ಸೋಮವಾರಪೇಟೆ, ಜು. ೧: ಹುಣಸೂರು-ಮೈಸೂರು ರಾಷ್ಟಿçÃಯ ಹೆದ್ದಾರಿಯ ಬಿಳಿಕೆರೆ ಸಮೀಪದ ರಂಗನ ಕೊಪ್ಪಲು ಗ್ರಾಮದ ರಾಷ್ಟಿçÃಯ ಹೆದ್ದಾರಿಯಲ್ಲಿ ನಡೆದ ಕಾರು ಹಾಗೂ ಕೆಎಸ್‌ಆರ್‌ಟಿಸಿ ಬಸ್ ನಡುವಿನ ಭೀಕರ ಅಪಘಾತ ದಲ್ಲಿ ಸೋಮವಾರಪೇಟೆ ಸಮೀಪದ ಹಿರಿಕರ ಗ್ರಾಮದ ದಂಪತಿ ದಾರುಣವಾಗಿ ದುರ್ಮರಣ ಕ್ಕೀಡಾಗಿದ್ದಾರೆ.

ಸೋಮವಾರಪೇಟೆ ಸಮೀಪದ ಗೌಡಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಿರಿಕರ ನಿವಾಸಿ, ನಿವೃತ್ತ ಪ್ರಾಂಶುಪಾಲ ಹೆಚ್.ಬಿ. ಬೆಳ್ಳಿಯಪ್ಪ (೬೪) ಹಾಗೂ ಪತ್ನಿ ವೀಣಾ (೫೮) ಎಂಬವರುಗಳೇ ಸಾವನ್ನಪ್ಪಿದ ದಂಪತಿ. ಹೈದರಾಬಾದ್‌ನಲ್ಲಿರುವ ಪುತ್ರಿಯನ್ನು ಮೈಸೂರಿನಿಂದ ಕರೆತರಲು ತಮ್ಮ ಕಾರು ಮಾರುತಿ ಸ್ವಿಫ್ಟ್ (ಕೆ.ಎ. ೧೨ ಎಂ.ಎ.೫೨೦೯)ನಲ್ಲಿ ಮೈಸೂರಿಗೆ ತೆರಳುತ್ತಿದ್ದ ಮಾರ್ಗದಲ್ಲಿ ಎದುರು ಭಾಗದಿಂದ ಬಂದ ಕೆಎಸ್‌ಆರ್‌ಟಿಸಿ ಬಸ್‌ಗೆ ಮುಖಾಮುಖಿ ಡಿಕ್ಕಿ ಸಂಭವಿಸಿದೆ. (ಮೊದಲ ಪುಟದಿಂದ) ಪರಿಣಾಮ ಕಾರು ಚಾಲಿಸುತ್ತಿದ್ದ

ಹೆಚ್.ಬಿ. ಬೆಳ್ಳಿಯಪ್ಪ ಅವರು ಸ್ಥಳದಲ್ಲೇ ಸಾವಿಗೀಡಾಗಿದ್ದರೆ, ಗಂಭೀರ ಗಾಯಗೊಂಡು ಸಾವು-ಬದುಕಿನ ನಡುವೆ ಹೋರಾಡುತ್ತಿದ್ದ ಪತ್ನಿ ವೀಣಾ ಅವರನ್ನು ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆ ಅಸುನೀಗಿದ್ದಾರೆ.

ಮರಗೋಡು ಸರ್ಕಾರಿ ಅನು ದಾನಿತ ಕಾಲೇಜಿನಲ್ಲಿ ಪ್ರಾಂಶುಪಾಲರಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದ ಬೆಳ್ಳಿಯಪ್ಪ ಅವರು ನಂತರ ಸ್ವಗ್ರಾಮಕ್ಕೆ ಆಗಮಿಸಿ, ಸೋಮವಾರಪೇಟೆ ವಿಶ್ವಮಾನವ ಕುವೆಂಪು ವಿದ್ಯಾಸಂಸ್ಥೆ ಕಟ್ಟಡದಲ್ಲಿರುವ ಚಾಣಕ್ಯ ಕಾಲೇಜಿನಲ್ಲಿ ಕೆಲ ಕಾಲ ಪ್ರಾಂಶುಪಾಲರಾಗಿ ಸೇವೆ ಸಲ್ಲಿಸಿದ್ದರು.

ಸದ್ಯ ಕುಶಾಲನಗರದಲ್ಲಿ ನಿವೇಶನ ಖರೀದಿಸಿ ಮನೆ ನಿರ್ಮಿಸುವ ಬಗ್ಗೆ ಯೋಜನೆ ಹಾಕಿಕೊಂಡಿದ್ದ ಬೆಳ್ಳಿಯಪ್ಪ ದಂಪತಿ, ಕುಶಾಲನಗರದಲ್ಲಿ ಬಾಡಿಗೆ ಮನೆ ಮಾಡಿಕೊಂಡು ನೆಲೆಸಿದ್ದರು. ಈರ್ವರು ಪುತ್ರಿಯರ ಪೈಕಿ ಓರ್ವ ಪುತ್ರಿ ಶೃತಿ ಅಗ್ರಿಕಲ್ಚರಲ್ ಸೈನ್ಸ್ ವ್ಯಾಸಂಗ ಪೂರೈಸಿ ಹೈದರಾಬಾದ್‌ನಲ್ಲಿ ಉದ್ಯೋಗದಲ್ಲಿದ್ದು, ಎರಡನೇ ಪುತ್ರಿ ಸ್ಪರ್ಶ, ಬೆಂಗಳೂರಿನಲ್ಲಿ ಉದ್ಯೋಗ ಮಾಡುತ್ತಿದ್ದಾಳೆ.

