ಗುರುಬ್ರಹ್ಮ, ಗುರುವಿಷ್ಣು, ಗುರುದೇವೋ ಮಹೇಶ್ವರ.

ಇಂದು ಗುರು ಪೂರ್ಣಿಮೆ, ವ್ಯಾಸಪೂರ್ಣಿಮೆ.

ಆಷಾಡ ಮಾಸದ ಶುಕ್ಲಪಕ್ಷದ ಪೂರ್ಣಿಮೆಯಂದು ಈ ದಿನವನ್ನು ಗುರು ಪೂರ್ಣಿಮೆಯೆಂದು ಆಚರಿಸುತ್ತಾರೆ. ‘ಗು’ ಎಂದರೆ ಅಂಧಕಾರ ‘ರು’ ಎಂದರೆ ನಿವಾರಿಸುವ ಎಂದರೆ ಅಜ್ಞಾನ ಎಂಬ ಅಂಧಕಾರವನ್ನು ದೂರಮಾಡಿ ಸುಜ್ಞಾನದ ಬೆಳಕು ಹರಿಸುವವನೇ ಗುರು. ಗುರು ಪೂರ್ಣಿಮೆಯಂದು ಗುರುಗಳ ಪಾದಪೂಜೆಯನ್ನು ಮಾಡಿ ಅವರಿಗೆ ಗುರುದಕ್ಷಿಣೆಯನ್ನು ಅರ್ಪಿಸುತ್ತಾರೆ. ಗುರು ಪರಂಪರೆಯಲ್ಲಿ ‘ವ್ಯಾಸ’ ಸರ್ವಶ್ರೇಷ್ಠ ಗುರುಗಳೆಂದು ಪರಿಗಣಿಸಲಾಗಿದೆ.

ಆಷಾಡ ಮಾಸದ ಶುಕ್ಲಪಕ್ಷದ ಪೂರ್ಣಿಮೆಯು, ಬ್ರಹ್ಮಜ್ಞಾನಿಗಳು, ಆದಿಗುರುಗಳೂ, ಮಹಾ ಮಹಿಮರೂ ಆದ ವೇದವ್ಯಾಸರು ಜನಿಸಿದ ಶುಭ ದಿವಸ. ಆದ್ದರಿಂದ ಈ ದಿನವನ್ನು ವ್ಯಾಸಪೂರ್ಣಿಮೆ ಅಥವಾ ಗುರುಪೂರ್ಣಿಮೆ ಎಂದು ಕರೆಯುತ್ತಾರೆ. ವೇದವ್ಯಾಸರು ವಸಿಷ್ಠರ ಮರಿಮಗ. ಪರಾಶರ ಮಹರ್ಷಿಗಳ ಮಗ. ಅವರ ತಾಯಿ ಸತ್ಯವತಿ. ಬೆಸ್ತರ ಕುಲದಲ್ಲಿ ಜನಿಸಿದವರು.

೧. ವಶಿಷ್ಟರ ವಂಶದಲ್ಲಿ ಜನಿಸಿರುವುದರಿಂದ ವಾಸಿಷ್ಟ.

೨. ಪರಾಶರರ ಸುಪುತ್ರರು ಆಗಿರುವುದರಿಂದ ಪರಾಶರ.

೩. ಸಮಸ್ತ ವೇದರಾಶಿಯನ್ನು ತಪೋಬಲದಿಂದ ಅರಿತು, ಅದನ್ನು ನಾಲ್ಕು ಭಾಗಗಳಾಗಿ ವಿಂಗಡಿಸಿ, ತಮ್ಮ ನಾಲ್ವರು ಶಿಷ್ಯರಿಗೆ ಬೋಧಿಸಿರುವುದರಿಂದ ‘ವೇದವ್ಯಾಸ’.

೪. ಬದರೀ ಕ್ಷೇತ್ರದಲ್ಲಿ ಕಠಿಣ ತಪಸ್ಸನ್ನು ಕೈಗೊಂಡು ಶ್ರೀಮನ್ನಾರಾಯಣನ ಕೃಪೆಗೆ ಒಳಗಾಗಿರುವುದರಿಂದ‘ಬಾದರಾಯಣ’.

೫. ಶ್ರೀ ವಿಷ್ಣುವಿನ ಒಂದು ಅಂಗವಾದುದರಿAದ ‘ವಿಷ್ಣು ಕಲೋದ್ಭವ’.

೬. ದ್ವೀಪದಲ್ಲಿ ಹುಟ್ಟಿದುದರಿಂದ ‘ಕೃಷ್ಣ ದೈಪಾÊಯನ’ ಎಂಬ ಹೆಸರುಗಳನ್ನು ಇವರು ಪಡೆದರು. ವೇದಗಳಲ್ಲಿರುವ ಮೂಲ ತತ್ವಗಳನ್ನು ಜನಸಾಮಾನ್ಯರಿಗೆ ಅರ್ಥವಾಗುವ ರೀತಿಯಲ್ಲಿ ೧೮ ಪುರಾಣಗಳನ್ನು ರಚಿಸಿದರು. ಇಡೀ ಜಗತ್ತಿನಲ್ಲಿ ಇಂದಿಗೂ ಅತೀ ದೊಡ್ಡ ಇತಿಹಾಸ ಗ್ರಂಥವಾಗಿರುವ ಒಂದು ಲಕ್ಷ ಶ್ಲೋಕಗಳಿರುವ ಮಹಾಭಾರತವನ್ನು ರಚಿಸಿದರು.

ಅವರು ಹುಟ್ಟಿದ ತಿಥಿಯಂದೇ ತಮ್ಮ ಅವತಾರ ಕಾರ್ಯವನ್ನು ಪರಿಸಮಾಪ್ತಿ ಮಾಡಿದರು ಎಂಬ ಪ್ರತೀತಿಯಿದೆ. ಅದನ್ನು ಮುಂಚಿತವಾಗಿ ತಿಳಿದಿದ್ದರಿಂದ ಶಿಷ್ಯರು ದುಃಖತಪ್ತರಾದರು. ವೇದವ್ಯಾಸರು ಶಿಷ್ಯರನ್ನು ಕುರಿತು ನನ್ನ ಶರೀರ ತ್ಯಾಗದಿಂದ ನೀವು ದುಃಖಿಸಬೇಕಾಗಿಲ್ಲ. ನಾನು ಸೂಕ್ಷö್ಮರೂಪದಲ್ಲಿ ಎಲ್ಲಾ ಜ್ಞಾನಿಗಳಲ್ಲಿ ನೆಲೆಸಿರುತ್ತೇನೆ. ಆದ್ದರಿಂದ ನೀವು ಯಾವ ಜ್ಞಾನಿಯನ್ನು ಪೂಜಿಸಿದರೂ ನನ್ನನ್ನು ಪೂಜಿಸಿದಂತಾಗುತ್ತದೆ ಎಂದರು. ಆದ್ದರಿಂದ ವ್ಯಾಸಪೂರ್ಣಿಮೆಯಂದು ಶಿಷ್ಯರು ಗುರುಗಳನ್ನು ಪೂಜಿಸುತ್ತಾರೆ.

- ಅಂಬೆಕಲ್ಲು ಸುಶೀಲ ಕುಶಾಲಪ್ಪ, ಮಡಿಕೇರಿ. ಮೊ. ೮೬೬೦೬೪೭೧೧೮.