ಮಾನವ ಎಂದಾದ ಮೇಲೆ ಆರೋಗ್ಯ ಅತಿ ಮುಖ್ಯ. ಆರೋಗ್ಯವೇ ಮನುಷ್ಯ ಜೀವನದ ಭಾಗ್ಯ. ಆರೋಗ್ಯ ಇಲ್ಲದವನ ಜೀವನ ಒಂದು ರೀತಿಯಲ್ಲಿ ನರಕವೇ ಹೌದು. ಆರೋಗ್ಯಕರ ದೇಹದಲ್ಲಿ ಆರೋಗ್ಯಕರ ಮನಸ್ಸು. ಅಂದರೆ ದೈಹಿಕವಾಗಿ ಆರೋಗ್ಯಕರ ಮನಸ್ಸು. ಅಂದರೆ ದೈಹಿಕವಾಗಿ ಆರೋಗ್ಯದಲ್ಲಿದ್ದರೆ ಮಾನಸಿಕವಾಗೂ ನಾವು ಆರೋಗ್ಯದಲ್ಲಿರುತ್ತೇವೆ. ಮಾನವ ಎಂದಾಗ ಮೇಲೆ ರೋಗ ರುಜಿನಗಳು ಬಂದೇ ಬರುತ್ತವೆ. ನಾವು ನಮ್ಮ ಆರೋಗ್ಯದ ಬಗ್ಗೆ ಎಷ್ಟೇ ಜಾಗ್ರತೆ ವಹಿಸಿದರೂ, ಎಲ್ಲೋ ಒಂದು ಕಡೆ ಎಡವಿದಾಗ ಅನಾರೋಗ್ಯ ನಮ್ಮನ್ನು ಕಾಡುವುದು. ನಾವೆಷ್ಟು ಜಾಗ್ರತೆ ವಹಿಸಿದರೂ ಯಾವುದೋ ಕಾಯಿಲೆ ನಮಗೆ ಬಂದು ಬಿಡಬಹುದು. ಅದು ನಮ್ಮ ಪ್ರಾಣಕ್ಕೆ ಕುತ್ತನ್ನು ತಂದುಬಿಡಬಹುದು. ಆಗ ನಮಗಿರುವ ಒಂದೇ ಒಂದು ಆಶಾಕಿರಣವೆಂದರೆ ವೈದ್ಯರು. ನಮ್ಮ ಆರೋಗ್ಯದಲ್ಲಿ ಏನೇ ಸಮಸ್ಯೆಯಾದರೂ ಮಾನಸಿಕವಾಗಿ ಧೈರ್ಯ ತುಂಬಿ ದೈಹಿಕವಾಗಿ ಔಷಧಿ ನೀಡಿ ನಮ್ಮನ್ನು ರಕ್ಷಿಸುವವರು ವೈದ್ಯರು. ವೈದ್ಯರ ಸೇವೆ ಅಮೂಲ್ಯವಾದುದು. ವೈದ್ಯರು ಪ್ರತ್ಯಕ್ಷವಾಗಿ ನಮ್ಮನ್ನು ರಕ್ಷಿಸುವ ದೇವರು ಎಂದರೂ ತಪ್ಪಾಗಲಿಕ್ಕಿಲ್ಲ. ಹಲವು ಬಾರಿ ಜೀವದ ಆಸೆ ಬಿಟ್ಟಾಗ ರಕ್ಷಿಸಿದಂತಹ ಹಲವಾರು ಉದಾಹರಣೆಗಳು ಸಿಗುತ್ತವೆ. ಯುದ್ಧ, ಗಂಭೀರ ಕಾಯಿಲೆಗಳು ಹರಡಿದಂತಹ ಸಂದರ್ಭಗಳಲ್ಲಿ ವೈದ್ಯರು ರೋಗಿಗಳ ರಕ್ಷಣೆಗಾಗಿ ಪ್ರಾಣ ತ್ಯಾಗ ಮಾಡಿದ ಉದಾಹರಣೆಗಳಿವೆ. ಈ ಹಿಂದೆ ಕೊರೊನಾ ಕಾಯಿಲೆ ವಿಶ್ವದಾದ್ಯಂತ ಹರಡಿದಾಗ ಅದರ ವಿರುದ್ಧ ಹೋರಾಡಿ ರೋಗಿಗಳನ್ನು ರಕ್ಷಿಸುವಲ್ಲಿ ವೈದ್ಯರ ಪಾತ್ರ ಬಹಳ ಮುಖ್ಯವಾದುದು.
