ಸೋಮವಾರಪೇಟೆ, ಜು. ೨: ಇಲ್ಲಿನ ಗಣಪತಿ ಕ್ಲಾತ್ ಎಂಪೋರಿ ಯಂನ ಮಾಲೀಕ ಕುಮಾರ್ ಅವರು ಸಮೀಪದ ಬೇಳೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ೭೫ ವಿದ್ಯಾರ್ಥಿಗಳಿಗೆ ಉಚಿತವಾಗಿ ಟೀ ಶರ್ಟ್ಗಳನ್ನು ನೀಡಿದರು.

ವಿದ್ಯಾರ್ಥಿಗಳ ಪರವಾಗಿ ಶಾಲಾ ಮುಖ್ಯೋಪಾಧ್ಯಾಯ ಸಿ.ಕೆ. ಶಿವಕುಮಾರ್ ಅವರು ಟೀ ಶರ್ಟ್ಗಳನ್ನು ಸ್ವೀಕರಿಸಿದರು. ಈ ಸಂದರ್ಭ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಮಂಜುನಾಥ್, ತಾಲೂಕು ಅಧ್ಯಕ್ಷ ಬಸವರಾಜು ಅವರುಗಳು ಉಪಸ್ಥಿತರಿದ್ದರು.