ಹೈದರಾಬಾದ್‌ನಲ್ಲಿರುವ ಶೃತಿ ರಜೆಗಾಗಿ ಊರಿಗೆ ಹಿಂತಿರುಗುತ್ತಿದ್ದು, ಮೈಸೂರಿಗೆ ಆಗಮಿಸಿ ಅಲ್ಲಿಂದ ಪೋಷಕರೊಂದಿಗೆ ಕಾರಿನಲ್ಲಿ ಬರಲು ತೀರ್ಮಾನಿಸಿದ್ದರು. ಅದರಂತೆ ಬೆಳ್ಳಿಯಪ್ಪ ಅವರು ಮಗಳನ್ನು ಕರೆತರಲು ಪತ್ನಿ ವೀಣಾ ಅವರೊಂ ದಿಗೆ ಇಂದು ಅಪರಾಹ್ನ ೩ ಗಂಟೆ ಸುಮಾರಿಗೆ ಮೈಸೂರಿಗೆ ತೆರಳುತ್ತಿದ್ದ ಸಂದರ್ಭ ಬಿಳಿಕೆರೆ ಸಮೀಪದ ರಂಗನಕೊಪ್ಪಲು ಎಂಬಲ್ಲಿ ಸರ್ಕಾರಿ ಬಸ್ ನಡುವೆ ಭೀಕರ ಅವಘಡಕ್ಕೆ ಒಳಗಾಗಿ ಇಹಲೋಕ ತ್ಯಜಿಸಿದ್ದಾರೆ.

ಬಸ್ ಮತ್ತು ಕಾರು ಮುಖಾಮುಖಿ ಡಿಕ್ಕಿಯಾದ ರಭಸಕ್ಕೆ ಕಾರು ಸಂಪೂರ್ಣ ನಜ್ಜುಗುಜ್ಜಾಗಿರುವುದು ಅಪಘಾತದ ತೀವ್ರತೆಯನ್ನು ತೋರಿಸುತ್ತಿದೆ. ಬಸ್‌ನ ಮುಂಭಾಗವೂ ಜಖಂಗೊAಡಿದೆ. ಸ್ಥಳಕ್ಕೆ ಬಿಳಿಕೆರೆ ಪೊಲೀಸರು ಭೇಟಿ ನೀಡಿ ಮಹಜರು ನಡೆಸಿದ್ದು, ಮೃತದೇಹಗಳನ್ನು ಹುಣಸೂರು ಆಸ್ಪ ತ್ರೆಗೆ ಸಾಗಿಸಲಾಗಿದೆ. ಅಪಘಾತದ ಬಗ್ಗೆ ಕುಟುಂಬ ಸದಸ್ಯರಿಗೆ ಮಾಹಿತಿ ನೀಡಿದ ಮೇರೆ ಕುಟುಂಬಸ್ಥರು ಹುಣಸೂರಿಗೆ ತೆರಳಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ. ಮೃತ ಬೆಳ್ಳಿಯಪ್ಪ ಹಾಗೂ ವೀಣಾ ದಂಪತಿ ಈರ್ವರು ಪುತ್ರಿಯರನ್ನು ಅಗಲಿದ್ದಾರೆ.

ನಿವೃತ್ತಿಯ ನಂತರವೂ ಕ್ರಿಯಾಶೀಲರಾಗಿದ್ದ ಬೆಳ್ಳಿಯಪ್ಪ ಅವರು ಹಿರಿಕರದಲ್ಲಿರುವ ತೋಟದಲ್ಲಿ ಕೃಷಿ ಮಾಡುತ್ತಿದ್ದರು. ಕುಶಾಲನಗರದಲ್ಲಿ ನಿವೇಶನ ಖರೀದಿಸಿದ್ದು, ನೂತನ ಮನೆ ನಿರ್ಮಿಸಲು ಯೋಜನೆ ಹಾಕಿಕೊಂಡಿದ್ದರು. ಇದರೊಂದಿಗೆ ಹೆಣ್ಣುಮಕ್ಕಳ ವಿವಾಹವನ್ನೂ ನೆರವೇರಿಸುವ ಬಗ್ಗೆ ತಮ್ಮ ಕುಟುಂಬ ಸ್ಥರೊಂದಿಗೆ ಹೇಳಿಕೊಳ್ಳುತ್ತಿದ್ದರು. ಆದರೆ ವಿಧಿಯಾಟವೇ ಬೇರೆಯಾಗಿತ್ತು ಎಂದು ಕುಟುಂಬಸ್ಥರು ರೋಧಿಸುತ್ತಿದ್ದಾರೆ.