ಜುಲೈ ೧ನ್ನು ವೈದ್ಯರ ದಿನವೆಂದು ಆಚರಿಸಲಾಗುವುದು. ಇದನ್ನು ಡಾ. ಬಿ.ಸಿ. ರಾಮ್ ಫಿಜಿಷಿಯನ್ ಅವರ ನೆನಪಿಗಾಗಿ ಡಾಕ್ಟರ್ ಡೇ ಆಚರಿಸಲಾಗುವುದು. ವೈದ್ಯರ ಪ್ರಾಮಾಣಿಕತೆ, ನ್ಯಾಯ, ನೀತಿ, ಸೇವೆ ನೆನೆಯುವ ಸುಸಂದರ್ಭವಾಗಿದೆ. ಈ ಹುದ್ದೆಯಲ್ಲಿರುವವರಿಗೆ ಪೂರ್ಣ ಸೇವಾ ಮನೋಭಾವದ ಅವಶ್ಯಕತೆಯಿದೆ. ಇಲ್ಲಿ ಇನ್ನೊಂದು ಮುಖ್ಯ ಅಂಶವೆAದರೆ ಬಡವ, ಬಲ್ಲಿದರೆನ್ನದೆ ಎಲ್ಲರಿಗೂ ಸಮನಾದ ಚಿಕಿತ್ಸೆ, ಸಮಾನ ಪ್ರೀತಿ, ವಿಶ್ವಾಸ ನೀಡಬೇಕಾಗಿರುವುದು ಅತ್ಯಗತ್ಯ ಹಾಗೂ ಕರ್ತವ್ಯ. ವೈದ್ಯರ ಬಳಿ ಹೋಗುವ ರೋಗಿಗಳಿಗೆ ಕೆಲವೊಂದು ಬಾರಿ ಚಿಕಿತ್ಸೆಗಿಂತ ಅವರು ನೀಡುವ ಪ್ರೀತಿ, ವಿಶ್ವಾಸ, ನಡವಳಿಕೆಗಳಿಂದಲೇ ಹುಷಾರಾಗುವ ಸಂದರ್ಭಗಳೂ ಇವೆ. ಸೇವಾ ಮನೋಭಾವ ಹೊಂದಿರುವ ವೈದ್ಯರುಗಳಿಗೋಸ್ಕರ ಈ ವೈದ್ಯರ ದಿನ.
ಡಾ. ಬಿ.ಸಿ. ರಾಯ್ ಅವರು ೧೮೮೨ನೇ ಇಸವಿಯಲ್ಲಿ ಜನಿಸಿದರು. ಇವರ ಪೂರ್ಣ ನಾಮಧೇಯ ಬಿಧಾನ್ ಚಂದ್ರರಾಯ್. ಇವರು ವೈದ್ಯಕೀಯ, ರಾಜಕೀಯ ಕ್ಷೇತ್ರಗಳಲ್ಲಿ ಬೆಳಗಿದವರು. ಬಿ.ಸಿ. ರಾಯ್ ಗಾಂಧೀಜಿಯವರ ವೈಯಕ್ತಿಕ ವೈದ್ಯರಾಗಿದ್ದರು. ಡಾ. ಬಿ.ಸಿ. ರಾಯ್ ಅವರು ೧೯೪೮ ರಲ್ಲಿ ಪಶ್ಚಿಮ ಬಂಗಾಳದ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದರು. ೧೯೬೧ ರಲ್ಲಿ ಭಾರತ ರತ್ನ ಪ್ರಶಸ್ತಿ ನೀಡಿ ಅವರನ್ನು ಗೌರವಿಸಲಾಯಿತು. ಇವರು ಎಂ.ಆರ್.ಸಿ.ಪಿ. ಮತ್ತು ಎಫ್.ಆರ್.ಸಿ.ಎಸ್.ನ್ನು ಒಂದೇ ವರ್ಷದಲ್ಲಿ ಪೂರೈಸಿದ ಪ್ರಥಮ ಭಾರತೀಯರಾಗಿದ್ದಾರೆ.
೧೯೩೧ ರಲ್ಲಿ ಕಲ್ಕತ್ತಾದ ಮೇಯರ್ ಆಗಿಯೂ ಸೇವೆ ಸಲ್ಲಿಸಿದ್ದಾರೆ. ಬಿ.ಸಿ. ರಾಯ್ ಅವರ ನೆನಪಿಗೋಸ್ಕರ ಈ ದಿನವನ್ನು ಆಚರಿಸಲಾಗುತ್ತದೆ.
