ನಾಪೋಕ್ಲು, ಜು. ೧: ಸ್ಥಳೀಯ ಕೊಡವ ಸಮಾಜದಲ್ಲಿ ಇಲ್ಲಿಯ ಲಯನ್ಸ್ ಕ್ಲಬ್ ಪದಗ್ರಹಣ ಕಾರ್ಯ ಕ್ರಮ ನಡೆಯಿತು. ಮುಖ್ಯ ಅತಿಥಿಗ ಳಾಗಿ ಭಾಗವಹಿಸಿ ಮಾತನಾಡಿದ ಲಯನ್ಸ್ ಉಪರಾಜ್ಯಪಾಲೆ ಭಾರತಿ ಬಿ.ಎಂ., ಸ್ನೇಹ ವಾತ್ಸಲ್ಯದೊಂದಿಗೆ ಸೇವಾ ಮನೋಭಾವವನ್ನು ವೃದ್ಧಿಸಿ ಕೊಂಡು ಸಮಾಜಮುಖಿ ಕೆಲಸ ಮಾಡಲು ಲಯನ್ಸ್ ಕ್ಲಬ್ ಸಹಕಾರಿ ಯಾಗಿದೆ. ಈ ನಿಟ್ಟಿನಲ್ಲಿ ಸಮಾಜದ ಒಳಿತಿಗೆ ಪ್ರತಿಯೊಬ್ಬರು ಲಯನ್ಸ್ ಸಂಸ್ಥೆಯ ಜೊತೆ ಕೈಜೋಡಿಸಿ ಸಹಕರಿ ಸುವಂತೆ ಮನವಿ ಮಾಡಿದರು. ಬಳಿಕ ನೂತನವಾಗಿ ಆಯ್ಕೆಯಾಗಿರುವ ಕ್ಲಬ್ನ ಪದಾಧಿಕಾರಿಗಳಿಗೆ ಪ್ರಮಾಣ ವಚನ ಬೋಧಿಸಿ, ರೂ. ೫ ಸಾವಿರ ದೇಣಿಗೆಯನ್ನು ನಾಪೋಕ್ಲು ಕ್ಲಬ್ನ ಪದಾಧಿಕಾರಿಗಳಿಗೆ ನೀಡಿದರು.
ನಿರ್ಗಮಿತ ಅಧ್ಯಕ್ಷ ಕುಂಡ್ಯೋಳAಡ ಗಣೇಶ್ ಮುತ್ತಪ್ಪÀ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದ ವೇದಿಕೆಯಲ್ಲಿ ಲಯನ್ಸ್ ಕ್ಲಬ್ ಪ್ರಮುಖರಾದ ಕೋಟೆರ ಶಾಶ್ವತ್ ಬೋಪಣ್ಣ, ಅಂಬೆಕಲ್ ನವೀನ್, ವಲಯ ಅಧ್ಯಕ್ಷ ಮುಕ್ಕಾಟಿರ ವಿನಯ್ ಉಪಸ್ಥಿತರಿದ್ದರು.
ನೂತನ ಅಧ್ಯಕ್ಷರಾಗಿ ಕನ್ನಂಬೀರ ಸುಧಿ ತಿಮ್ಮಯ್ಯ, ಕಾರ್ಯದರ್ಶಿ ಮಾದೆಯಂಡ ಕುಟ್ಟಪ್ಪ, ಖಜಾಂಚಿ ಯಾಗಿ ಅಪ್ಪುಮಣಿಯಂಡ ಬನ್ಸಿ ಭೀಮಯ್ಯ, ಲಿಯೋ ಕ್ಲಬ್ನ ನೂತನ ಅಧ್ಯಕ್ಷೆ ಕೇಟೋಳಿರ ಗಾಯನ ಚರ್ಮಣ, ಕಾರ್ಯದರ್ಶಿ ಶಿವಚಾಳಿಯಂಡ ಮಾನ್ಯ ಕಾಳಪ್ಪ, ಖಜಾಂಚಿ ರಿಜ್ವಾನ್, ಉಪಾಧ್ಯಕ್ಷ ಮಾದೆಯಂಡ ರೋಹನ್ ಮಾಚಯ್ಯ, ಲಯನ್ಸ್ ಪ್ರಮುಖ ಸದಸ್ಯರಾದ ಕಲಿಯಂಡ ಬಿ. ಕಾಳಪ್ಪ, ಡಾ. ಬೊಪ್ಪಂಡ ಜಾಲಿ ಬೋಪಯ್ಯ, ಕೇಟೋಳಿರ ಎಸ್. ಕುಟ್ಟಪ್ಪ, ಕಲಿಯಂಡ ಸಾಬು ಅಯ್ಯಣ್ಣ, ಡಾ. ಕೋಟೆರ ಪಂಚಮ್ ತಿಮ್ಮಯ್ಯ ಸೇರಿದಂತೆ ಇತರ ಸದಸ್ಯರು ಹಾಜರಿದ್ದರು. ಕಾರ್ಯಕ್ರಮದಲ್ಲಿ ಶ್ರೀರಕ್ಷಾ ಪ್ರಭಾಕರ್ ಪ್ರಾರ್ಥಿಸಿ, ಮಾಚಯ್ಯ ಧ್ವಜ ವಂದನೆ ನೆರವೇರಿಸಿದರು. ಕುಟ್ಟಪ್ಪ ವಂದಿಸಿದರು.