕೆ ಬಂದವರನ್ನು ಸುಲಭದಲ್ಲಿ ಶಿಷ್ಯರನ್ನಾಗಿ ಸ್ವೀಕಾರ ಮಾಡಿಕೊಳ್ಳುವುದಿಲ್ಲ. ಅವನನ್ನು ಪದೇ ಪದೇ

ಪರೀಕ್ಷೆಗಳಿಗೊಡ್ಡುತ್ತಾನೆ. ಶಿಷ್ಯ ತನ್ನಲ್ಲಿರುವ ಅಹಂಕಾರವನ್ನೆಲ್ಲಾ ಬಿಟ್ಟು, ಕಾಯಾ, ವಾಚಾ, ಮನಸಾ ತನ್ನನ್ನು ಅರ್ಪಿಸಿಕೊಳ್ಳಬೇಕು. ಗುರುವನ್ನು ಇನ್ನೊಬ್ಬ ಗುರುವಿಗೆ ಹೋಲಿಸಿ ನೋಡಬಾರದು. ಏನು ಆಜ್ಞೆ ಮಾಡುತ್ತಾನೋ ಅದನ್ನು ಚಾಚೂ ತಪ್ಪದೆ ಮಾಡಬೇಕು. ಗುರುವಿಗೆ ಸಂಪೂರ್ಣ ಶರಣಾಗತ ಭಾವದಿಂದಿರಬೇಕು. ಯಾವ ಕಾರಣಕ್ಕೂ ಗುರುವನ್ನು ನಿಂದಿಸಿ, ಅವರ ಆಗ್ರಹಕ್ಕೆ ಪಾತ್ರರಾಗಬಾರದು. ಅವರ ಅನುಗ್ರಹಕ್ಕೆ ಪಾತ್ರರಾಗಬೇಕು.

‘ಹರ ಮುನಿದರೆ ಗುರು ಕಾಯ್ಯ.

ಗುರು ಮುನಿದರೆ ಕಾಯ್ವರಾರುಂಟು? ಎಂಬ ನೀತಿ ವಚನವಿದೆ.

‘ಶಿವ ಪಥವನರಿವಡೆ ಗುರುಪಥವೇ ಮೊದಲು’

ಇದು ಮಹಾತ್ಮಾ ಬಸವೇಶ್ವರರ ಅಮರವಾಣಿ.

ಗುರುವಿಲ್ಲದ ಸಾಧನೆ, ವಿದ್ಯೆ, ಬುದ್ಧಿ, ಎಲ್ಲವೂ ನಿರರ್ಥಕ.

ಯೋಗ ವಸಿಷ್ಠದಲ್ಲಿ ವಸಿಷ್ಠರು ಶ್ರೀರಾಮನನ್ನು ಕೇಳುತ್ತಾರೆ, ‘ನಿನ್ನೆದುರಿಗೆ ದೇವರೂ ಗುರುವೂ ಒಟ್ಟಿಗೆ ಬಂದರೆ ಏನು ಮಾಡುತ್ತಿ?’ ಅಂತ. ಆಗ ಶ್ರೀರಾಮನು ‘ಮೊದಲು ಗುರುವಿಗೆ ನಮಸ್ಕರಿಸುತ್ತೇನೆ’ ಎಂದು ಹೇಳುತ್ತಾರೆ. ಶ್ರೀ ಕಬೀರರೂ ಹಾಗೆ ಹೇಳುತ್ತಾರೆ.

