ವೀರಾಜಪೇಟೆ, ಜು. ೧: ವೀರಾಜಪೇಟೆ ಕೊಡವ ಸೌಹಾರ್ದ ಕ್ರೆಡಿಟ್ ಕೋ-ಆಪ್‌ರೇಟಿವ್ ಸೊಸೈಟಿ ಲಿಮಿಟೆಡ್ ಬ್ಯಾಂಕ್‌ನ ನೂತನ ಶಾಖೆಯನ್ನು ಅಮ್ಮತ್ತಿ ಪಟ್ಟಣದಲ್ಲಿ ಶೀಘ್ರದಲ್ಲಿಯೇ ಪ್ರಾರಂಭಿಸಲಾಗುವುದು ಎಂದು ಬ್ಯಾಂಕ್‌ನ ಅಧ್ಯಕ್ಷ ನೆಲ್ಲಮಕ್ಕಡ ಉಮೇಶ್ ಮುತ್ತಣ್ಣ ಹೇಳಿದರು.

ಅಮತ್ತಿಯಲ್ಲಿ ಪ್ರಾರಂಭಿಸುವ ನೂತನ ಶಾಖೆಯ ಕಟ್ಟಡವನ್ನು ಪರಿಶೀಲನೆ ನಡೆಸಿ ಮಾತನಾಡಿ ೨೦೧೯ ರಲ್ಲಿ ವೀರಾಜಪೇಟೆಯಲ್ಲಿ ವೀರಾಜಪೇಟೆ-ಪೊನ್ನಂಪೇಟೆ-ಮಡಿಕೇರಿ ತಾಲೂಕುಗಳಿಗೆ ಸೀಮಿತವಾಗುವಂತೆ ಕೊಡವ ಸೌಹಾರ್ದ ಕ್ರೆಡಿಟ್ ಕೋ-ಆಪ್‌ರೇಟಿವ್ ಸೊಸೈಟಿ ಲಿಮಿಟೆಡ್ ಬ್ಯಾಂಕ್‌ನ್ನು ಪ್ರಾರಂಭಿಸಲಾಯಿತು. ೧,೩೦೦ ಸದಸ್ಯರನ್ನು ಒಳಗೊಂಡ ಬ್ಯಾಂಕ್‌ನಲ್ಲಿ ೧,೩೦೦ ಸದಸ್ಯರಿದ್ದು ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿದೆ. ಅಮ್ಮತ್ತಿ ಭಾಗದ ಗ್ರಾಹಕರಿಗೆ ಸದುಪಯೋಗವಾಗಲೆಂದು ನಾಡ ಕಚೇರಿ ಮುಂಭಾಗದಲ್ಲಿ ಪ್ರಾರಂಭಿಸಲಾಗುವುದು. ಗ್ರಾಹಕರ ಅನುಕೂಲಕ್ಕಾಗಿ ಠೇವಣಿ ಸಾಲ ಇತ್ಯಾದಿ ವ್ಯವಹಾರಗಳನ್ನು ನೆಫ್ಟ್, ಆರ್.ಟಿ.ಜಿ.ಎಸ್. ಮುಖಾಂತರ ವ್ಯವಹರಿಸಲಾಗುವುದು ಎಂದು ಹೇಳಿದರು.

ಇದೇ ಸಂದÀರ್ಭ ಉಪಾಧ್ಯಕ್ಷ ಚೇಂದAಡ ವಸಂತ್ ಕುಮಾರ್, ನಿರ್ದೇಶಕರಾದ ವಾಂಚಿರ ಟಿ. ನಾಣಯ್ಯ, ಚೆಂದ್ರಮಾಡ ಕೆ. ನಂಜಪ್ಪ, ನೆಲ್ಲಚಂಡ ಎಂ. ಭೀಮಯ್ಯ, ಕಾಂಡAಡ ಎಂ. ಚರ್ಮಣ, ಕಾಳೇಂಗಡ ಬಿ. ತಿಮ್ಮಯ್ಯ, ಬೊಳ್ಳೆಪಂಡ ಎಂ. ಸುರೇಶ್, ಮೇಕೇರಿರ ಪಾಲಿ ಸುಬ್ರಮಣಿ, ಪಟ್ಟಡ ವಿ. ದಿವ್ಯಾ, ಸಿ.ಇ.ಓ. ಅಕ್ಕಮ್ಮ, ವ್ಯವಸ್ಥಾಪಕಿ ಟೀನಾ ಉಪಸ್ಥಿತರಿದ್ದರು.