ತಮ್ಮ ಸೇವೆಯಿಂದಲೇ ಪ್ರಸಿದ್ಧರಾದವರು ಆಲ್ಬರ್ಟ್ ಶ್ವೆಯಿಟ್ಸರ್. ಜನಿಸಿದ್ದು ಆಲ್ಸೇಶ್ ಪ್ರಾಂತ್ಯ ಕೇಸರ್ ಬರ್ಗ್ ಎಂಬ ಸಣ್ಣದೊಂದು ಹಳ್ಳಿಯಲ್ಲಿ. ಜನವರಿ ೧೪, ೧೮೭೫, ತಂದೆ ಲೂಯಿಸ್ ಶ್ವೆಯಿಟ್ಸರ್ ಆಲ್ಬರ್ಟ್ ಶ್ವೆಯಿಟ್ಸರ್ ವೈದ್ಯಕೀಯ ಶಾಸ್ತç, ತತ್ವಶಾಸ್ತç, ಧರ್ಮಶಾಸ್ತç ಕ್ಷೇತ್ರಗಳಲ್ಲಿ ಸಾಕಷ್ಟು ಕೆಲಸ ಮಾಡಿದ್ದಾರೆ. ಶ್ವೆಯಿಟ್ಸರ್ ಅವರು ಆಫ್ರಿಕಾದ ಲ್ಯಾಂಬರೀನಯಲ್ಲಿ ನೀಗ್ರೋ ಜನರಿಗೆ ೫೨ ವರ್ಷ ನಿಸ್ವಾರ್ಥ ವೈದ್ಯಕೀಯ ಸೇವೆ ಸಲ್ಲಿಸಿ ಪ್ರಪಂಚದಾದ್ಯAತ ಹೆಸರಾದವರು. ಇವರಿಗೆ ೧೯೫೨ ರಲ್ಲಿ ನೋಬಲ್ ಶಾಂತಿ ಪಾರಿತೋಷಕ ಲಭಿಸಿತು. ಡಾ. ಆಲ್ಬರ್ಟ್ ಶ್ವೆಯಿಟ್ಸರ್ ಅವರು ವೈದ್ಯಕೀಯ ಕ್ಷೇತ್ರದಲ್ಲಿ ಸಲ್ಲಿಸಿದ ಸೇವೆ ಅಜರಾಮರ.
ಇದೇ ರೀತಿ ವೈದ್ಯಕೀಯ ಕ್ಷೇತ್ರದಲ್ಲಿ ದುಡಿದವರು, ದುಡಿಯುವವರು, ದುಡಿಯುತ್ತಿರುವವರು ಸಾಕಷ್ಟು ಜನರಿದ್ದಾರೆ. ವೈದ್ಯಕೀಯ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದವರಿಗೆ ಡಾ. ಬಿ.ಸಿ. ರಾಯ್ ಪ್ರಶಸ್ತಿ ನೀಡಲಾಗುತ್ತದೆ. ಉತ್ತಮ ವೈದ್ಯಕೀಯ ಶಿಕ್ಷಕ, ಉತ್ತಮ ವೈದ್ಯ ಮುಂತಾದ ಪ್ರಶಸ್ತಿ ನೀಡುತ್ತಾರೆ. ಸಮಾಜ ವೈದ್ಯಕೀಯ ವಿಭಾಗಕ್ಕೆ ಸಂಬAಧಿಸಿದAತೆ ಡಾ. ಕೆ.ಎ. ಅಶೋಕ್ ಪೈ, ಶಿವಮೊಗ್ಗ ಇವರಿಗೆ ಲಭಿಸಿದೆ. ಸೇವೆಗೈಯುತ್ತಿರುವ, ಗೈದಿರುವ ಡಾಕ್ಟರ್ಗಳ ನೆನಪಿಗಾಗಿ ಈ ವೈದ್ಯರ ದಿನಾಚರಣೆ.
ನಿಸ್ವಾರ್ಥ ಸೇವೆ ಸಲ್ಲಿಸಿ, ರೋಗಿಗಳ, ಜನರ ಪ್ರೀತಿ ಸಂಪಾದಿಸಬೇಕಾದ ಮಹತ್ತರ ಜವಾಬ್ದಾರಿ ವೈದ್ಯರ ಮೇಲೆ ಇದೆ ಹಾಗೂ ಅವರ ವೃತ್ತಿಗೆ ನ್ಯಾಯ ಸಲ್ಲಿಸಬೇಕಾದ ಕರ್ತವ್ಯವು ಅವರದ್ದಾಗಿದೆ. ಅಂತಹ ವೈದ್ಯರು ಜನರ ಪ್ರೀತಿ, ವಿಶ್ವಾಸಗಳಿಸಿ, ವೈದ್ಯರ ದಿನಾಚರಣೆಯಂದು ಅರ್ಥಪೂರ್ಣವಾಗಿ ಆಚರಣೆಗೆ ಅರ್ಹರಾಗುತ್ತಾರೆ. ಈ ದಿನ ವೈದ್ಯರ ಸೇವೆಯನ್ನು ನೆನೆಯುತ್ತಾ ಅವರ ಸೇವೆಯನ್ನು ಪ್ರೋತ್ಸಾಹಿಸಿ, ಅಭಿನಂದಿಸೋಣ.
- ಹರೀಶ್, ಸರಳಾಯ, ಮಡಿಕೇರಿ.