ನಾನು (ಅಹಂಕಾರ) ಇದ್ದಲ್ಲಿ ದೇವರಿಗೆ ಸ್ಥಾನವಿಲ್ಲ. ದೇವರಿದ್ದಲ್ಲಿ ನಾನಿಲ್ಲವೆಂದು. ಅವರು ಇನ್ನೂ ಹೇಳುತ್ತಾರೆ. ಗುರುವಿನ ಬಳಿ ಹೋಗಬೇಕಾದರೆ ಪುಟ್ಟ ಮಗುವಿನಂತೆ ಅಂಬೆಗಾಲಿಟ್ಟುಕೊAಡು ಹೋಗಬೇಕೆಂದು. ಇಂದು ಸಮಾಜದಲ್ಲಿ ಗುರು-ಶಿಷ್ಯ ಸಂಬAಧವು ಭಕ್ತಿಯುತವಾಗಿ ಹಾಗೂ ದಯಾಪೂರ್ಣ ಪ್ರೇಮದೊಡನೆ ಹೊಂದಿಕೆಯಾಗದೆ ಹೋಗುತ್ತಿರುವುದರಿಂದ ಭಾವೈಕ್ಯತೆ ನಶಿಸುತ್ತಿದೆ. ಇಬ್ಬರಲ್ಲಿಯೂ ಮೃದು, ಮಧುರ, ಧಾರ್ಮಿಕ ಬಾಂಧವ್ಯವು ಬೆಳೆದಾಗ ನವಚೈತನ್ಯವುಂಟಾಗುತ್ತದೆ. ಕೃತ್ರಿಮತೆ ಹಾಗೂ ವ್ಯಾವಹಾರಿಕತೆಯೇ ಹೆಚ್ಚಾದರೆ ಅಲ್ಲಿ ಶ್ರದ್ಧೆ, ನಿಷ್ಠೆ, ಪ್ರೇಮ, ಮಮತೆ ಬರಲಾರದು. ಅಲ್ಲಿ ಗುರು-ಶಿಷ್ಯರ ಸಂಬAಧದಲ್ಲಿ ಸಹಜತೆ ಇರುವುದಿಲ್ಲ. ಇತ್ತೀಚೆಗೆ ಪತ್ರಿಕೆಯಲ್ಲಿ ವರದಿ ಬಂದಿತ್ತು. ಏನೆಂದರೆ, ಒಬ್ಬ ವಿದ್ಯಾರ್ಥಿ ತನ್ನ ಪ್ರಾಧ್ಯಾಪಕರನ್ನೇ ಗುಂಡಿಕ್ಕಿ ಕೊಂದಿದ್ದಾನೆAದು. ಇನ್ನೂ ಒಂದು ವರದಿ (ಹಳೆಯದು) ವಿದ್ಯಾರ್ಥಿಯೊಬ್ಬ ಗುರುದಕ್ಷಿಣೆ ಎಂದು ಒಂದು ಪಾರ್ಸೆಲ್ಲನ್ನು, ಅದರಲ್ಲಿ ಸಿಡಿಮದ್ದು, ಪಠಾಕಿಗಳನ್ನಿಟ್ಟು ಕಳುಹಿಸಿದ್ದನೆಂದು. ಮೊದಲೆಲ್ಲಾ ಗುರುಗಳೆಂದರೆ ನಿಸ್ವಾರ್ಥದ ಪ್ರೀತಿ, ಭಕ್ತಿ ಇರುತ್ತಿತ್ತು. ಅದಕ್ಕೊಂದು ಚಿಕ್ಕ ಉದಾಹರಣೆ. ಶ್ರೀ ಶಂಕರಾ ಚಾರ್ಯರ ಶಿಷ್ಯರಾದ ಸನಂದನರು, ಗುರುಗಳ ಬಟ್ಟೆಗಳನ್ನು ಒಗೆಯಲು ನದಿಯ ಇನ್ನೊಂದು ದಡಕ್ಕೆ ಹೋಗಿದ್ದರಂತೆ. ಆಚಾರ್ಯರು ಸ್ನಾನವನ್ನು ಮುಗಿಸಿ, ಶಿಷ್ಯನ ಹೆಸರನ್ನು ಕರೆದುದನ್ನು ಕೇಳಿಸಿಕೊಂಡ ಸನಂದನರು, ಗುರುಗಳಿಗೆ ಬಟ್ಟೆಕೊಡಲೆಂದು ಇನ್ನೊಂದು ದಡದಲ್ಲಿದ್ದ ಗುರುಗಳ ಬಳಿ ತೆರಳಬೇಕಾಗಿತ್ತು.

ನದಿಯಲ್ಲಿ ಒಂದೇಸಲ ತುಂಬು ಪ್ರವಾಹ ಬಂದಿದನ್ನೂ ಲೆಕ್ಕಿಸದೆ ಓಡುತ್ತಾರೆ. ಅವರ ತಲೆಯಲ್ಲಿದ್ದ ಯೋಚನೆ ಗುರುವಿಗೆ ಬಟ್ಟೆಕೊಡುವುದೊಂದೆ. ಸನಂದನರ ಗುರುಭಕ್ತಿಗೆ ಮೆಚ್ಚಿ ಗಂಗಾಮಾತೆ ಸನಂದನರು ನದಿಯಲ್ಲಿ ಹೆಜ್ಜೆಯನ್ನಿಡುತ್ತಿದ್ದ ದಾರಿಯಲ್ಲೆಲ್ಲಾ ಕಮಲದ ಹೂಗಳನ್ನಿಡುತ್ತಾ ಇದ್ದಳಂತೆ. ಸನಂದನರು ನಿರಾಯಾಸವಾಗಿ ಗುರುವಿನ ಬಳಿ ತೆರಳಿದರಂತೆ. ಇದನ್ನೆಲ್ಲಾ ಗಮನಿಸುತ್ತಿದ್ದ ಶ್ರೀ ಶಂಕರರು ಸನಂದನರಿಗೆ ‘ಪದ್ಮಪಾದ’ ಎಂದು ಹೆಸರಿಟ್ಟರಂತೆ. ಇನ್ನೂ ಎಷ್ಟೊ ಉದಾಹರಣೆಗಳಿವೆ.

ಶ್ರದ್ಧಾಭಕ್ತಿಯಿಂದ ನಾವು ಗುರುವಾಖ್ಯ ಪರಿಪಾಲನೆ ಮಾಡಿ ಅವರಿಗೆ ಸಂಪೂರ್ಣ ಶರಣಾಗತರಾದರೆ ಜನನ-ಮರಣ ಚಕ್ರದಿಂದ ಪಾರಾಗಬಹುದು.

ಓಂ ಶ್ರೀ ಗುರುವೇ ನಮಃ

- ಶ್ರೀಮತಿ ರಾಜಲಕ್ಷಿö್ಮ ಗೋಪಾಲಕೃಷ್ಣ, ಮಡಿಕೇರಿ.