ಮಡಿಕೇರಿ, ಜೂ. ೩೦: ಮೂರ್ನಾಡು ಕೊಡವ ಸಮಾಜದಲ್ಲಿ ಲಯನ್ಸ್ ಕ್ಲಬ್ ಮೂರ್ನಾಡು ವತಿಯಿಂದ ೨೦೨೩-೨೦೨೪ನೇ ಸಾಲಿನ ನೂತನ ಪದಾಧಿಕಾರಿಗಳ ಪ್ರಮಾಣ ವಚನ ಸ್ವೀಕಾರ ಕಾರ್ಯಕ್ರಮ ನಡೆಯಿತು.
ಸಮಾರಂಭದಲ್ಲಿ ಕ್ಲಬ್‌ನ ಮೊದಲ ಮಹಿಳಾ ಅಧ್ಯಕ್ಷೆಯಾಗಿ ಬಡುವಂಡ ಬಿಂದು ಗಣಪತಿ (ಬೋಪಣ್ಣ) ಅಧಿಕಾರ ಸ್ವೀಕರಿಸಿದರು. ಕಾರ್ಯದರ್ಶಿಯಾಗಿ ಅಮ್ಮಾಟಂಡ ಎಸ್. ಚೆಂಗಪ್ಪ, ಖಜಾಂಚಿಯಾಗಿ ಪಳಂಗAಡ ಪ್ರಕಾಶ್ ಕಾವೇರಪ್ಪ ಅವರು ಪ್ರಮಾಣ ವಚನ ಸ್ವೀಕರಿಸಿದರು. ಪ್ರತಿಜ್ಞಾ ವಿಧಿಯನ್ನು ಹಿಂದಿನ ಜಿಲ್ಲಾ ಗವರ್ನರ್ ಕವಿತಾ ಶಾಸ್ತಿç ಬೋಧಿಸಿದರು.
ಸಮಾರಂಭದಲ್ಲಿ ಲಯನ್ಸ್ ವಲಯದ ಅಧ್ಯಕ್ಷರು, ಜೋನ್ ಅಧ್ಯಕ್ಷರು ಮತ್ತು ಜಿಲ್ಲೆಯ ವಿವಿಧ ಕ್ಲಬ್‌ಗಳ ಅಧ್ಯಕ್ಷರು ಉಪಸ್ಥಿತರಿದ್ದರು. ಈ ಸಂದರ್ಭ ಕವಿತಾ ಶಾಸ್ತಿç ಅವರು ಲಯನ್ಸ್ ಸಂಸ್ಥೆಯ ಹಿರಿಮೆ ಮತ್ತು ಅದರ ಸ್ಥಾಪನೆಯ ನಂತರದ ಪ್ರಭಾವದ ಬಗ್ಗೆ ಮಾತನಾಡಿದರು. ಸಭೆಯನ್ನುದ್ದೇಶಿಸಿ ಮಾತನಾಡಿದ ಬಿಂದು ಗಣಪತಿ ಅವರು, ಈ ಹುದ್ದೆಯು ಹೆಚ್ಚಿನ ಜವಾಬ್ದಾರಿಯೊಂದಿಗೆ ಬರುತ್ತದೆ ಎಂದು ಹೇಳಿದರು. ಈ ವರ್ಷವನ್ನು ಯಶಸ್ವಿಗೊಳಿಸಲು ಕ್ಲಬ್‌ನ ಎಲ್ಲಾ ಸದಸ್ಯರ ಬೆಂಬಲವನ್ನು ಕೋರಿದರು.
ಸಮಾರಂಭದಲ್ಲಿ ಹಿಂದಿನ ಪದಾಧಿಕಾರಿಗಳ ತಂಡದ ಅಧ್ಯಕ್ಷರಾದ ಪಳಂಗAಡ ಪ್ರಕಾಶ್ ಕಾವೇರಪ್ಪ ಅವರು, ಕಾರ್ಯದರ್ಶಿ ಬಡುವಂಡ ಬಿಂದು ಗಣಪತಿ ಮತ್ತು ಖಜಾಂಚಿ ಮುಲ್ಲೇರ ಪಾಪಾ ಕಾವೇರಪ್ಪ ಅವರನ್ನು ಸನ್ಮಾನಿಸಲಾಯಿತು. ೪೩ನೇ ವರ್ಷದಲ್ಲಿ ಲಯನ್ಸ್ ಕ್ಲಬ್ ಮೂರ್ನಾಡು ತನ್ನ ಮೊದಲ ಮಹಿಳಾ ಅಧ್ಯಕ್ಷೆಯೊಂದಿಗೆ ಇತಿಹಾಸಕ್ಕೆ ಸಾಕ್ಷಿಯಾಗಿದೆ. ಮುಂಬರುವ ವರ್ಷದಲ್ಲಿ ಕ್ಲಬ್ ಮೂರ್ನಾಡು ಮತ್ತು ಸುತ್ತಮುತ್ತಲಿನ ಸಮುದಾಯಕ್ಕೆ ಅನುಕೂಲವಾಗುವಂತಹ ಸೇವಾ ಚಟುವಟಿಕೆಗಳನ್ನು ಹಮ್ಮಿಕೊಳ್ಳಲಿರುವುದಾಗಿ ಕ್ಲಬ್‌ನ ಪ್ರಕಟಣೆ ತಿಳಿಸಿದೆ.